March 19, 2025

Vokkuta News

kannada news portal

ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ: ಮುಸ್ಲಿಮ್ ಒಕ್ಕೂಟ ಕೆ.ಅಶ್ರಫ್ ಸಂತಾಪ.

ಮಂಗಳೂರು: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ರವರು ಇಂದು ಕೇರಳದ ಏಟ್ಟಿ ಕುಳಂ ನಲ್ಲಿ ನಿಧನರಾಗಿದ್ದು, ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಮಾಜಿ ಮೇಯರ್ ಆದ ಕೆ .ಅಶ್ರಫ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೂರತ್ ತಂಗಲ್ ರವರ ಅಗಲಿಕೆ ಮುಸ್ಲಿಮ್ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆ.ಅಶ್ರಫ್ ಹೇಳಿದ್ದಾರೆ.

ಕೂರತ್ ತಂಗಲ್ ರವರು ಪ್ರಸಿದ್ಧ ಉಳ್ಳಾಲ ಸಯ್ಯದ್ ಮದನಿ ದರ್ಗಾ ಮತ್ತು ಕೇಂದ್ರ ಮಸೀದಿ ಸಂಸ್ಥೆ ಮತ್ತು ಅಧೀನ ವಲಯದ ಅಧಿಕೃತ ಖಾಝಿ ಆಗಿ ಸೇವೆ ಸಲ್ಲಿಸುತ್ತಿದ್ದರು. ಹಾಲಿ ಕೂರತ್ ತಂಗಲ್ ರವರು ಎಟ್ಟಿಕುಲಂ ನಿವಾಸದಲ್ಲಿರುವ ಸಂದರ್ಭದಲ್ಲಿ ಇತ್ತೀಚೆಗೆ ಹೃದಯ ಸಂಬಂಧಿ ಕಾರಣಕ್ಕಾಗಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹ ಇಂದು ಸಂಜೆ ಕೇರಳದಿಂದ ಪುತ್ತೂರಿನ ಕೂರತ್ ಬರಲಿದ್ದು ಇಲ್ಲಿ ಅಂತಿಮ ದಫನ ಕಾರ್ಯ ನಡೆಯಲಿದೆ.

ಮೃತರ ಅಗಲಿಕೆಯನ್ನು ಅವರ ಕುಟುಂಬ ಸಹಿಸಲಿ ಎಂದು ಪ್ರಾರ್ಥಿಸುತ್ತಾ ಕೆ.ಅಶ್ರಫ್ ತೀವ್ರ ಸಂತಾಪ ವ್ಯಕ್ತಡಿಸಿದ್ದಾರೆ.