November 18, 2024

Vokkuta News

kannada news portal

ಬ್ಯಾರಿ ಜನಾಂಗದವರು ಒಗ್ಗಟ್ಟಾಗಿ ಸವಲತ್ತುಗಳನ್ನು ಅಪೇಕ್ಷಿಸಬೇಕಿದೆ: ಸಮಾಲೋಚನಾ ಸಭೆಯಲ್ಲಿ ಸ್ಪೀಕರ್ ಯು.ಟಿ.ಕಾದರ್.

ಮಂಗಳೂರು: ನಿನ್ನೆ ಅಖಿಲ ಭಾರತ ಬ್ಯಾರಿ ಮಹಾ ಸಭಾ ದ.ಕ.ಮಂಗಳೂರು ಸಂಸ್ಥೆ ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬ್ಯಾರಿ ಜನಾಂಗದ ಪ್ರಮುಖ ವ್ಯಕ್ತಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಾ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ರವರು ಬ್ಯಾರಿ ಜನಾಂಗದವರು ಒಗ್ಗಟ್ಟಾಗಿ ಸವಲತ್ತುಗಳನ್ನು ಅಪೇಕ್ಷಿಸಬೇಕಿದೆ ಎಂದು ಸಲಹೆ ನೀಡಿದರು.

ಅಖಿಲ ಭಾರತ ಬ್ಯಾರಿ ಮಹಾ ಸಭಾ ಸಂಸ್ಥೆಯ ಮುಖ್ಯಸ್ಥರಾದ ಅಬ್ದುಲ್ ಅಝೀಝ್ ಬೈಕಂಪಾಡಿ ನೇತೃತ್ವದಲ್ಲಿ ನಡೆದ ಬ್ಯಾರಿ ಜನಾಂಗದ ಅಭಿವೃದ್ಧಿಗಾಗಿ ಸರಕಾರದಿಂದ ಪ್ರತ್ಯೇಕ ಸವಲತ್ತು ಪಡೆಯುವ ಕುರಿತ ಸಮಾಲೋಚನಾ ಸಭೆಯಲ್ಲಿ ಕರ್ನಾಟಕದ ಸ್ಪೀಕರ್ ಸೇರಿದಂತೆ ಪ್ರಮುಖ ವ್ಯಕ್ತಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಿದರು.

ಸುಮಾರು ಇಪ್ಪತೈದು ಲಕ್ಶದಷ್ಟು ಜನಸಂಖ್ಯೆಯ ಬ್ಯಾರಿ ಸಮುದಾಯದ ವಿಶಿಷ್ಟ ಜೀವನ ಶೈಲಿ ಸಮಾಜಕ್ಕೆ ಒಂದು ಕೊಡುಗೆ ಎಂಬ ನೆಲೆಯಲ್ಲಿ ಸರಕಾರದಿಂದ ಅಭಿವೃದ್ಧಿ ಸಂಭಂದಿತ ನಿಗಮ ಸವಲತ್ತುಗಳನ್ನು ಅಪೇಕ್ಷಿಸುವ ಬಗ್ಗೆ ವಿವಿಧ. ಮುಖಂಡರು ಸಲಹೆ ಸೂಚನೆ ನೀಡಿದರು.

ಸಮಾಲೋಚನಾ ಸಭೆಯಲ್ಲಿ, ಶೇಖ್ ಆಲಿ ಕರ್ನಿರೆ, ಮುಮ್ತಾಝ್ ಆಲಿ, ಝಕರಿಯ ಜೋಕಟ್ಟೆ ಅಲ್ ಮೂಝೈನ್, ಮೊಹಮ್ಮದ್ ರಫೀಕ್ ಪುತ್ತೂರು, ರಿಯಾಝ್ ಬಾವ, ಜಿ. ಏ.ಬಾವ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ , ಇಕ್ಬಾಲ್ ಮುಲ್ಕಿ, ಹೈದರ್ ಪರ್ತಿಪ್ಪಾಡಿ, ರಹ್ಮಾನ್ ಕೊಡಿಚಾಲ್, ಕಣಚೂರು ಮೋನು ಹಾಜಿ, ಮುಂತಾದ ಪ್ರಮುಖರು ಸಲಹೆ ನೀಡಿದ್ದಾರೆ. ಸಭೆಯಲ್ಲಿ , ಮೊಹಮದ್ ಹನೀಫ್ ಹಾಜಿ, ಮನ್ಸೂರ್ ಅಜಾದ್, ಸಲೀಮ್ ಹಂಡೆಲ್, ಸಂಶುದ್ದೀನ್ ಮಡಿಕೇರಿ, ಇರ್ಷಾದ್ ಅಜ್ಜಿನಡ್ಕ, ಹಸನಬ್ಬ ಪುತ್ತೂರು, ಹಂಝ ಹಾಜಿ ಮಿತ್ತೂರು, ಅಹ್ಮದ್ ಅನ್ಸಾರ್, ಹುಸೈನ್ ಕಾಟಿಪಳ್ಳ, ಯೂಸುಫ್ ಆಲಡ್ಕ, ಬೀ.ಮೊಹಮದ್ ತುಂಬೆ, ಬದ್ರುದ್ದೀನ್, ಲತೀಫ್ ಕಂದಕ್, ಸಂಶುದ್ದೀನ್ ಬಂದರ್, ಡಿ.ಎಂ. ಅಸ್ಲಂ, ಅಸ್ಗರ್ ಡೆಕ್ಕನ್, ಅಶ್ರಫ್ ಕಲ್ಲೇಗ, ಶಾನವಾಝ್ ಕೂಳೂರು, ಶಾಹುಲ್ ಹಮೀದ್ ಬಜ್ಪೆ, ಅಬ್ದುಲ್ ಮಜೀದ್ ಕುದ್ರೋಳಿ, ಅಬ್ದುಲ್ ಅಮನ್ ಕತಾರ್, ಅಬ್ದುಲ್ ಮಜೀದ್ ಪೀ. ಪೀ. ಮೊಯ್ದೀನ್ ಶಾ, ಕೆ.ಏಚ್. ಮೊಹಮ್ಮದ್ ರಫೀಕ್ ಸೂರಿಂಜೆ, ಝಾಕಿರ್ ಇಕ್ಲಾಸ್, ನಝೀರ್ ಪ್ರೀಮಿಯಂ ಪ್ಲಾಸ್ಟಿಕ್, ಅಬ್ದುಲ್ ಜಬ್ಬಾರ್ ಮಾರಿಪಲ್ಲ, ಕೆ.ಅಶ್ರಫ್ ಮಾಜಿ ಮೇಯರ್, ಈಝ ಬಜಾಲ್, ರಶೀದ್ ವಿಟ್ಲ, ಹನೀಫ್ ಹಾಜಿ ಗೋಳ್ತ ಮಜಲು, ಹಮೀದ್ ಕಲ್ಲಡ್ಕ, ಬಷೀರ್ ಬೈಕಂಪಾಡಿ, ಮೊಹಮದ್ ಅಲ್ತಾಫ್ ಮೂಳೂರು, ಮೊಹಮ್ಮದ್ ಮೋನು ಮುಂತಾದ ನಾಯಕರು ಭಾಗವಹಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ಆದ ಮೊಹಮದ್ ಹನೀಫ್. ಯು ರವರು ಸಂಸ್ಥೆಯ ಧ್ಯೇಯೋದೇಶವನ್ನು ವಿವರಿಸಿ ಅತಿಥಿಗಳನ್ನು ಸ್ವಾಗತಿಸಿದರು.ಅಧ್ಯಕ್ಷರಾದ ಅಬ್ದುಲ್ಅಝೀಝ್ ಬೈಕಂಪಾಡಿ ಬ್ಯಾರಿ ಅಭಿವೃದ್ಧಿ ನಿಗಮದ ಅನಿವಾರ್ಯತೆ ಮತ್ತು ಬೇಡಿಕೆಯ ಬಗ್ಗೆ ವಿವರಣೆ ನೀಡಿದರು.

ಸಂಸ್ಥೆಯ ಸಂಚಾಲಕರು ಆದ ಮೊಹಮ್ಮದ್ ಶಾಕಿರ್ ಹಾಜಿ, ಸದಸ್ಯರಾದ ಅಬ್ದುಲ್ ಜಲೀಲ್ ಕೃಷ್ಣಾಪುರ, ಅಶ್ರಫ್ ಬದ್ರಿಯಾ, ಹಮೀದ್ ಕಿನ್ಯ, ಇ.ಕೆ.ಹುಸೈನ್, ಮೊಹಮದ್ ಸಾಲಿಹ್ ಬಜ್ಪೆ, ಬಾವ ಪದರಂಗಿ, ಅಬ್ದುಲ್ ಖಾದರ್ ಇಡ್ಮ, ಅಬ್ದುಲ್ ಲತೀಫ್ ಬ್ಲುಸ್ಟಾರ್ , ಬಷೀರ್ ಹೊಕ್ಕಾಡಿ ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಹಮೀದ್ ಕಿನ್ಯ ಧನ್ಯವಾದ ಸಮರ್ಪಿಸಿದರು.