January 29, 2025

Vokkuta News

kannada news portal

ಹಕ್ಕು ಸಂಘಟನೆಗಳಿಂದ ಚುನಾವಣಾ ನಿಯಮ ವ್ಯತ್ಯಯತೆ ವಿರುದ್ಧ ಸಾಮೂಹಿಕ ಅವಹಾಲು ಸಲ್ಲಿಕೆ, ಕಾರ್ಡ್ ಚಳುವಳಿ.

ಬೆಂಗಳೂರು: 11ಮೇ 2024 ರಂದು ಭಾರತದ ಚುನಾವಣಾ ಆಯೋಗಕ್ಕೆ ತನ್ನ ಜವಾಬ್ದಾರಿ ನೆನಪಿಸಲು ಹಲವಾರು ಜನಪರ ಸಂಘಟನೆಗಳು ಜಂಟಿ ಅಭಿಯಾನವನ್ನು ಕೈಗೊಂಡವು . ಬೆಂಗಳೂರು, ದೆಹಲಿ, ಅಹಮದಾಬಾದ್, ಮುಂಬೈ, ಹೈದರಾಬಾದ್ ಮುಂತಾದ ನಗರಗಳಲ್ಲಿ ನಾಗರಿಕರು ತಮ್ಮ ರಾಜ್ಯ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು. ನಾಗರೀಕ ಸಂಸ್ಥೆಗಳು ಹಾಗು ಕಾಳಜಿಯುಳ್ಳ ನಾಗರಿಕರನ್ನು ಒಳಗಂಡ ಈ ತಂಡಗಳು ಪೋಸ್ಟ್ ಕಾರ್ಡ್ ಅಭಿಯಾನದ ಮೂಲಕ ಚುನಾವಣಾ ಆಯೋಗಕ್ಕೆ ಭಯ ಭೀತಿ ಇಲ್ಲದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಅಥವಾ ರಾಜೀನಾಮೆ ನೀಡಿ ಎನ್ನುವ ಸಂದೇಶವನ್ನು ಕಳುಹಿಸಲಾಯಿತು.

ಪ್ರಸ್ತುತ ನಡೆಯಿತ್ತಿರುವ ಸಾರ್ವತ್ರಿಕ ಚುನಾವಣೆಯ ಕುರಿತಂತೆ ಹಲವಾರು ಆತಂಕಗಳಿವೆ ಎಂಬ ಬಗ್ಗೆ,
1) ಮತದಾನ ಪ್ರಮಾಣದ ಅಂಕಿ ಅಂಶಗಳಲ್ಲದೆ ಕೇವಲ ಶೇಖಡಾವಾರುಗಳನ್ನು ಹಂಚಿಕೊಳ್ಳಲಾಗಿದೆ, ಇದು ಮತ ಎಣಿಕೆಯನ್ನು ತಿರುಚುವುದರ ಬಗ್ಗೆ ಕಳವಳ ಮೂಡಿಸಿದೆ
2019ದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ, 373 ಲೋಕಸಭಾ ಕ್ಷೇತ್ರಗಳಲ್ಲಿ ಪೋಲ್ ಆದ ಮತಗಳು ಹಾಗು ಎಣಿಕೆ ಮಾಡಿದ ಮತಗಳ ಸಂಖ್ಯೆ ಹೊಂದಾಣಿಕೆಯಿರಲಿಲ್ಲವೆಂದು ವರದಿಗಳು ಸೂಚಿಸಿವೆ. ಕಾಂಚೀಪುರಂ ಕ್ಷೇತ್ರದಲ್ಲಿ 18,000ಕ್ಕು ಹೆಚ್ಚುವರಿ ಮತಗಳನ್ನು ಎಣಿಸಲಾಯಿತು. ಅದೇ ರೀತಿ, ಶ್ರೀಪೆರಂಬಲೂರ್ ಕ್ಷತೆರದಲ್ಲಿ ಪೋಲಾದ ಮತಗಳಿಗಿಂತ 14,512 ಹೆಚ್ಚು ಮತಗಳನ್ನು ಎಣಿಸಲಾಯಿತು. ಆದರೂ ಕೂಡ, ಈ ವರೆಗೂ ಚುನಾವಣಾ ಆಯೋಗವು ಈ ಕುರಿತು ಯಾವುದೇ ರೀತಿಯ ಸ್ಪಷ್ಟನೆಯನ್ನು ನೀಡಿರುವುದಿಲ್ಲ.
2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಪೋಲಾದ ಮತಗಳ ಸಂಖ್ಯೆಯನ್ನು ಆಯೋಗವು ಈ ವರೆಗೂ ಬಿಡುಗಡೆ ಮಾಡಿರುವುದಿಲ್ಲ ಮತ್ತು ಕೇವಲ ಮತದಾನ ಪ್ರಮಾಣದ ಶೇಖಡಾವಾರುಗಳನ್ನು ಹಂಚಿಕೊಳ್ಳಲಾಗಿದೆ. ಇದು ಮತ ಎಣಿಕೆಯನ್ನು ತಿರುಚುವುದರ ಬಗ್ಗೆ ಕಳವಳ ಮೂಡಿಸುತ್ತದೆ.
2) ದ್ವೇಷ ಭಾಷಣಗಳನ್ನು ನಿಯಂತ್ರಿಸುವುದರಲ್ಲಿ ವಿಫಲರಾಗಿದ್ದಾರೆ
ನರೇಂದ್ರ ಮೋದಿಯವರು ಕಳೆದ ಕೆಲವು ದಿನಗಳಲ್ಲಿ ಸಮಾಜದ ಹಲವಾರು ಸಮುದಾಯಗಳ ನಡುವೆ ದ್ವೇಷವನ್ನು ಎತ್ತಿಕಟ್ಟುವ ಹಾಗೂ ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಉದ್ದೇಶದೊಂದಿಗೆ ಹಲವಾರು ಭಾಷಣಗಳನ್ನು ಮಾಡಿರುತ್ತಾರೆ. ಇದು ಮಾದರಿ ನೀತಿ ಸಂಹಿತೆಯ ನೇರ ಉಲ್ಲಘಂಯಾಗುತ್ತದೆ. ಅದೇ ರೀತಿ, ಪ್ರಜಾ ಪ್ರತಿನಿಧಿ ಕಾಯ್ದೆ ಹಾಗೂ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗವು ನೀಡಿರುವ ಅಡ್ವೈಸರಿ ಯ ಉಲ್ಲಂಘನೆ ಕೂಡ ಆಗುತ್ತದೆ. ಆದರೂ ಸಹ, ಈ ವರೆಗೂ ತಮ್ಮ ಪಕ್ಷಕ್ಕೆ ಸ್ಟಾರ್ ಪ್ರಚಾರಕ ಆಗಿರುವ ಮೋದಿಯವರಿಗೆ ಆಯೋಗವು ನೋಟೀಸ್ ಸಹ ಕಳುಹಿಸಿರುವುದಿಲ್ಲ. ಅದೇ ರೀತಿ, ಭಾರತೀಯ ಜನತಾ ಪಕ್ಷವು ನಮ್ಮ ರಾಜ್ಯದಲ್ಲಿ ದ್ವೇಷ ಹಬ್ಬಿಸುವ ಉದ್ದೇಶದೊಂದಿಗೆ ವಿಡಿಯೋಗಳನ್ನು , ಟ್ವೀಟ್ ಗಳನ್ನೂ ಪ್ರಕಟಿಸಿರುತ್ತದೆ. 04 ಮೇ 2024 ರಂದು ಬಿಜೆಪಿ ಕರ್ನಾಟಕ ಎಕ್ಸ್ ಹಾಗೂ ಫೇಸ್ ಬುಕ್ ಹ್ಯಾಂಡಲ್ಗಳಲ್ಲಿ ಹಾಕಿದ ವಿಡಿಯೋ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದರೂ,07.05.2024 ರಂದು ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಮುಗಿಯುವ ವರೆಗೂ ವಿಡಿಯೋವನ್ನು ತೆಗೆದಿರುವುದಿಲ್ಲ. ಭಾರತೀಯ ಜನತಾ ಪಕ್ಷವು ಧಾರ್ಮಿಕ ಚಿಹ್ನೆಗಳನ್ನು ಬಳಸಿ ಮತ ಕೇಳಿ, ಅನೇಕ ದ್ವೇಷ ಭಾಷಣಗಳನ್ನೂ ನೀಡಿದೆ – ಆದರೆ ಪಕ್ಷದ ವಿರುದ್ಧ ಆಯೋಗವು ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಮುಂತಾದ ಹಲವಾರು ವಿಪಕ್ಷಗಳ ಪ್ರಣಾಳಿಕೆಗಳ ಕುರಿತು ಸುಳ್ಳು ಸುದ್ಧಿ ಹರಡಿಸಿರುವುದಕ್ಕಾಗಿ ಮತ್ತು ಅದರಲ್ಲಿರುವ ವಿಷಯಗಳನ್ನು ತಿರುಚಿರುವುದರಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಈ ರೀತಿ ತಮ್ಮ ಭಾಷಣಗಳು, ಸೋಶಿಯಲ್ ಮೀಡಿಯಾ ಪೋಸ್ಟ್ಗಳು ಹಾಗು ಜಾಹಿರಾತುಗಳ ಮೂಲಕ ದ್ವೇಷವನ್ನು ಹರಡಿದರೂ ಸಹ ಅವರ ವಿರುದ್ಧ ಯಾವುದೇ ಕಠಿಣ ಕ್ರಮವನ್ನು ಜರುಗಿಸಿರುವುದಿಲ್ಲ.
3) ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಕೇವಲ ವಿಪಕ್ಷಗಳ ವಿರುದ್ಧ ಕ್ರಮ, ಬಿಜೆಪಿಯ ವಿರುದ್ಧ ಕ್ರಮವಿಲ್ಲ.
ಕಾಂಗ್ರೆಸ್ಸಿನ ರಂದೀಪ್ ಸುರ್ಜೆವಾಲಾ, ಭಾರತ ರಾಷ್ಟ್ರ ಸಮಿತಿಯ ಕೆ.ಸಿ. ಚಂದ್ರಶೇಖರ್ ರಾವ್ ಮುಂತಾದವರನ್ನು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡುವುದರಿಂದ ನಿಷೇಧಿಸಲಾಯಿತು. ಆದರೆ, ಬಿಜೆಪಿಯು ಈ ಎರಡು ಉಲ್ಲಂಘನಗಳಿಗಿಂತ ಗಂಭೀರವಾದ ಕೃತ್ಯಗಳನ್ನು ಮಾಡಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ.
4) ಅಸಂವಿಧಾನಿಕ ಜಾಹಿರಾತುಗಳನ್ನು ನಿಯಂತ್ರಿವುದರಲ್ಲಿ ವಿಫಲ
ಮತದಾರರ ಅಭಿಪ್ರಾಯಗಳನ್ನು ಪ್ರಭಾವಿಸಲು ರಾಜಕೀಯ ಪಕ್ಷಗಳು ಜಾಹೀರಾತು ಮತ್ತು ಉದ್ದೇಶಿತ ಆನ್‌ಲೈನ್ ಪ್ರಚಾರಗಳಿಗೆ ಕೈಗೊಳ್ಳುವ ಖರ್ಚುಗಳು ಸಾಕಷ್ಟು ಪರಿಶೀಲನೆಗೆ ಒಳಪಟ್ಟಿಲ್ಲ ಎಂದು ವರದಿಯಾಗಿದೆ. ಆನ್ಲೈನ್ ಜಾಹಿರಾತುಗಳು ಮತ್ತು ತಾರ್ಗೆಟ್ ಡ್ ಕ್ಯಾಂಪೇನ್ ಗೆ ರಾಜಕೀಯ ಪಕ್ಷಗಳ ಖರ್ಚುಗಳನ್ನು ನಿಯಂತ್ರಿಸಲು ಆಯೋಗವು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಈ ವರೆಗೂ, ಇಂತಹ ಜಾಹಿರಾತುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
5) ಅಭ್ಯರ್ಥಿಗಳು ನಾಮಪತ್ರ ಹಿಂಪಡೆದು ಕಣದಿಂದ ಹಿಂದೆ ಸರಿಯುವದರ ಹಾಗು ಅವರೆಲ್ಲರೂ ಎದುರಿಸುವ ಬೆದರಿಕೆಗಳನ್ನು ಪರಿಹರಿಸಲು ವಿಫಲವಾಗಿದೆ
ಗುಜರಾತಿನ ಗಾಂಧಿನಗರ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಅನ್ಯ ಪಕ್ಷಗಳ ಅಭ್ಯರ್ಥಿಗಳು ಬಿಜೆಪಿ ಕಡೆಯಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ . ಇನ್ನು ಕೆಲವರು ಕೊನೆಯ ಘಳಿಗೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸೂರತ್ ಹಾಗು ಇಂದೋರ್ ಲೋಕ ಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಸದೆಯೇ ಬಿಜೆಪಿಯ ಅಭ್ಯರ್ಥಿಗಳು ಲೋಕ ಸಭೆಗೆ ಆಯ್ಕೆಯಾಗಿದ್ದಾರೆ.
ಅಭ್ಯರ್ಥಿಗಳಿಗೆ ಬೆದರಿಕೆ ಹಾಕುವುದು ಹಾಗು ಇನ್ನಿತರ ಆಮಿಷಗಳನ್ನು ಒಡ್ಡುವುದು ಪ್ರಜಾ ಪ್ರತಿನಿಧಿ ಕಾಯ್ದೆ ನ ಉಲ್ಲಂಘನೆಯಾಗುತ್ತದೆ. ಆದರೂ ಕೂಡ, ಈ ಕುರಿತು ಚುನಾವಣಾ ಆಯೋಗವು ಯಾವುದೇ ರೀತಿಯ ತನಿಖೆಯನ್ನು ಕೈಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ, ಈ ಕೆಳಗಿನ ಸಂಘಟನೆಗಳು ಮೇ 11ರಂದು ಚುನಾವಣಾ ಆಯೋಗ ತನ್ನ ಜವಾಬ್ದಾರಿಗಳನ್ನು ಪೂರೈಸಬೇಕೆಂದು ಜಂಟಿ ಅಭಿಯಾನ ಕೈಗೊಂಡಿವೆ :
ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟಿಎಸ್,ಬಹುತ್ವ ಕರ್ನಾಟಕ,
ನಾವೆದ್ದು ನಿಲ್ಲದಿದ್ದರೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ,
ದ್ವೇಷ ಭಾಷಣ ವಿರುದ್ಧ ಜನಾಂದೋಲನ ( ಹೇಟ್ ಸ್ಪೀಚ್ ಬೇಡ ),ಆಲ್ ಇಂಡಿಯಾ ಲಾಯೆರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ , ಎದ್ದೇಳು ಕರ್ನಾಟಕ, ಕಲೆಕ್ಟಿವ್, ಬೆಂಗಳೂರು,
ಶ್ರಮಿಕ್ ಮುಕ್ತಿ ದಲ್, ಯಂಗ್ ಲೀಡರ್ಸ್ ಆಫ್ ಆಕ್ಟಿವ್ ಸಿಟಿಝೆನ್ಷಿಪ್, ಭಾರತ್ ಬಚಾವ್ ಆಂದೋಲನ್, ನ್ಯೂ ಟ್ರೇಡ್ ಯೂನಿಯನ್ ಇನಿಶಿಯೇಟಿವ್,
ಇಂಡಿಯನ್ ಮುಸ್ಲಿಮ್ಸ್ ಫಾರ್ ಸೆಕ್ಯುಲರ್ ಡೆಮಾಕ್ರಸಿ,ಸಿಟಿಜನ್ಸ್ ಫಾರ್ ದಿ ಕಾನ್ಸ್ಟಿಟ್ಯೂಷನ್, ದಿ ಬಾಂಬೆ ಕ್ಯಾಥೊಲಿಕ್ ಸಭಾ, ಸೆಂಟರ್ ಫಾರ್ ಪ್ರೋಮೊಟಿಂಗ್ ಡೆಮಾಕ್ರಸಿ,
ಪಾನಿ ಹಕ್ ಸಮಿತಿ, ನ್ಯಾಷನಲ್ ಅಲಯನ್ಸ್ ಫಾರ್ ಪೀಪಲ್ಸ್ ಮೂವ್ಮೆಂಟ್ಸ್ ,ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ,ಪ್ರಶಾಂತ್, ಬೆಂಗಳೂರಿನಲ್ಲಿ ಶನಿವಾರದಂದು ನೂರಕ್ಕೂ ಹೆಚ್ಚಿನ ಜನರ ತಂಡವೊಂದು ಚುನಾವಣಾಧಿಕಾರಿ ಕಚೇರಿಗೆ ತಮ್ಮ ಮನವಿಯನ್ನು ಸಲ್ಲಿಸಿತು. ಚುನಾವಣಾಧಿಕಾರಿಯವರು ತಂಡವನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೂ, ಮನವಿಯನ್ನು ಅವರ ಗಮನಕ್ಕೆ ತರುವುದಾಗಿ ಆಯೋಗದ ಅಧಿಕಾರಿಗಳು ಭರವಸೆ ನೀಡಿರುತ್ತಾರೆ. ಮನವಿ ಸಲ್ಲಿಸಿದ ನಂತರ, ನಾಗರಿಕ ಸಂಸ್ಥೆಗಳ ತಂಡವು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರವರ ಕಚೇರಿಯ ಬಳಿ ಇರುವ ಅಂಚೆ ಪೆಟ್ಟಿಗೆಯಲ್ಲಿ ‘ ಗ್ರೋ ಎ ಸ್ಪೈನ್ ಆರ್ ರಿಸೈಯನ್ ‘ ಯೆನ್ನುವ ಸಂದೇಶದೊಂದಿಗೆ ಭಾರತದ ಚುನಾವ ಆಯೋಗಕ್ಕೆ ಪೋಸ್ಟ್ ಕಾರ್ಡ್-ಗಳನ್ನು ಕಳುಹಿಸಿತು.