July 27, 2024

Vokkuta News

kannada news portal

ಅಖಿಲ ಭಾರತ ಬ್ಯಾರಿ ಮಹಾ ಸಭಾ ನಿಯೋಗ ಅ ಸ.ಅಧ್ಯಕ್ಷರ ಭೇಟಿ

ಅಖಿಲ ಭಾರತ ಬ್ಯಾರಿ ಮಹಾ ಸಭಾದಿಂದ ಅ.ಸ. ಚೇರ್ ಮನ್ ಭೇಟಿ

ಮುಸ್ಲಿಮ್ ವಧು ವರರ ಕನಿಷ್ಠ ವಯೋ ಮಿತಿ ಬಗ್ಗೆ ಸ್ಪಷ್ಟೀಕರಣ ಅಪೇಕ್ಷಿಸಿ ಬ್ಯಾರಿ ಮಹಾ ಸಭಾ ನಿಯೋಗ ಅ.ಸ.ಅಧ್ಯಕ್ಷರ ಭೇಟಿ

ದ.ಕ.ಜಿಲ್ಲೆಯ ವಿಧ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ವಿವಿಧ ವಿಧ್ಯಾರ್ಥಿ ವೇತನ ಸೌಲಭ್ಯ , 2020-21 ನೆ ಸಾಲಿನಲ್ಲಿ ವೃತ್ತಿ ಆಧಾರಿತ ಅಲ್ಪ ಸಂಖ್ಯಾತ ವಿಧ್ಯಾರ್ಥಿಗಳ ಅರಿವು ಶೈಕ್ಷಣಿಕ ಸಾಲ ಯೋಜನೆಯ ಬಾಕಿ ಇರುವ ಮತ್ತು ಹಾಲಿ ಕಂತುಗಳನ್ನು ಬಿಡುಗಡೆ ಗೊಳಿ ಸಿ ಪ್ರಸ್ತುತ ಶೈಕ್ಷಣಿಕ ಸಂಸ್ಥೆಗಳಿಂದ ವಿಧ್ಯಾರ್ಥಿಗಳಿಗೆ ಶುಲ್ಕ ವಸೂಲಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸ ಬೇಕು ಎಂದು ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕ್ಕಂಪಾಡಿ ನೇತೃತ್ವದ ಅಖಿಲ ಭಾರತ ಬ್ಯಾರಿ ಮಹಾ ಸಭಾ ನಿಯೋಗ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಅಬ್ದುಲ್ ಅಜೀಂ ರವರನ್ನು ಇಂದು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ನಿಯೋಗವು ಅದ್ಯಕ್ಷರಲ್ಲಿ ಮಾತನಾಡಿ, ಪ್ರಸ್ತುತ ಮುಸ್ಲಿಮ್ ಸಮುದಾಯದಲ್ಲಿ ವಧು ವರರ ವಿವಾಹ ವಯಸ್ಸಿನ ಬಗ್ಗೆ ಗೊಂದಲ ಸೃಷ್ಟಿ ಆಗಿದ್ದು, ದೇಶದಲ್ಲಿ ಮುಸ್ಲಿಮ್ ಅಲ್ಪ ಸಂಖ್ಯಾತ ವ್ಯಕ್ತಿಗಳಿಗೆ ವಿವಾಹವಾಗಲು ಶರೀಯತ್ ನಿಯಮ ಚಾಲನೆಯಲ್ಲಿದೆ. ಖಡ್ಡಾಯ ವಯಸ್ಸಿನ ಮಿತಿ ಮುಸ್ಲಿಮ್ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ. ಮುಸ್ಲಿಮ್ ಸಮುದಾಯವು ದೇಶದ ಕಾನೂನು ನನ್ನು ಗೌರವಿಸುವುದ ರೊಂದಿಗೆ ಶರಿಯತ್ ಅನುಕೂಲತೆಯ ಪ್ರಯೋಜನಾರ್ಥಿ ಗಳಾಗಿದ್ದಾರೆ. ವಿವಾಹದ ಖಡ್ಡಾಯ ವಯಸ್ಸಿನ ವಿಷಯದಲ್ಲಿ , ಮುಸ್ಲಿಮ್ ವಧು ವರರು ದೈಹಿಕ ಪ್ರಾಯಸ್ತರಾಗುವುದೆ ಅರ್ಹತೆ ಎಂದು ಶರಿಯತ್ ಕಾನೂನು ಹೇಳುತ್ತದೆ.ಆದುದರಿಂದ ರಾಜ್ಯದ ಕೆಲವು ಇಲಾಖೆಗಳು ವಧು ವರರ ವಯಸ್ಸಿನ ಸಣ್ಣ ವ್ಯತ್ಯಯಗಳನ್ನು ಕಾರಣವಾಗಿಟ್ಟು ವಿವಾಹದಂತಹ ಶುಭ ಸಮಾರಂಭಗಳ ಹಾಲ್ ಗಳಿಗೆ ತೆರಳಿ ವಿವಾಹ ಕಾರ್ಯಕ್ಕೆ ಆಡ್ಡಿ ಪಡಿಸಿ ಪ್ರಕರಣ ದಾಖಲಿಸುವುದು ಕಂಡು ಬಂದಿದ್ದು, ಈ ಬಗ್ಗೆ ಸಂಬಂಧಿತ ಇಲಾಖೆಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ವಿನಂತಿಸಲಾಯಿತು.

ನಿಯೋಗದಲ್ಲಿ ಸದಸ್ಯರಾದ ಮೊಹಮ್ಮದ್ ಹನೀಫ್ ಯು, ಮುಸ್ತಫಾ ಸಿ. ಎಂ, ಅಹ್ಮದ್ ಬಾವ ಬಜಾಲ್,ಮೊಹಮ್ಮದ್ ಸ್ವಾಲಿಹ್ ಬಜ್ಪೆ ರವರು ಉಪಸ್ಥಿತರಿದ್ದರು