June 22, 2024

Vokkuta News

kannada news portal

ಜಿಲ್ಲೆಯಿಂದ ಐವನ್ ಡಿ ಸೋಜಾರಿಗೆ ವಿಧಾನ ಪರಿಷತ್ ಸದಸ್ಯತ್ವ ಚುನಾವಣೆಗೆ ಕಾಂಗ್ರೆಸ್ ನಿಂದ ಅಭ್ಯರ್ಥಿತನ, ಕೆ.ಅಶ್ರಫ್ ಅಭಿನಂದನೆ.

ಮಂಗಳೂರು: ಕಾಂಗ್ರೆಸ್ ಕೆಪಿಸಿಸಿ ಕಾರ್ಯದರ್ಶಿ, ಎಐಸಿಸಿ ಸದಸ್ಯರಾದ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರಾದ ಶ್ರೀ ಐವನ್ ಡಿಸೋಜ ಅವರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯತ್ವ ಚುನಾವಣೆಗೆ ಅಭ್ಯರ್ಥಿತನ ಲಭ್ಯವಾಗಿದ್ದು, ಜಿಲ್ಲೆಗೆ ಲಭಿಸಿದ ಕೊಡುಗೆಯಾಗಿದೆ. ಕಳೆದ ಆರು ವರ್ಷದ ಹಿಂದಿನ ಅವಧಿಯಲ್ಲಿ ಐವನ್ ಡಿಸೋಜಾ ರವರು ವಿಧಾನ ಪರಿಷತ್ ಸದಸ್ಯರಾದ ಸಂಧರ್ಭದಲ್ಲಿ ಅವರು ಉತ್ತಮ ಅಭಿವೃದ್ಧಿ ಕಾರ್ಯ ವನ್ನು ಕೈಗೊಂಡಿದ್ದರು ಮತ್ತು ವೈದ್ಯಕೀಯ ಮತ್ತು ಆರೋಗ್ಯ ನೆರವು ಕಾರ್ಯಕ್ರಮಕ್ಕೆ ಪ್ರತ್ಯೇಕ ಪೂರಕ ಯೋಜನೆಗಳ ನೆರವು ಕಾರ್ಯಕ್ರಮ ಮತ್ತು ಅನುದಾನ ರೂಪಿಸಿದ್ದರು. ಐವನ್ ಡಿಸೋಜಾ ರಿಗೆ ಲಭ್ಯವಾದ ಅಭ್ಯರ್ಥಿತನಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಹಾಗು ಮಾಜಿ ಮೇಯರ್ ಕೆ.ಅಶ್ರಫ್ ಅಭಿನಂದನೆ ಸಲ್ಲಿಸಿದ್ದಾರೆ.