March 20, 2026

Vokkuta News

kannada news portal

ಈದ್ ಉಲ್ ಫಿತರ್  ಸಂಭ್ರಮ ಮಿತಿಯೊಳಗೆ ಇರಲಿ :ತಲಪಾಡಿ ಅಲ್ ಫಲಾಹ್ ಪ್ರಭಾಷಣದಲ್ಲಿ ಉಸ್ತಾದ್ ಅಬೂಬಕ್ಕರ್ ನಝೀರ್.

ತಲಪಾಡಿ: ತಲಪಾಡಿ ಗ್ರಾಮದ ಕೆ. ಸಿ ನಗರದ ಅಲ್ ಫಲಾಹ್ ಈದ್ ಮುಸಲ್ಲದಲ್ಲಿ ನಡೆದ ಈದ್ ನಮಾಜ್ ನಂತರ ಖುತುಬಾ ನಿರ್ವಹಿಸಿ ಮಾತನಾಡುತ್ತಾ ಲೋಕದಲ್ಲಿ ಶಾಂತಿ ನೆಲೆಸಲು ಪ್ರಾರ್ಥಿಸುತ್ತಾ, ಎಲ್ಲಾರೂ ಈ ನಿಟ್ಟಿನಲ್ಲಿ ನಿರಂತರ ಪ್ರಾರ್ಥನೆ ನಡೆಸಬೇಕೆಂದು ಕರೆ ನೀಡಿದರು. ನಾವು ಇಲ್ಲಿ ಸುಖ ಸಂತೋಷದಿಂದಿರುವಾಗ ಲೋಕದ ವಿವಿದೆಡೆಗಳಲ್ಲಿ ಹಲವು ಕಾರಣಗಳಿಂದಾಗಿ ಮರ್ದಿಸಲ್ಪಡುತ್ತಿರುವ ಮರ್ದಿತರನ್ನು ನಾವು ಮರೆತುಹೋಗ ಬಾರದು, ಅವರಿಗಾಗಿ ನಮ್ಮ ದುವಾಗಳಲ್ಲಿ ಕೆಲವು ಪದಗಳನ್ನು ಮೀಸಲಿಡ ಬೇಕಿದೆ. ಮೊತ್ತ ಮೊದಲಿಗೆ ನಮ್ಮನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ ಆರಾಧನೆಗಳನ್ನು ಮೀಸಲಿಡೋಣ, ಅದು ಎಲ್ಲಾ ಪ್ರವಾದಿಗಳ ಸಂದೇಶವಾಗಿತ್ತು. ಈದ್ ದಿನದಂದು ನಮ್ಮ ಸಂಭ್ರಮ ಹದ್ದು ಮೀರದಿರಲಿ, ದುಂದುವೆಚ್ಚ ರಹಿತವಾಗಿರಲಿ. ಕುಟುಂಬ ಸಂಬಂಧಗಳನ್ನು ಬೆಸೆಯುವಂತಾಗಿರಲಿ ಎಂದು ಈದ್ ಸಂದೇಶ ನೀಡಿದರು. ಮಹಿಳೆಯರು, ಮಕ್ಕಳು, ಪುರುಷರೆಲ್ಲಾ ಬಾಗವಹಿಸಿದ ಈ ಈದ್ ಮುಸಲ್ಲವನ್ನು ಅಲ್ ಫಲಾಹ್ ಮಸ್ಜಿದ್ ಸಮಿತಿ, ವಿದ್ಯಾನಗರ, ತಲಪಾಡಿ ಆಯೋಜಿಸಿತು.