July 27, 2024

Vokkuta News

kannada news portal

ಮುಸ್ಲಿಮ್ ವಾಯ್ಸ್ ಗ್ರೂಪ್ ವತಿಯಿಂದ ಸಮಾಜ ಸೇವಕ ಸೋಷಿಯಲ್ ಫಾರೂಕ್ ರವರಿಗೆ ಸನ್ಮಾನ.

ಸನ್ಮಾನಿತ ಜ.ಮೊಹಮ್ಮದ್ ಫಾರೂಕ್ ಸೋಷಿಯಲ್

ಮಂಗಳೂರು: ಸಮಾಜ ಸೇವಕ ಮತ್ತು ಮುಸ್ಲಿಮ್ ವಾಯ್ಸ್ ವಾಟ್ಸಾಪ್ ಗ್ರೂಪ್ ಅಡ್ಮಿನ್ ರವರಿಗೆ ಅವರ ನಿರಂತರ ಮಾನವೀಯ, ಸಾಮಾಜಿಕ,ಕಾರುಣ್ಯ ಮತ್ತು ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಮುಸ್ಲಿಮ್ ವಾಯ್ಸ್ ಗ್ರೂಪ್ ವತಿಯಿಂದ ಮಂಗಳೂರಿನಲ್ಲಿ ಇಂದು ಸನ್ಮಾನ ಮಾಡಲಾಯಿತು.

ಮೊಹಮ್ಮದ್ ಫಾರೂಕ್ ರವರು ಮೂಲತಃ ಉಳ್ಳಾಲದವರಾಗಿದ್ದು 1974 ರಲ್ಲಿ ಜನಿಸಿದ್ದು ಪ್ರಸ್ತುತ ತಲಪಾಡಿ ಗ್ರಾಮದ ನಿವಾಸಿಯಾಗಿದ್ದು,ತನ್ನ ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಜೀವನದಲ್ಲಿ ರೂಡಿಸಿ ಕೊಂಡು ಬಂದವರು. ತಲಪಾಡಿ ಗ್ರಾಮದಲ್ಲಿನ ಇವರ ಸೇವೆಯನ್ನು ಆಧರಿಸಿ ಇವರು 2016 ರಲ್ಲಿ ಗ್ರಾಮ ಪಂಚಾಯತ್ ಗೆ ಸದಸ್ಯರಾಗಿ ಆಯ್ಕೆಯಾದರು. ಸರ್ಕಾರದಿಂದ ಲಭ್ಯವಾಗುವ ಸರ್ವ ಸ್ಥಳೀಯ ಮಟ್ಟದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಿ ಕೊಡುವ ಸೇವೆಯಿಂದ ಆರಂಭ ಗೊಂಡು,ಜಿಲ್ಲಾ ವ್ಯಾಪ್ತಿಯಲ್ಲಿ ಲಭ್ಯವಾಗುವ ಆರೋಗ್ಯ ಸವಲತ್ತು,ಶೈಕ್ಷಣಿಕ ಸವಲತ್ತು, ಆಹಾರ ಮತ್ತು ನಾಗರಿಕ ಪೂರೈಕೆ ಸವಲತ್ತು,ಅರ್ಹ ಫಲಾನುಭವಿಗಳಿಗೆ ದಾನಿಗಳ ನೆರವು ಪೂರೈಕೆ,ಸೀಮಿತ ಮಟ್ಟದಲ್ಲಿ ದಾನಿಗಳಿಂದ ರಂಝಾನ್ ಕಿಟ್ ಸಂಗ್ರಹ ಮತ್ತು ಅರ್ಹ ಫಲಾನುಭವಿಗಳಿಗೆ ವಿತರಣೆ, ಎನ್.ಆರ್.ಸಿ; ಸಿ.ಎ.ಏ, ಎನ್. ಪಿ.ಆರ್ ಘೋಷಣೆ ಸಂದರ್ಭದಲ್ಲಿ ವಿವಿಧೆಡೆಯ ಕಾರ್ಯಕ್ರಮದ ಮಾಹಿತಿ ಸಂಗ್ರಹ ಮತ್ತು ಹಂಚಿಕೆ,ರೋಗಿಗಳಿಗೆ ನೆರವು,ಮಾರ್ಗದರ್ಶನ, ಕೋರೋಣ ಸಂಧಿಗ್ಧತೆ ಸಮಯದಲ್ಲಿ ಕೋರೋಣ ವಾರಿಯರ್ ಆಗಿ ನಿರಂತರ ಸೇವೆ,ರೋಗಿಗಳ ಧಾಖಲಿಸುವಿಕೆ,ನೆರವು,ತುರ್ತು ಸಂದರ್ಭಗಳಲ್ಲಿ ಕೋರೋಣ ಸಂತ್ರಸ್ತ ಕುಟುಂಬಕ್ಕೆ ವಿವಿಧ ಪಾರ ಮೆಡಿಕ್ ಸೇವೆ ಲಭ್ಯವಾಗಿಸುವಿಕೆ, ಆಂಬುಲೆನ್ಸ್ ಸೇವೆ, ಕೋವಿ ಡ್ ಭಾದಿತ ಮೃತರ ದಫನ ಕಾರ್ಯ, ಇತ್ಯಾದಿ ಸೇವೆಗಳನ್ನು ಮಾಡಿರುವುದು. ಮುಂದುವರಿದು ಸಾಮಾಜಿಕ ಜಾಲ ತಾಣದ ಹಲವು ಗ್ರೂಫ್ ಗಳಲ್ಲಿ ಮಾಹಿತಿ ಹಂಚಿಕೆ ಇತ್ಯಾದಿ.

ಸನ್ಮಾನಿತ ಜ.ಮೊಹಮ್ಮದ್ ಫಾರೂಕ್ ಸೋಶಿಯಲ್ ರವರೊಂದಿಗೆ ಮುಸ್ಲಿಮ್ ವಾಯ್ಸ್ ಗ್ರೂಪ್ ಸದಸ್ಯರು

ಫಾರೂಕ್ ರವರ ಅನನ್ಯ ಸೇವೆಯನ್ನು ಪರಿಗಣಿಸಿ 2019 ರಲ್ಲಿ ಮುಸ್ಲಿಮ್ ಐಕ್ಯ ವೇದಿಕೆ ವಾಟ್ಸಾಪ್ ಗ್ರೂಪ್ ಇವರಿಗೆ ಸನ್ಮಾನ ಮಾಡಿತ್ತು. 2020 ರಲ್ಲಿ ತಲಪಾಡಿ ಗ್ರಾಮ ಪಂಚಾಯತ್ ವತಿಯಿಂದ, 2021 ರಲ್ಲಿ ಸಯ್ಯದ್ ಮದನಿ ದರ್ಗಾ ಮತ್ತು ಕೇಂದ್ರ ಜುಮ್ಮಾ ಮಸೀದಿ ಉಳ್ಳಾಲ ವತಿಯಿಂದ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಫಾರೂಕ್ ರವರಿಗೆ ಸನ್ಮಾನ ಮತ್ತು ಗೌರವ ಪ್ರಶಸ್ತಿ ಸನ್ಮಾನ ಮಾಡಲಾಗಿತ್ತು.

ಜ.ಮೊಹಮ್ಮದ್ ಫಾರೂಕ್ ಸೋಷಿಯಲ್ ರವರ ಈ ಸರ್ವ ಸೇವೆಯನ್ನು ಪರಿಗಣಿಸಿ ಮುಸ್ಲಿಮ್ ವಾಯ್ಸ್ ವಾಟ್ಸ್ ಆ್ಯಪ್ ಗ್ರೂಪ್ ವತಿಯಿಂದ ಇಂದು ಅವರನ್ನು ಸನ್ಮಾನಿಸಿ, ಸ್ಮರಣಿಕೆ,ನಗದು, ಮೊಬೈಲ್ ಪೋನ್ ನೀಡಿ ಗೌರವಿಸಲಾಯಿತು. ಮಂಗಳೂರಿನಲ್ಲಿ ನಡೆದ ಇಂದಿನ ಕಿರು ಸನ್ಮಾನ ಕಾರ್ಯಕ್ರಮದಲ್ಲಿ ಗ್ರೂಪ್ ಮುಖ್ಯ ಅಡ್ಮಿನ್ ಆದ ಆಶ್ಪಾಕ್ ತೋಟಾಲ್,ಅಡ್ಮಿನ್ ಗಳಾದ ಮೊಹಮ್ಮದ್ ಹನೀಫ್.ಯು, ಇಸ್ಮಾಯಿಲ್ ಯು. ಟಿ, ಅಬ್ದುಲ್ ಬಾಸಿತ್ ಕೃಷ್ಣಾಪುರ , ಜುಬೈರ್ ಬಪ್ಪಲಿಕೆ ,ಹಕ್ ಕಂದಕ್ ಮಿತ್ತೂರು , ಶಾಕಿರ್ ಮುಲ್ಕಿ, ಸದಸ್ಯರಾದ ಬಶೀರ್ ಹೊಕ್ಕಾಡಿ, ಇಬ್ರಾಹಿಂ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.