January 24, 2025

Vokkuta News

kannada news portal

ತಲಪಾಡಿ ಗ್ರಾಮಾಭಿವೃದ್ಧಿ: ಅಧ್ಯಕ್ಷ ಟಿ.ಇಸ್ಮಾಯಿಲ್ ನೇತೃತ್ವದಲ್ಲಿ ಸಮಗ್ರ ನಿಧಿ ಅನುಷ್ಟಾನತೆ.

ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯತ್ ಆಡಳಿತವನ್ನು ಹಾಲಿ ಉದಯೋನ್ಮುಖ ನಿರ್ಧಿಷ್ಟ ಪಕ್ಷವೊಂದು ನಡೆಸುತ್ತಿದ್ದು,ವಾರ್ಡ್ ವಾರು ನಿಧಿ ಬಳಕೆಯನ್ನು ಸಮಗ್ರವಾಗಿ ಗ್ರಾಮಾಭಿವೃದ್ಧಿ ಕಾಮಗಾರಿಗಾಗಿ ಬಳಸಲಾಗಿದೆ. ಟಿ . ಇಸ್ಮಾಯಿಲ್ ನೇತ್ರತ್ವದಲ್ಲಿನ ಆಡಳಿತದಲ್ಲಿ ವಿವಿಧ ಯೋಜನೆಗಳ ಪೂರ್ಣ ಅನುಷ್ಠಾನಕ್ಕೆ ಗ್ರಾಮ ಆಡಳಿತದಲ್ಲಿ ಪ್ರಯತ್ನಿಸಲಾಗಿದೆ.

ವಾರ್ಡ್ ವಾರು ಮೂಲ ಭೂತ ಸೌಕರ್ಯಗಳ ಪೂರೈಕೆಗೆ ಆದ್ಯತೆ ನೀಡುವುದರೊಂದಿಗೆ, ಗ್ರಾಮ ನೈರ್ಮಲ್ಯ, ದುರಸ್ತಿ, ಚರಂಡಿ ನಿರ್ಮಾಣ, ದಾರಿ ದೀಪ ಅಳವಡಿಕೆ, ಕುಡಿಯುವ ನೀರು ಪೂರೈಕೆ, ಘನ ತ್ಯಾಜ್ಯ ವಿಲೇವಾರಿ ಇತ್ಯಾದಿ ಗಳಿಗೆ ಆದ್ಯತೆ ನೀಡಲಾಗಿದೆ.

ಗ್ರಾಮ ಅಭಿವೃದ್ಧಿಯ ನಿಟ್ಟಿನಲ್ಲಿ ಆಡಳಿತ ಪಕ್ಷದೊಂದಿಗೆ ವಿರೋಧ ಪಕ್ಷಗಳು ಸಮನ್ವಯತೆ ಪಾಲಿಸುತ್ತಿದ್ದು, ಗ್ರಾಮ ನಿಧಿ ಬಳಕೆಯಲ್ಲಿ ಸಾರ್ವಜನಿಕ ಉಪಯುಕ್ತ ಕಾಮಗಾರಿಗಳು ಮೂಡಿ ಬಂದಿದೆ. ಗ್ರಾಮ ಸಭೆ, ಸಾರ್ವಜನಿಕ ಅವಹಾಲು ಸ್ಪೀಕರಣೆಯಲ್ಲಿ ಆದ್ಯತೆ ಮೇಲೆ ಲಭ್ಯವಿರುವ ನಿಧಿ ಬಳಕೆ ಮಾಡಿ ಗ್ರಾಮಾಭಿವೃದ್ಧಿ ಕೈಗೊಳ್ಳಲಾಗಿದೆ.