June 13, 2024

Vokkuta News

kannada news portal

ಬಿಲ್ಕೀಸ್ ಅಪರಾಧಿಗಳ ದೋಷಮುಕ್ತತೆ ವಿರೋಧಿಸಿ ವೆಲ್ಫೇರ್ ಪಾರ್ಟಿ ಮಹಿಳಾ ಘಟಕದಿಂದ ಪ್ರತಿಭಟನೆ.

ಉಳ್ಳಾಲ: ಗುಜರಾತ್ ನ ಗೋಧ್ರಾ ಹತ್ಯಾಕಾಂಡ ವೆಂದೇ ಜಾಗತಿಕ ಕುಖ್ಯಾತಿ ಪಡೆದ ಬಿಕ್ಕೀಸ್ ಭಾನು ಅತ್ಯಾಚಾರ ಮತ್ತು ಸಾಮೂಹಿಕ ಹತ್ಯಾಕಾಂಡದ ಸಂತ್ರಸ್ತೆ ಮತ್ತು ಕಾನೂನು ಹೋರಾಟಗಾರೆ ಬಿಲ್ಲೀಸ್ ಭಾನುಳನ್ನು ಅಂದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಅಪರಾಧಿಗಳಿಗೆ ನಿರಂತರ ಕಾನೂನು ಪ್ರಕ್ರಿಯೆಯ ನಂತರ ಸಂಭಂಧಿಸಿದ ನ್ಯಾಯಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದ ನಂತರ ಸರಕಾರದ ಪರಮಾಧಿಕಾರ ದ ಲಾಭ ಪಡೆದು ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಬೆಳವಣಿಗೆಯ ಬಗ್ಗೆ ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಘಂಭೀರ ವಿಮರ್ಶೆ ನಡೆದು ಪರಮಾಧಿಕಾರ ದ ಲಾಭ ಪಡೆದ ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿ ಜಾಗತಿಕವಾಗಿ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ಇಂದು ಮಂಗಳೂರಿನ ತೊಕ್ಕೊಟ್ಟು ವೃತ್ತದಲ್ಲಿ ಬಿಲ್ಕೇಸ್ ಭಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಗೊಳಿಸಿದನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮಹಿಳಾ ಘಟಕ ದ.ಕ.ವತಿಯಿಂದ ಪ್ರತಿಭಟನೆ ನಡೆಯಿತು. ಘಟಕದ ವಿವಿಧ ಹುದ್ದೆಗಳ ಪದಾಧಿಕಾರಿಗಳು,ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.