November 21, 2024

Vokkuta News

kannada news portal

ಕ್ರೀಡೆಯಲ್ಲಿ ಫಲಿತಾಂಶವನ್ನು ಸಮವಾಗಿ ಸ್ವೀಕರಿಸಿ:ಟೀಮ್ ಬ್ಲಾಕ್ & ವೈಟ್ ಉಳ್ಳಾಲ ಪಂದ್ಯಾಟದಲ್ಲಿ ಎ. ಕೆ. ಎಮ್ ಆಶ್ರಫ್.

ಉಳ್ಳಾಲ: ಟೀಮ್ ಬ್ಲಾಕ್ ಅಂಡ್ ವೈಟ್ ಉಳ್ಳಾಲ ವತಿಯಿಂದ ಹೊನಲು ಬೆಳಕಿನ ಪಂದ್ಯಾಟ ಶನಿವಾರ ಸಂಜೆ ಉಳ್ಳಾಲ ಭಾರತ್ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಮ್ ಅಶ್ರಫ್ ಅವರು ಮಾತನಾಡಿ ಕ್ರೀಡೆಯಲ್ಲಿ ಯಾವುದೇ ಜಾತಿ-ಬೇಧ ಇಲ್ಲದೇ ಇರುವುದರಿಂದ ಇಂದು ನಾವೆಲ್ಲರೂ ಕ್ರೀಡೆಯಲ್ಲಿ ಎತ್ತರಕೆ ಹೋಗಲು ಸಾಧ್ಯವಾಗಿದೆ. ಭಾರತ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಾಟದಲ್ಲಿ ಭಾರತ ಗೆಲವು ಕನಸು ಖಂಡಿದ ನಾವು ಸೋಲು ನಮಗೆಲ್ಲರಿಗೂ ನೋವನ್ನು ಉಂಟುಮಾಡಿದೆ ಆದರೆ ಸೋಲು ಮತ್ತು ಗೆಲವು ಜೀವನದಲ್ಲಿ ಇದ್ದೆ ಇರುತ್ತದೆ ಆದುದರಿಂದ ಸೋಲನ್ನು ನಾವು ಪಾಠ ಎಂದು ತಿಳಿದುಕೊಂಡು ಗೆಲವುಗೆ ನಾವು ಮುಂದಿನ ಹೆಜ್ಜೆ ಹಾಕಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಾರುತಿ ಯುವಕ ಮಂಡಲ ಸದಸ್ಯರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಪ್ರಶಸ್ತಿ ವಿಜೇತ ಸಜೀದ್ ಉಳ್ಳಾಲ್ ಮತ್ತು ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಉಮಾ ಮಹೇಶ್ವರಿ ಅಕಾಡೆಮಿ ಎರಡು ಸದಸ್ಯರಿಗೆ ಸನ್ಮಾನಿಸಲಾಯಿತು.

ಮಾದರಿ ಸಮಾಜ ಸೇವೆ ನಡೆದುಕೊಂದು ಬಂದಿರುವ ಬ್ಲಾಕ್ ಅಂಡ್ ವೈಟ್ ಟೀಮ್ ವತಿಯಿಂದ ಐದು ಬಡ ಕುಟುಂಬಕ್ಕೆ ಹೊಲಿಗೆ ಯಂತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ನವಾಜ್ ನರೇಂಗನ, ಯಾಫ್ಕ್ ವುಡ್ ಇಂಡಸ್ಟ್ರಿ ಮಾಲಕ ಶಾಬಾಝ್, ಉಮಾ ಮಹೇಶ್ವರಿ ಅಕಾಡೆಮಿ ಗೋಪಿನಾಥ್,ಶಾಕಿರ್ ಐ.ಕೆ.ಬಿ,ನೌಫಲ್ ಕೃಷ್ಣಾಪುರ,ಶಫಿಕ್ ಐಕೊ,ಶಾಹೀರ್ ಎಸ್.ಎ ಇಂಟರಿಯರ್ ಮತ್ತು ಬ್ಲಾಕ್ ಅಂಡ್ ವೈಟ್ ಟೀಮ್ ಸದಸ್ಯರು ಉಪಸ್ಥಿತರಿದ್ದರು.

ಸಮದ್ ಬಸ್ತಿಪಡ್ಪು ಅವರು ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.