February 19, 2025

Vokkuta News

kannada news portal

ಉಳ್ಳಾಲದಲ್ಲಿ ಕಾಂಗ್ರೆಸ್ ‘ಫ್ರೀಡಮ್ ಮಾರ್ಚ್ ‘ ಕಾಲ್ನಡಿಗೆ ಜಾಥಾ: ಪ್ರಮುಖ ಮುಖಂಡರು ಭಾಗಿ.

ಉಳ್ಳಾಲ: ಉಳ್ಳಾಲ ಬ್ಲಾಕ್, ಮುಡಿಪು ಬ್ಲಾಕ್ ಮತ್ತು ಉಳ್ಳಾಲ.ಯುವ ಕಾಂಗ್ರೆಸ್ ಇಂದು ಆಯೋಜಿಸಿದ್ದ ತೊಕ್ಕೊಟ್ಟು ವಿನಿಂದ ಮುಡಿಪು ವರೆಗಿನ ಫ್ರೀಡಮ್ ಮಾರ್ಚ್,ತಿರಂಗಾ ಯಾತ್ರೆ ಕಾಲ್ನಡಿಗೆ ಜಾಥಾಕ್ಕೆ ಕಾಂಗ್ರೆಸ್ ನ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಅಪರಾಹ್ನ ಗಂಟೆ 2.30 ಕ್ಕೇ ಕಲಾಪು ಯುನಿಟಿ ಹಾಲ್ ಬಳಿಯಿಂದ ತೊಕ್ಕೊಟ್ಟು,ಕುತ್ತಾರ್, ದೇರಳ ಕಟ್ಟೆ ನಾಟೆಕಲ್ ಮಾರ್ಗವಾಗಿ ಕೊಣಾಜೆ ಮುಡಿಪು ವರೆಗೆ ಸಾಗಿ ಮುಡಿ ಪು ವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭಾಗವಹಿಸುವಿಕೆ ಯೊಂದಿಗೆ ಜಾಥಾದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಶ್ರೀ ಯು.ಟಿ.ಕಾದರ್, ಮಧು ಬಂಗಾರಪ್ಪ, ನಿಖಿತ್ ಮೌರ್ಯ, ದ.ಕ.ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್,ಮಂಜುನಾಥ ಭಂಡಾರಿ, ಕೆ.ಪೀ.ಸಿ.ಸಿ.ಕಾರ್ಯದರ್ಶಿ ಹಿನಾಯತ್ ಆಲಿ ಮುಲ್ಕಿ,ಮಿಥುನ್ ರೈ, ಐವನ್ ಡಿ ಸೋಜಾ, ಕೆ.ಅಶ್ರಫ್ ,ಸದಾಶಿವ ಉಳ್ಳಾಲ್,ಸಾಹುಲ್ ಹಮೀದ್,ಇಬ್ರಾಹಿಂ ಕೋಡಿಜಾಲ್,ಈಶ್ವರ್ ಉಳ್ಳಾಲ್, ಪ್ರಶಾಂತ್ ಕಾಜವ,ಮೊಹಮ್ಮದ್ ಮೋನು, ಅಬ್ದುಲ್ಲಾ ಮುಸ್ತಫಾ ,ಫಾರೂಕ್ ಉಳ್ಳಾಲ್, ನಜರ್ ಶಾ ಪಟ್ಟೋರಿ, ಪುರುಷೋತ್ತಮ್ ಪೀಲಾರ್,ಸುರೇಶ್ ರೈ,ಮಮತಾ ಗಟ್ಟಿ,ಚಂದ್ರಕಲಾ,ಅಯ್ಯೂಬ್, ಮೌಸೀನ್ ಸಾಮಣಿಗೆ,ಹಾರಿಸ್ ಕೃಷ್ಣಾಪುರ ಮತ್ತಿತರರು ಹಲವಾರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ಶಾಸಕ ಶ್ರೀ ಯು. ಟಿ.ಖಾದರ್ ರಿಂದ ಜಾಥಾಕೆ ಚಾಲನೆ.