July 27, 2024

Vokkuta News

kannada news portal

ಡಿ.10 ಎಸ್ಕೆಎಸ್ಸೆಮ್ ನಿಂದ ತಲಪಾಡಿಯಲ್ಲಿ ಸನದು ಪ್ರಧಾನ, ಏಕದಿನ ಸಲಫಿ ಸಮ್ಮೇಳನ.

ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಮಂಗಳೂರು ಇದರ ವತಿಯಿಂದ ಉಳ್ಳಾಲ ತಾಲೂಕಿನ ತಲಪಾಡಿಯಲ್ಲಿ ವಿವಿಧ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಒಳಗೊಂಡ ಏಕದಿನ ಸಲಫಿ ಸಮ್ಮೇಳನ ಡಿಸೆಂಬರ್ 10 ನೇ ತಾರೀಕು ಆದಿತ್ಯವಾರ ತಲಾಪಡಿಯ ಮಸ್ಜಿದುಲ್ ಅಬ್ರಾರ್ ಆವರಣದಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಅಧೀನ ಶೈಕ್ಷಣಿಕ ವಿದ್ಯಾರ್ಥಿಗಳಿಗೆ ಸನದು ದಾನ , ಮಹಿಳಾ ,ಯುವ ಸಮಾವೇಶ ಹಾಗೂ ದಾವಾ ಕಾರ್ಯಕ್ರಮ ಜರುಗಲಿದೆ.

ಬೆಳಿಗ್ಗೆ 9.30 ರಿಂದ ಮಹಿಳಾ ಸಮಾವೇಶ ನಡೆಯಲಿದ್ದು,ಅಪರಾಹ್ನ 1.45 ರಿಂದ ಯುವ ಸಮಾವೇಶ ನಡೆಯಲಿದೆ. ಸಂಜೆ 4.30 ರಿಂದ ದಾವಾ ಸಮಾವೇಶ ನಡೆಯಲಿದ್ದು, 6.30 ರಿಂದ ರಾತ್ರಿ 9.30 ರವರಿಗೆ ದಾರುಲ್ ಉಲೂಮ್ ವಿಮೆನ್ಸ್ ಅರೇಬಿಕ್ ಕಾಲೇಜು ತಲಪಾಡಿ ಇದರ ನಿರ್ಗಮಿತ ವಿದ್ಯಾರ್ಥಿಗಳಿಗೆ ಸನದು ದಾನ ನಡೆಯಲಿದೆ.

ಎಸ್ಕೆಎಸ್ಸೆಮ್ ದಾವಾ ವಿಂಗ್ ನಡೆಸುತ್ತಿರುವ ಕುರ್ ಆನ್ ಕಲಿಕೆ, ಲರ್ನ್ ದಿ ಕುರ್ ಆನ್ ಶೈಕ್ಷಣಿಕ ಯೋಜನೆಯ 11 ಮತ್ತು 12 ನೇ ಹಂತದ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮತ್ತು ಬಹುಮಾನ ವಿತರಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೇರಳ ನದ್ವತುಲ್ ಮುಜಾಹಿದೀನ್ ನ ಪ್ರಮುಖ ವಾಗ್ಮಿ ಗಳಾದ ಟಿ. ಪಿ. ಅಬ್ದುಲ್ಲಾ ಕೋಯ ಮದನಿ, ಡಾ. ಹುಸೈನ್ ಮಡವೂರು,ನೂರ್ ಮಹಮ್ಮದ್ ನೂರ್ ಶಾ, ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮಂಗಳೂರು ಇದರ ಅಬ್ದುಲ್ ಬಶೀರ್ ಶಾಲಿಮಾರ್, ದಾರೂಲ್ ಉಲೂಮ್ ಸಂಸ್ಥೆ ತಲಪಾಡಿ ಇದರ ಮೂಸಾ ತಲಪಾಡಿ,
ಶೇಕ್ ಡಾ. ಅಬೂ ಉಮರ್, ಪರ್ವೇಜ್ ಅಹಮದ್ ಉಮ್ರಿ ಮದನಿ, ಮೌಲವಿ ಅನ್ಸಾರ್ ನನ್ಕಂಡ,ಮೌಲವಿ ಆಲಿ ಶಾಕಿರ್ ಮುಂಡೆರಿ,ಶೇಕ್ ಅಬ್ದುಲ್ ರಹ್ಮಾನ್ ಅರನ್ ಮಕ್ಕಿ , ಝೂಬೈರ್ ಪೀಡಿಯೇಕ್ಕಲ್, ಶೇಕ್ ಶಮೀಮ್ ಫೌಝೀ ಮದನಿ , ಮೌಲವಿ ಆಹ್ಮದ್ ಅನಸ್, ಮುಸ್ತಾಫಾ ದಾರಿಮಿ ಮುಂತಾದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.