ಉಳ್ಳಾಲ: ಉಳ್ಳಾಲ ಬ್ಲಾಕ್, ಮುಡಿಪು ಬ್ಲಾಕ್ ಮತ್ತು ಯೂತ್ ಕಾಂಗ್ರೆಸ್ ಜಂಟಿ ಆಯೋಜನೆಯಲ್ಲಿ,ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ತೊಕ್ಕೊಟ್ಟು ಕಲ್ಲಾಪು ವಿನಿಂದ ತೊಕ್ಕೊಟ್ಟು, ಕುತ್ತಾರ್, ದೇರಳಕಟ್ಟೆ ಮಾರ್ಗವಾಗಿ ಮುಡಿಪುವರೆಗೆ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಮಂಗಳೂರು ವಿಧಾನ ಸಭಾ ಶಾಸಕರು ಮತ್ತು ವಿಧಾನ ಸಭೆ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಯು. ಟಿ. ಖಾದರ್ ರವರು ಹೇಳಿದ್ದಾರೆ.
ಮಧ್ಯಾಹ್ನ 12.30 ಕ್ಕೆ ಕಾರ್ಯಕರ್ತರು ಕಲ್ಲಪುವಿನ ಯುನಿಟಿ ಹಾಲ್ ನಲ್ಲಿ ಜಮಾವಣೆ ಗೊಂಡು ನಂತರ 1.30 ಕೆ ಫ್ರೀಡಮ್ ಮಾರ್ಚ್ ಆರಂಭವಾಗಲಿದೆ. ಭಾರತದ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಮತ್ತು ಜನರಲ್ಲಿ ದೇಶಪ್ರೇಮ ಮತ್ತು ಐಕ್ಯ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಹಮ್ಮಿ ಕೊಂಡಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುತ್ತಿರುವ ಬೀ. ಜೇ.ಪೀ ಪಕ್ಷ ಇಂದು ಶ್ರೀಮಂತರನ್ನು ಅತಿ ಹೆಚ್ಚು ಶ್ರೀಮಂತಿಕೆ ಮತ್ತು ಬದ ಅರನ್ನು ಇನ್ನೂ ನಿರ್ಗತಿಕ ರನ್ನಾಗಿಸುವ ಯೋಜನೆ ತಂದು ದೇಶವನ್ನು ಅಸ್ತಿರ ಗೊಳಿಸಿದೆ. ಜಾಥಾದಲ್ಲಿ ಕಾರ್ಯಕರ್ತರು ಹಾಕುವ ಪ್ರತಿಯೊಂದು ಹೆಜ್ಜೆಯೂ ನೋವಿನ ನಡೆ ಆಗಲಿದೆ. ಸ್ವಾತಂತ್ರ್ಯ ವೀರೆ ರಾಣಿ ಅಬ್ಬಕ್ಕ ಳ ನಾಡಿನಲ್ಲಿ ಸರ್ವ ಮತದ ಧರ್ಮೀಯರು ಬಾವೈಕ್ಯ ದಿಂದ ಜೀವಿಸುವ ಸಂಕೇತ ಈ ಜಾಥಾ ದಿಂದ ಪ್ರದರ್ಶನ ವಾಗಲಿದೆ. ಎಂದು ಯು. ಟಿ.ಖಾದರ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಫ್ರೀಡಂ ಮಾರ್ಚ್ ಕಾಲ್ನಡಿಗೆ ಜಾಥಾ ಮಡಿಪು ವರೆಗೆ ಸಾಗಿ ಮುಡಿಪು ವೃತ್ತದಲ್ಲಿ ಸಮಾರೋಪ ಸಮಾರಂಭ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.ಯುವಕರಲ್ಲಿ ಜಾಗೃತಿ ಸೃಷ್ಟಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯಯಲ್ಲಿ ಯುವಕರು ಭಾಗಿಯಾಗಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ನ ಲಿಖಿತ್ ಮೌರ್ಯ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಯು. ಟಿ.ಖಾದರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್, ಈಶ್ವರ್ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ಉಳ್ಳಾಲ್,ಸುರೇಶ್ ಭಟ್ ನಗರ, ಬಾಸಿಲ್ ಡಿಸೋಜ, ದಿನೇಶ್ ರೈ, ದೇವಕಿ ಉಳ್ಳಾಲ್, ನಝರ್ ಶಾ ಪಟ್ಟೋರಿ, ಪುರುಷೋತ್ತಮ್ ಪಿಲಾರ್, ವಿಶಾಲ್ ಕೊಲ್ಯ ಉಪಸ್ಥಿತರಿದ್ದರು.
ಇನ್ನಷ್ಟು ವರದಿಗಳು
ಮಂಗಳೂರು: ಆನ್ಲೈನ್ ವಂಚಕ ಪೊಲೀಸ್ ಅಧಿಕಾರಿಯಂತೆ ನಟಿಸಿ 50 ಲಕ್ಷ ರೂ ಮಹಿಳೆಗೆ ವಂಚನೆ.
‘ಐಕ್ಯ ಮಂತ್ರ’ ಕೃತಿ ಬಿಡುಗಡೆ, ‘ಕಾಸರಗೋಡು ಕರ್ನಾಟಕದ ಭಾಗವಾಗಬೇಕಿತ್ತೆಂಬ ಆಶಯ ‘ ಮಂಗಳೂರಿನಲ್ಲಿ ಕಯ್ಯಾರ ಕಿಂಞಣ್ಣ ರೈಗೆ ಶ್ರದ್ಧಾಂಜಲಿ.
ಕೆಲಸದ ಒತ್ತಡ,ಇಂದಿನಿಂದ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಾಷ್ಟಾವಧಿ ಮುಷ್ಕರ,ಬೇಡಿಕೆ.