June 22, 2024

Vokkuta News

kannada news portal

ಡಿ.1 ಉಳ್ಳಾಲದಲ್ಲಿ ಯುನಿವೆಫ್ ನಿಂದ ಪ್ರವಾದಿ ಸೀರತ್ ಅಭಿಯಾನ 23 ಸಂದೇಶ ಕಾರ್ಯಕ್ರಮ.

ಮಂಗಳೂರು: ಯೂನಿವರ್ಸಲ್ ವೆಲ್ಫೇರ್ ಫಾರಮ್ ಕರ್ನಾಟಕ ವತಿಯಿಂದ ಪ್ರತಿ ವರ್ಷವು ಆಯೋಜಿಸುತ್ತಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಎಂಬ ಇಸ್ಲಾಮಿನ ಅಂತಿಮ ಪ್ರವಾದಿ ಮುಹಮ್ಮದ್ (ಸ. ಅ) ರವರ ಸಂದೇಶ ಪ್ರಚಾರ ಸೀರತ್ ಅಭಿಯಾನ 23 ರ ಭಾಗವಾಗಿ ಡಿಸೆಂಬರ್ 1 ರಂದು ಉಳ್ಳಾಲದಲ್ಲಿ ಸಂದೇಶ ಪ್ರಚಾರ ಸಭಾ ಕಾರ್ಯಕ್ರಮ ನಡೆಯಲಿದೆ.

ಉಳ್ಳಾಲ ನಗರ ಪೇಟೆ ನಗರ ಸಭಾ ಆವರಣದಲ್ಲಿ ಸಂಜೆ ಘಂಟೆ 7.00 ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಸಭಾ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಮುಖ್ಯಸ್ಥ ರಾದ ಜ. ರಫಿಉದ್ದೀನ್ ಕುದ್ರೋಳಿ ರವರು ನಾವು,ಮುಸ್ಲಿಮ್ ಸಮುದಾಯ ಮತ್ತು ಪ್ರವಾದಿ ಮುಹಮ್ಮದ್ ಸ. ಅ. ಎಂಬ ವಿಷಯದ ಬಗ್ಗೆ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.