ಮಂಗಳೂರು : ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ವಕ್ಫ್ ಸ್ಥಿರಾಸ್ತಿ ಅಕ್ರಮ ಒತ್ತುವರಿಯ ಬಗ್ಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡನೆ ಯಾಗಿದ್ದ 2012 ನೇ ಸಾಲಿನಲ್ಲಿ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿಯವರ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್ ತಂಡವು ರಫೀಉದ್ದೀನ್ ಕುದ್ರೋಳಿ ಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಯು ಟಿ ಖಾದರ್ ರವರನ್ನು ಭೇಟಿ ಮಾಡಿ ವಕ್ಫ್ ಆಸ್ತಿಗೆ ಸಂಬಂಧಿಸಿದ ವರದಿಯ ಜ್ಞಾಪಕ ಪತ್ರವನ್ನು ನೀಡಲಾಯಿತು.
ದೇಶದಲ್ಲಿ ವಕ್ಫ್ ಆಸ್ತಿಯ ಬಗ್ಗೆ ನಡೆಯುತ್ತಿರುವ ವಿದ್ಯಮಾನ ಮತ್ತು ರಾಜ್ಯದಲ್ಲಿ ವಕ್ಫ್ ಸಂಬಂಧಿಸಿದ ಅಸ್ತಿಯಿಂದಾಗಿ ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಯಂತಹ ಅವಕಾಶಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಕಾರ್ಯಗಳ ಕುರಿತು ವಿಚಾರ ವಿನಿಮಯ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್ ತಂಡದ ಸದಸ್ಯರಾದ ವಹಾಬ್ ಕುದ್ರೋಳಿ, ರಿಝ್ವಾನ್ ಸಜೀಪ, ಸಲಾಂ ಉಚ್ಚಿಲ್, ರಫೀಕ್ ಪರ್ಲಿಯ ( ಪಬ್ಲಿಕ್ ವಾಯ್ಸ್) ,ಹುಸೈನ್ ಮದನಿನಗರ, ಫಾರೂಕ್ ಸೋಶಿಯಲ್ ಹಾಗೂ ಮುಸ್ತಾಫಾ ಉಳ್ಳಾಲ್ ಉಪಸ್ಥಿತರಿದ್ದರು.
ಇನ್ನಷ್ಟು ವರದಿಗಳು
ಯುನಿವೆಫ್ ಕರ್ನಾಟಕ ಸಂಸ್ಥೆಯ ಸೀರತ್ ಅಭಿಯಾನ ಅಂಗವಾಗಿ ಶಿಕ್ಷಕರ ಮತ್ತು ವಕೀಲರ ಸ್ನೇಹ ಸಮ್ಮಿಲನ ಕಾರ್ಯಕ್ರಮ.
ಈದ್ ಮಿಲಾದ್: ಮುಂಬೈ, ಉಪನಗರಗಳಲ್ಲಿ ರಜೆ ಸೆ.8 ಕ್ಕೆ ಮರುಘೋಷಣೆ, ಮಹಾರಾಷ್ಟ್ರದ ಉಳಿದಡೆ ಸೆ. 5 ರಂದು ರಜೆ.
ದ.ಕ.ಕಾಂಗ್ರೆಸ್ ರಾಜಿನಾಮೆ ಪ್ರಕ್ರಿಯೆಯಿಂದ ಘಾಡ ಪರಿಣಾಮ ಆಗಿದೆ: ಆನ್ ಲೈನ್ ಸಂವಾದದಲ್ಲಿ ಸಿರಾಜ್ ಬಜ್ಪೆ.