June 13, 2024

Vokkuta News

kannada news portal

ದ.ಕ. ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕೆ.ಕೆ.ಸಾಹುಲ್ ಹಮೀದ್ ನೇಮಕ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿ, ಅಲ್ಪ ಸಂಖ್ಯಾತ ವಿಭಾಗದ ಚೇರ್ಮನ್ ಆದ ಶ್ರೀ ವೈ. ಸಯೀದ್ ಅಹ್ಮದ್ ರವರು, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಜ. ನದೀಮ್ ಜಾವೇದ್ ರವರ ಶಿಫಾರಸು ಮೇರೆಗೆ,ಬೆಳ್ತಂಗಡಿ ಮೂಲದ ಕೆ.ಕೆ.ಸಾಹುಲ್ ಹಮೀದ್ ರವರನ್ನು,ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ. ಕೆ.ಕೆ. ಸಾಹುಲ್ ಹಮೀದ್ ರವರು ಈ ಹಿಂದೆ ಬೆಳ್ತಂಗಡಿ ತಾಲೂಕು ಮತ್ತು ದ.ಕ.ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಹಲವು ಹುದ್ದೆಗಳನ್ನು ಹೊಂದಿದ್ದರು. ಜಿ.ಪ.ಸದಸ್ಯರಾಗಿದ್ದ ಸಾಹುಲ್ ಹಮೀದ್ ರವರು ಈ ಹಿಂದೆ ದ.ಕ.ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರಿನ ಪ್ರತಿಷ್ಠಿತ ಮುಸ್ಲಿಮ್ ಶಿಕ್ಷಣ ಪೋಷಿತ ಸಂಸ್ಥೆಯಾದ ಜಮ್ಮಿಯತುಲ್ ಫಲಾ ಹ್ ಅಧ್ಯಕ್ಷರು ಕೂಡ ಆಗಿದ್ದರು.