November 9, 2024

Vokkuta News

kannada news portal

ಉಳ್ಳಾಲ ನಿವಾಸಿ ಯು.ಕೆ.ಅಬ್ದುಲ್ಲಾ ಕೊಟ್ಟಾರ ನಿಧನ: ಬಸ್ತಾನುಲ್ ಉಲೂಮ್ ಸಂಸ್ಥೆ ಸಂತಾಪ.

ಉಳ್ಳಾಲ: ಉಳ್ಳಾಲ ಕೊಟ್ಟಾರ ನಿವಾಸಿ ಯುಕೆ ಅಬ್ದುಲ್ಲಾ ಕೊಟ್ಟಾರ(65 ವ ) ರವರು ಅಲ್ಪ ಕಾಲದ ಅಸೌಖ್ಯದಿಂದ ತಾರೀಕು 18ರಂದು ಸೋಮವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಅವರು ಪತ್ನಿ ,ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಉಳ್ಳಾಲ ಪೇಟೆ ರಹ್ಮಾನಿಯಾ ಜುಮಾ ಮಸೀದಿ ಕಮಿಟಿಯಲ್ಲಿ ಸುದೀರ್ಘ ಕಾಲ ಸದಸ್ಯರಾಗಿ ಧಾರ್ಮಿಕ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಬಸ್ತಾನುಲ್ ಉಲೂಂ ಯೂತ್ ಅಸೋಸಿಯೇಷನ್ ತೀರ್ವ ಸಂತಾಪ ವ್ಯಕ್ತಪಡಿಸಿದೆ.