ಮಂಗಳೂರು: ಮುಸ್ಲಿಮ್ ನಾಮಾಂಕಿತ ರಾಷ್ಟ್ರೀಯ ಮಟ್ಟದ,ಸುಮಾರು ನೂರು ವರ್ಷ ಇತಿಹಾಸವುಳ್ಳ ಸ್ವಾತಂತ್ರ್ಯ ಪೂರ್ವ ಹೈದರಾಬಾದ್ ಸ್ಥಾಪಿತ ರಾಜಕೀಯ ಪಕ್ಷ ವು ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ಉದ್ದೇಶ ಹೊಂದಿ ತನ್ನ ದ.ಕ.ಜಿಲ್ಲಾ ಮಟ್ಟದ ರಾಜಕೀಯ ಕಾರ್ಯಾಲಯವನ್ನು ಸ್ಥಾಪಿಸಲಿದೆ.ಮಂಗಳೂರು ನಗರದಲ್ಲಿ ಉದ್ಘಾಟನೆ ಗೊಳ್ಳಲಿರುವ ಕಚೇರಿಯನ್ನು ಕರ್ನಾಟಕ ರಾಜ್ಯ ಮಟ್ಟದ ನಾಯಕರ ಉಪಸ್ಥಿತಿಯಲ್ಲಿ ಆರಂಭಿಸಲಾಗುತ್ತಿದೆ. ರಾಜ್ಯದಲ್ಲಿ ಪಕ್ಷದ ಪ್ರಮುಖರಾದ ಜನಾಬ್ ಉಸ್ಮಾನ್ ಘನಿ ಮತ್ತು ಜನಾಬ್ ಮೊಹಮ್ಮದ್ ಸಲಾಮ್ ರವರ ನೇತೃತ್ವದಲ್ಲಿ ಜಿಲ್ಲಾ ದ.ಕ.ಜಿಲ್ಲಾ ಕಚೇರಿಯು ಉದ್ಘಾಟನೆ ಗೊಳ್ಳಲಿದ್ದು, ಅಬ್ದುಲ್ ರವೂಫ್ ರವರು ಜಿಲ್ಲಾ ಮುಖ್ಯಸ್ಥರಾಗಿ ಮತ್ತು ನೂರ್ ಮೊಹಮ್ಮದ್ ರವರು ಮಂಗಳೂರು ನಗರ ಮುಖ್ಯಸ್ಥರಾಗಿ ಎ. ಐ.ಎಂ. ಐ. ಎಂ. ಪಕ್ಷದ ಕಾರ್ಯ ಚಟುವಟಿಕೆ ಗಳಿಗೆ ಚಾಲನೆ ನೀಡಲಿದ್ದಾರೆ. 2001 ರಲ್ಲಿ ಕೇಂದ್ರ ಚುನಾವಣಾ ಆಯೋಗ ಎ. ಐ.ಎಂ. ಐ ಎಂ ಪಕ್ಷಕ್ಕೆ ಮಾನ್ಯತೆ ನೀಡಿ ಅಧಿಕೃತ ಪಕ್ಷದ ಚಿಹ್ನೆ ಗಾಳಿ ಪಟ ವ ನ್ನು ನೀಡಿತು. ಪ್ರಸ್ತುತ ಪಕ್ಷದ ಮುಖ್ಯಸ್ಥರಾಗಿ ಅಸಾಸುದ್ದೀನ್ ಓವೈಸಿ ನೇಮಕವಾಗಿದ್ದು ಇತ್ತೀಚೆಗಿನ ಉತ್ತರ ಭಾರತದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಎ.ಐ. ಎಮ್. ಐ. ಎಂ ಪಕ್ಷ ದಿಂದ ಅ ರಾಜ್ಯಗಳ ಸ್ಥಳೀಯ ನಾಯಕರ ನೇತೃತ್ವದಲ್ಲೇ ಚುನಾವಣೆಗೆ ಸ್ಪರ್ಧಿಸಿ ಇತರ ರಾಜಕೀಯ ಪಕ್ಷಗಳ ಎದುರಿಗೆ ಗಣನಾತ್ಮಕ ಕುತೂಹಲ ಸೃಷ್ಟಿಸಿತ್ತು. ಪ್ರಸ್ತುತ ಪಕ್ಷ ಉತ್ತರ ಭಾರತದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಕರ್ನಾಟಕದ ಕರಾವಳಿಯ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ಭಾಗವಾಗಿ ಮಂಗಳೂರು ಕೇಂದ್ರಿತ ಕಚೇರಿ ಸ್ಥಾಪನೆ ಆಗಲಿದೆ ಎಂದು ಪಕ್ಷದ ಉದ್ದೇಶಿತ ಕಚೇರಿ ಮೂಲಗಳು ತಿಳಿಸಿವೆ.
kannada news portal
ಇನ್ನಷ್ಟು ವರದಿಗಳು
ಕ್ಯಾಥೋಲಿಕ್ ಬಿಷಪ್ – ಮೋದಿ ಭೇಟಿ :’ಅಲ್ಲಿ ಅವರು ಗೌರವಿಸುತ್ತಾರೆ, ಇಲ್ಲಿ ಅವರು ನಾಶಪಡಿಸುತ್ತಾರೆ’ ಕೇರಳ ಧರ್ಮಗುರು ವಿಷಾದ.
ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ: ಮುಸ್ಲಿಮ್ ಒಕ್ಕೂಟ ಕೆ.ಅಶ್ರಫ್ ಸಂತಾಪ.
ಹಿಂದೂಗಳ ವಿರುದ್ಧ ಸುಳ್ಳು ಆರೋಪ ಹೊರಿಸಲು ಸಂಚು ರೂಪಿಸಲಾಗುತ್ತಿದೆ: ಪ್ರಧಾನಿ ಮೋದಿ