January 3, 2025

Vokkuta News

kannada news portal

ಉಳ್ಳಾಲ, ಪೊಲೀಸ್ ಪ್ರಕರಣ ವಿರೋಧಿಸಿ ಡಿವೈಎಫ್ಐ, ಸಂಘಟನೆಗಳಿಂದ ಸ್ಟೇಶನ್ ಚಲೋ.

ಉಳ್ಳಾಲ: ಇತ್ತೀಚೆಗೆ ಉಳ್ಳಾಲದ ತೊಕ್ಕೊಟ್ಟು ವಿನಲ್ಲಿ ನಡೆದ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿರುದ್ಧದ ಎಡ ಸಂಘಟನೆ ಡಿವೈಎಫ್ಐ ಏರ್ಪಡಿಸಿದ್ದ ಪ್ರತಿಭಟನೆ ಯಲ್ಲಿ ಭಾಗವಹಿಸಿದ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್ ಮತ್ತಿತರರ ವಿರುದ್ಧ ಉಳ್ಳಾಲ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು, ಈ ರೀತಿಯ ಪೊಲೀಸ್ ನಡೆ ರಾಜಕೀಯ ಪ್ರಭಾವಿತ, ಅನ್ಯಾಯಯುತ ಕ್ರಮ,ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಪ್ರಜಾಸತ್ತಾತ್ಮಕ ರೀತಿಯ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಇಂದು ದಿವೈಎಫ್ಐ ಮತ್ತು ಸಮಾನ ಮನಸ್ಕ ಸಂಘಟನೆಗಳು ಕಾಮ್. ಮುನೀರ್ ಕಾಟಿಪಳ್ಳ ನೇತ್ರತ್ವದಲ್ಲಿ ನಗರದ ಮಾಸ್ತಿ ಕಟ್ಟೆ ಯಿಂದ ಉಳ್ಳಾಲ ಅಬ್ಬಕ್ಕ ವೃತ್ತದಲ್ಲಿನ ಪೊಲೀಸ್ ಸ್ಟೇಶನ್ ವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

ಪ್ರತಿಭಟನೆಯಲ್ಲಿ ಮಂಗಳೂರು ನಗರ ಪೊಲೀಸರು, ಪೊಲೀಸ್ ಆಯುಕ್ತರು , ಸ್ಥಳೀಯ ಶಾಸಕರು,ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಘೋಷಣೆ ಕೂಗಲಾಯಿತು.
ಪೊಲೀಸ್ ಆಯುಕ್ತರ ನಡೆ, ಪ್ರಜಾ ಸತ್ತಾತ್ಮಕಾ ಪ್ರತಿಭಟನೆಗೆ ಅನುಮತಿ ನಿರಾಕರಣೆ,ಜಿಲ್ಲೆಯಲ್ಲಿ ಎಡ ಸಂಘಟನೆಗಳ ಕಾರ್ಯ ವೈಖರಿ, ಜನಪರ ಹೋರಾಟ ಇತ್ಯಾದಿ ವಿಷಯಗಳ ಬಗ್ಗೆ ಮುನೀರ್ ಕಾಟಿಪಳ್ಳ ಮತ್ತು ಸಂತೋಷ್ ಕುಮಾರ್ ಬಜಾಲ್ ಮಾತನಾಡಿದರು.

ಜಿಲ್ಲಾಧ್ಯಕ್ಷರಾದ ಬೀ.ಕೆ ಇಮ್ತಿಯಾಝ್,ಸಂತೋಷ್ ಬಜಾಲ್, ಜೀವನ್ ಕುತ್ತಾರ್, ನಿತಿನ್ ಕುತ್ತಾರ್, ಯಾದವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಮಾತನಾಡಿದರು,ಸುಕುಮಾರ್ ತೊಕ್ಕೋಟ್ಟು, ಸುನಿಲ್ ಕುಮಾರ್ ಬಜಾಲ್,ಕೃಷ್ಣಪ್ಪ ಸಾಲ್ಯಾನ್, ಮಹಿಳಾ ಹೋರಾಟಗಾರರಾದ ಪ್ರಮೀಳಾ ದೇವಾಡಿಗ, ಪ್ರಮೀಳಾ ಶಕ್ತಿನಗರ, ಅಸುoತ ಡಿಸೋ ಜ, ಸಿಪಿಐಮ್ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ದಿವೈಎಫ್ಐ ಮುಖಂಡರಾದ ತಯ್ಯುಬು ಬೆಂಗರೆ, ಪ್ರಗತಿಪರ ಚಿಂತಕರಾದ, ಜೆ,ಇಬ್ರಾಹಿಂ, ಮುಖಂಡರಾದ ಶೇಖರ್ ಕುಂದರ್, ಚಂದ್ರಹಾಸ್ ಕುತ್ತಾರ್, ಸಿಐಟಿಯು ಜಿಲ್ಲಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿ, ಕಾರ್ಮಿಕ ಮುಖಂಡ ರೋಹಿದಾಸ್, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷರಾದ ಹೈದರ್ ಹರೇಕಳ, ರಝಕ್ ಮುಡಿಪು, ಅಷ್ಟಾಕ್ ಅಳೇಕಳ, ಅಮೀರ್ ಅಲಿ ಉಳ್ಳಾಲ ಬೈಲ್, ಅಬ್ದುಲ್ ಲತೀಫ್ ಬೈಲ್, ಮತ್ತಿತರರು ಹಾಜರಿದ್ದರು.