June 29, 2025

Vokkuta News

kannada news portal

ಅಶ್ರಫ್ ಗುಂಪು ಹತ್ಯೆ, ಪಿಯುಸಿಎಲ್, ಎಪಿಸಿಆರ್, ಎಐಎಲ್ಏಜೆ ಸತ್ಯಶೋಧನಾ ವರದಿ ಬಿಡುಗಡೆ.

ಬೆಂಗಳೂರು: ಅಶ್ರಫ್ ಗುಂಪು ಹತ್ಯೆ ಬಗ್ಗೆ ಈಗಾಗಲೇ ಮಾನವ ಹಕ್ಕು ಸಂಸ್ಥೆಗಳು  ಮಾಹಿತಿ ಸಂಗ್ರಹಿಸಿ ನಿನ್ನೆ  ಬೆಂಗಳೂರಿನಲ್ಲಿ ಸತ್ಯ ಶೋಧನಾ ವರದಿ ಬಿಡುಗಡೆ ಮಾಡಿದೆ.

ಅಶ್ರಫ್ ಅವರ ಗುಂಪು ಹಲ್ಲೆ ಪ್ರಕರಣದ ತನಿಖೆಗಾಗಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ನ ಸತ್ಯಶೋಧನಾ ತಂಡವು ಮೇ ತಿಂಗಳಲ್ಲಿ ಮಂಗಳೂರಿಗೆ ಭೇಟಿ ನೀಡಿತ್ತು . ಆ ತಂಡವು ಘಟನೆ ನಡೆದ ಸ್ಥಳಕ್ಕೆ, ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಶ್ರಫ್ ಅವರ ಸಹೋದರನೊಂದಿಗೆ ಮಾತನಾಡಿದೆ.ಏಪ್ರಿಲ್ 27 ರಂದು ನಡೆದ ಈ ಘಟನೆಯಲ್ಲಿ, ಜನರ ಗುಂಪೊಂದು ಅಶ್ರಫ್ ಮೇಲೆ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣವಾಯಿತು. ಪೊಲೀಸರು ಆರಂಭದಲ್ಲಿ ಈ ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ದಾಖಲಿಸಿಕೊಂಡು ನಂತರ ಅದನ್ನು ಗುಂಪು ಹಲ್ಲೆ ಪ್ರಕರಣವನ್ನಾಗಿ ಪರಿವರ್ತಿಸಿದರು. ಹಲವಾರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಮತ್ತು ಕೆಲವರಿಗೆ ಜಾಮೀನು ನೀಡಲಾಗಿದೆ, ಇತರರು ಇನ್ನೂ ಬಂಧನದಲ್ಲಿದ್ದಾರೆ.

ಸ್ಥಳಕ್ಕೆ ಭೇಟಿ:

ಪಿಯುಸಿಎಲ್ ತಂಡವು ಗುಂಪು ಹಲ್ಲೆ ನಡೆದ ಕುಡುಪುವಿಗೆ ಭೇಟಿ ನೀಡಿದೆ.

ಕುಟುಂಬದವರೊಂದಿಗೆ ಸಂವಹನ:

ಘಟನೆ ಮತ್ತು ಕುಟುಂಬದ ಮೇಲಿನ ಅದರ ಪ್ರಭಾವದ ಬಗ್ಗೆ ಮಾಹಿತಿ ಸಂಗ್ರಹಿಸಲು ಮಾನವ ಹಕ್ಕು ಸಂಘಟನೆ ಅಶ್ರಫ್ ಅವರ ಸಹೋದರ ಜಬ್ಬಾರ್ ಅವರೊಂದಿಗೆ ಮಾತನಾಡಿದ್ದಾರೆ

ಪೊಲೀಸ್ ತನಿಖೆ:

ಪಿಯುಸಿಎಲ್ ತಂಡವು ಪ್ರಕರಣದ ಆರಂಭಿಕ ನಿರ್ವಹಣೆ ಮತ್ತು ನಂತರದ ಗುಂಪು ಹಲ್ಲೆ ಪ್ರಕರಣವಾಗಿ ಪರಿವರ್ತನೆ ಸೇರಿದಂತೆ ಪೊಲೀಸ್ ತನಿಖೆಯನ್ನು ಪರಿಶೀಲಿಸಿದೆ.

ಬಂಧನಗಳು ಮತ್ತು ಜಾಮೀನು:

ಅವರು ಮಾಡಿದ ಬಂಧನಗಳು ಮತ್ತು ನಂತರದ ಜಾಮೀನು ಅರ್ಜಿಗಳನ್ನು ಪರಿಶೀಲಿಸಿದರು, ಕೆಲವು ಆರೋಪಿಗಳಿಗೆ ಜಾಮೀನು ನೀಡಲಾಗಿದೆ ಮತ್ತು ಇತರರಿಗೆ ನಿರಾಕರಿಸಲಾಗಿದೆ ಎಂದು ಮಾಹಿತಿ ಸಂಗ್ರಹಿಸಲಾಗಿದೆ.

ಪಿರ್ಯಾದಿಯಲ್ಲಿ ಪಾಕಿಸ್ತಾನ್ ಪಾಕಿಸ್ತಾನ್ ಎಂದು ಮಾತ್ರ ಇದೆ ಹೊರತು ಜಿಂದಾಬಾದ್ ಅಂತ ಎಲ್ಲೂ ಇಲ್ಲ.ಹಾಗಿರುವಾಗ ಕರ್ನಾಟಕದ ಗೃಹ ಸಚಿವರು, ಮಂಗಳೂರಿನಲ್ಲಿ ಹೀಗೆ ಘಟನೆ ಆಗಿದೆ, ಪಾಕಿಸ್ತಾನ್ ಜಿಂದಾಬಾದ್ ಎಂದು ಮೃತ ವ್ಯಕ್ತಿ ಕೂಗಿದ್ದಾನೆ ಎಂದು ಯಾಕೆ ಹೇಳಿದ್ದು, ಹೀಗೆಂದು ಬೆಂಗಳೂರಿನಲ್ಲಿ ಅವರು ಹೇಳಿಕೆ ಕೊಡುತ್ತಾರೆ. ಯಾರು ಹೇಳಿದ್ದು ಗೃಹ ಸಚಿವರಿಗೆ ಹೀಗೆ ಕೂಗಲಾಗಿದೆ, ಅಥವಾ ಇದು ಗೃಹ ಸಚಿವರ ಒಂದು ಊಹೆ ಇರಬಹುದಾ, ಗುಂಪು ಹತ್ಯೆ ಆಗಿದ್ದು 27 ನೇ ತಾರೀಕು ಆ ದಿವಸವೇ ಸೀನಿಯರ್ ಐ.ಪಿ. ಎಸ್ ರ್ಯಾಂಕ್ ಅಧಿಕಾರಿಗಳು ಅಲ್ಲಿಗೆ ಹೋಗುತ್ತಾರೆ, ಅವರು ಹೋದರೂ ಕೂಡಾ ಮೃತನ ಮೈಮೇಲೆ ಅಷ್ಟೂ ಗಾಯಗಳು ಇದ್ದರೂ ಕೂಡ ಎಫ್. ಐ.ಆರ್ ಮಾಡದೇ ಯು.ಡಿ.ಆರ್ ಮಾಡುತ್ತಾರೆ.ಸಂಘ ಸಂಸ್ಥೆಗಳು ಒತ್ತಡ ಹಾಕಿದ್ದಕ್ಕೆ ಅವರು ಎಫ್. ಐ .ಆರ್. ಮಾಡುತ್ತಾರೆ. ಜನರು ಅಶ್ರಫ್ ಎಂಬವನನು ಹೊಡೆದು ಸಾಯಿಸಿ, ಪುನಃ ಹೋಗಿ ಕ್ರಿಕೆಟ್ ಆಡುತ್ತಾರೆ.ಅಂದರೆ ಅಂತಹ ಮನಸ್ಥಿತಿ. ಸ್ಥಳದಲ್ಲಿ ಪೊಲೀಸರು ಸರಿಯಾದ ಸಾಕ್ಷಿ ಆಧಾರಗಳನ್ನು ಸಂಗ್ರಹಿಸಿಲ್ಲ, ಪಕ್ಕದ ದೇವಸ್ಥಾನದಲ್ಲಿ ಸಿಸಿ.ಟೀವಿ ದೃಶ್ಯಗಳನ್ನು ಸಂಗ್ರಹಿಸಿಲ್ಲ ಮೂರು ಜನ ಕೆಳಸ್ತರದ ಪೊಲೀಸು ಅಧಿಕಾರಿಗಳನ್ನು ಅಮಾನತು ಮಾಡುತ್ತಾರೆ, ಅವರ ಫೋನ್ ಅನ್ನು ಪಡೆದಿಲ್ಲ,ಸುಮಾರು ನೂರು ಜನ ಸ್ಥಳದಲ್ಲಿ ಇದ್ರು ಸಾಕ್ಷಿ ಸಿಗಲಿಲ್ಲ ಎಂದು ಹೇಳುತ್ತಾರೆ, ಇದರ ಏನರ್ಥ, ಯಾರ ಪೋನು ಸಿಗಲಿಲ್ಲ? ಸರಕಾರ ಪ್ರತ್ಯೇಕ ತನಿಖಾ ತಂಡ ರಚಿಸಿಲ್ಲ, ಸುಹಾಸ್ ಶೆಟ್ಟಿ ಒಂದು ಬರ್ಬರ ಕೊಲೆ ಅದೂ ಆಗಬಾರದಿತ್ತು. ಅದು ಎನ್ ಐ ಗೆ ಹೋಗಿದೆ. ಇದನ್ನು ಎಸ್. ಐ.ಟಿ ಗೆ ವಹಿಸ ಬಹುದಲ್ಲ ಇದು ಪೊಲೀಸು ವೈಫಲ್ಯ. ಪೋಲೀಸರನ್ನು ಅಮಾನತು ಗೋಳಿಸಿ ಹೊಸ ಅಧಿಕಾರಿಗಳನ್ನು ನೇಮಿಸಿದರೆ ಸಾಲುವುದಿಲ್ಲ , ಅನುಪಮ್ ಅಗರವಾಲ್ ಅಮಾನತು ಆಗಬೇಕಿತ್ತು. ಎಂಬಿತ್ಯಾದಿಯಾಗಿ ಮಾನವ ಹಕ್ಕು ಸಂಸ್ತೆಯ ಪದಾಧಿಕಾರಿಗಳು ಹೇಳಿಕೆ ನೀಡಿದರು.
.