June 14, 2024

Vokkuta News

kannada news portal

ಪಿ.ಎ.ಗ್ರೇಡ್ ಕಾಲೇಜು, ರೆಡ್ ಕ್ರಾಸ್,ಲೇಡಿ ಗೋಶನ್ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ.

ಉಳ್ಳಾಲ: ಉಳ್ಳಾಲದ ನರಿಂಗಾನದ ಪಿ. ಎ.ಫಸ್ಟ್ ಗ್ರೇಡ್ ಕಾಲೇಜು,ಯೂತ್ ರೆಡ್ ಕ್ರಾಸ್,ರಾಷ್ಟ್ರೀಯ ಸೇವಾ ಯೋಜನೆ, ಐ.ಕ್ಯೂ. ಎ.ಸಿ,ಮಂಗಳೂರು ಲೇಡಿ ಗೋಷನ್ ಆಸ್ಪತ್ರೆ ಯ ಜಂಟಿ ಸಹಯೋಗದಲ್ಲಿ ಇಲ್ಲಿನ ಇ- ಲರ್ನಿಂಗ್ ಸೆಂಟರ್ ನಲ್ಲಿ ಇತ್ತೀಚೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. ಶಿಬಿರದ ಆರಂಭದಲ್ಲಿ ರಕ್ತದಾನದ ಮಹತ್ವದ ಬಗ್ಗೆ ಅತಿಥಿಗಳು ಮಾತನಾಡಿದರು.

ಶಿಬಿರದಲ್ಲಿ ಸಂಸ್ಥೆಯ ಪ್ರಮುಖರಾದ ಅಬ್ದುಲ್ಲಾ ಇಬ್ರಾಹಿಮ್,ರೆಡ್ ಕ್ರಾಸ್ ಸೊಸೈಟಿ ಯ ಡಾ.ಸಚ್ಚಿದಾನಂದ ರೈ,ಪ್ರಾಂಶುಪಾಲ ಸರ್ಫರಾಜ್ ಹಾಸಿಮ್,ಅಥಿತಿಗಳಾದ ಪ್ರವೀಣ್ ಕುಮಾರ್ , ಅಬ್ಬಾಸ್ ಉಚ್ಚಿಲ್, ರಮೀಸ್ ಎಂ. ಕೆ, ಸಲೀಮುಲ್ಲಾ ಖಾನ್, ಕೆ.ಪೀ.ಸೂಫಿ, ಸಜೀಶ್ ರಘುನಾಥನ್, ಸಯೀದ್ ಆಮೀನ್ ಅಹಮದ್, ಮುಹಮ್ಮದ್ ಫೈಝಲ್ ಮತ್ತಿತರರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.