ಸಜೀಪ ನಡು: ಸಜೀಪನಡು ಗ್ರಾಮದ ಸಮಾನ ಮನಸ್ಕ ಉತ್ಸಾಹಿ ತರುಣರು ನಡೆಸಿಕೊಂಡು ಬರುವ ಎಕ್ಶ್ ಟ್ರೀಮ್ ಫ್ರೆಂಡ್ಸ್ ಅಸೋಸಿಯೇಶನ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ನೈಸರ್ಗಿಕವಾಗಿ ನಡೆಯುವ ವಿಫತ್ತು , ಅಪಘಾತ ಮತ್ತು ತುರ್ತು ಶುಭ ಸಮಾರಂಭಗಳಲ್ಲಿ ತನ್ನ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು
ಗ್ರಾಮದ ತುರ್ತು ಸಂದರ್ಭಗಳಾದ ಚಿಕ್ಕ‑ಪುಟ್ಟ ಅಪಘಾತ, ನೀರಿನ ಸಮಸ್ಯೆ, ಜನರ ಆರೋಗ್ಯ ಸಮಸ್ಯೆ, ಪ್ರಕೃತಿ ವಿಕೋಪ, ಗೃಹ ಅಪಘಾತ, ವಿಪತ್ತು ಸಂದರ್ಭಗಳ ಸಮಯದಲ್ಲಿ ತನ್ನ ಸೇವೆ ನಡೆಸುವ ಈ ಸಂಸ್ಥೆಯು ಗ್ರಾಮದ ಜನರ ಪ್ರಶಂಸೆಗೆ ಪಾತ್ರವಾಗಿದೆ
ಇದರ ವಾರ್ಷಿಕ ಸಭೆಯು ಇತ್ತೀಚೆಗೆ ಸಜಿಪನಡು ಬಸ್ ನಿಲ್ದಾಣ ಬಳಿಯಿರುವ ಸಂಸ್ಥೆಯ ಕಚೇರಿಯಲ್ಲಿ ಗೌರವಾಧ್ಯಕ್ಷರಾದ ಸಾದಿಕ್ ಬೊಳಮೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ಲತೀಫ್ ಸಜೀಪ, ಉಪಾಧ್ಯಕ್ಷರಾಗಿ ಇರ್ಶಾದ್, ಕಾರ್ಯದರ್ಶಿಗಳಾಗಿ ಎಸ್ ಎನ್ ನಿಸಾರ್, ಜೊತೆ ಕಾರ್ಯದರ್ಶಿಯಾಗಿ ಮುನೀರ್ ಹಾಗೂ ಕೋಶಾಧಿಕಾರಿಯಾಗಿ ಆರಿಫ್ ಎಂ .ಜಿ ರವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಂಸ್ಥೆಯ ವಾರ್ಷಿಕ ವರದಿಯನ್ನು ಮಾಜಿ ಉಪಾಧ್ಯಕ್ಷರಾದ ಹಂಝ ರವರು ಮಂಡಿಸಿ ನೂತನ ಪದಾಧಿಕಾರಿಗಳಿಗೆ ಶುಭಾಶಯವನ್ನು ತಿಳಿಸಿದರು.
ಇನ್ನಷ್ಟು ವರದಿಗಳು
ಯುನಿವೆಫ್ ಕರ್ನಾಟಕ ವತಿಯಿಂದ ವಯಸ್ಕರಿಗಾಗಿ ಸಾಪ್ತಾಹಿಕ, ಏಕ ತಾಸು ನೀತಿಪಾಠ ಕಲಿಕೆ ತರಗತಿಗಳು
ಬೆಂಗಳೂರು: ನೀಲ್ ಅಂಡ್ ನಿಹಾಲ್ ಕಾನೂನು ಸಂಸ್ಥೆಯಿಂದ ಅಡ್ವೊಕೇಟ್ಸ್ ಡೇ -25 ಆಚರಣೆ,ಕಾನೂನು ಬಂಧುತ್ವಕ್ಕೆ ಪ್ರೇರಣೆ.
ಉಳ್ಳಾಲ.ನಾ.ವೇದಿಕೆಯಿಂದ ‘ ನನ್ನ ಉಳ್ಳಾಲ – ನಮ್ಮ ಉಳ್ಳಾಲ ‘ ಘೋಷಿತ ಸ್ವಚ್ಛತಾ ಕಾರ್ಯಕ್ರಮ.