ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬೆಳ್ಳಾರೆ ಎಂಬಲ್ಲಿ ಇತ್ತೀಚೆಗೆ ನಡೆದ ಎರಡು ಭಿನ್ನ ಕೊಲೆಗಳು ಮತ್ತು ಅದರ ನಂತರ ಸುರತ್ಕಲ್ ನಲ್ಲಿ ನಡೆದ ಭಿನ್ನ ಸಮುದಾಯದ ಯುವಕನ ಕೊಲೆಯ ನಂತರ ಜಿಲ್ಲೆ ಮತ್ತು ರಾಜ್ಯದಲ್ಲಿ ಈ ಕೊಲೆಗಳನ್ನು ಕೇಂದ್ರೀಕರಿಸಿ ಪ್ರಮುಖ ರಾಜಕೀಯ ಬೆಳವಣಿಗೆಗಳು ನಡೆದು ಸರಕಾರ ಈ ಹಂತದಲ್ಲಿ ಹತ್ಯೆಯಾದ ಬಿ. ಜೇ. ಪೀ ಯ ಕಾರ್ಯಕರ್ತನಾದ ಸುಳ್ಯದ ಪ್ರವೀಣ್ ನೆಟ್ಟಾರು ಎಂಬಾತನ ಹತ್ಯೆಯ ತನಿಖೆಯನ್ನು ರಾಜ್ಯ ಸರಕಾರ ಕೇಂದ್ರ ತನಿಖಾ ತಂಡಕ್ಕೆ ವಹಿಸಿ ಕೊಟ್ಟಿತ್ತು.

ಈ ಮದ್ಯೆ ಪ್ರವೀಣ್ ನೆಟ್ಟಾರುವಿನ ಹತ್ಯೆಯನ್ನು ವೈಭವೀಕರಿಸಿ ಆಡಳಿತದಲ್ಲಿ ಇರುವ ಬಿ. ಜೇ.ಪೀ, ಬಿನ್ನ ಸಮುದಾಯದ ವಿರುದ್ಧ ವೈರತ್ವ ರಾಜಕೀಯ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎನ್. ಐ. ಎ ಕೇಂದ್ರೀಯ ತನಿಖಾ ಸಂಸ್ಥೆಯ ಮೂಲಕ ಸಂಘಟನೆಯ ಪದಾಧಿಕಾರಿಗಳನ್ನು ಗುರಿಯಾಗಿಸಿ, ಸಂಘಟನೆಯ ಪದಾಧಿಕಾರಿಗಳು,ಕಾರ್ಯ ಕರ್ತರ ವಿರುದ್ಧ ಎನ್. ಎ. ಐ.ಸಂಸ್ಥೆಯು ಧಾಳಿ ನಡೆಸಿ ಅಮಾಯಕರನ್ನು ಭಂಧಿ ಸುವುದರ ವಿರುದ್ಧ ಮತ್ತು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಿಯಾಝ್ ಪರಂಗಿಪೇಟೆ ಯ ಮನೆಗೆ ಇಂದು ಧಾಳಿ ನಡೆಸಿದರ ವಿರುದ್ಧ ಎನ್. ಐ .ಎ ವಿರುದ್ಧ ನಗರದ ಕ್ಲಾಕ್ ಟವರ್ ಬಳಿ ಇಂದು ಸಂಜೆ ಪ್ರತಿಭಟನಾ ಸಭೆ ನಡೆಯಿತು.

ಸಭೆಯಲ್ಲಿ ಎನ್. ಐ. ಎ ಧಾಳಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.ಎನ್. ಐ.ಎ ವಿರುದ್ಧ ಘೋಷಣೆ ಕೂಗಲಾಯಿತು. ಸಭೆಯನ್ನು ಉದ್ದೇಶಿಸಿ,ಎಸ್.ಡಿ.ಪೀ. ಐ ಯ ಅಬೂಬಕ್ಕರ್ ಕುಳಾಯಿ, ಇಮಾಮ್ ಕೌನ್ಸಿಲ್ ನ ಜಾಫರ್ ಸಾದಿಕ್,ಪೀ. ಎಫ್. ಐ ನ ಅಶ್ರಫ್. ಎ.ಕೆ. ಮುಂತಾದವರು ಮಾತನಾಡಿದರು.
ಇನ್ನಷ್ಟು ವರದಿಗಳು
ಉಮರ್ ಖಾಲಿದ್, ಶರ್ಜೀಲ್ ಇಮಾಮ್ಗೆ ಜಾಮೀನು ನಿರಾಕರಣೆ, ಎಪಿಸಿಆರ್ ಖಂಡನೆ, ರಾಜಕೀಯ ಖೈದಿಗಳ ಬಿಡುಗಡೆಗೆ ಆಗ್ರಹ.
ಗಾಝಾದಲ್ಲಿ ‘ಭಯಾನಕ’ ಪರಿಣಾಮಗಳನ್ನು ಸೃಷ್ಟಿಸಿದ ನೆರವು ಸಂಸ್ಥೆಗಳ ಮೇಲಿನ ನಿಷೇಧ.
ಭಾರತದಲ್ಲಿ 15.5 ದಶಲಕ್ಷ ಜನತೆಗೆ ತಮ್ಮ ಆಶ್ರಯದಿಂದ ಹೊರಹಾಕುವಿಕೆ,ದಿನವಹಿ 101 ಮನೆ ನಿರ್ನಾಮ,ಭೀತಿ: ಎಚ್ ಆರ್ ಎಲ್ ಎನ್ ವರದಿ.