June 13, 2024

Vokkuta News

kannada news portal

ಚಂದ್ರ ದರ್ಶನ, ಮಾ.12 ರಿಂದ ಕರಾವಳಿಯಲ್ಲಿ ರಂಝಾನ್ ವೃತ ಆರಂಭ

ಮಂಗಳೂರು: ಇಂದು 11-03-2024 ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ರಮಝಾನ್ ತಿಂಗಳ ಪ್ರಥಮ ಚಂದ್ರದರ್ಶನ ವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್‌ ಅಲ್ ಅಝ್ಹರಿ ಮೌಲವೈಯವರ ನಿರ್ದೇಶನದಂತೆ ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಜುಮಾ ಮಸೀದಿಯ ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್ ರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಾದ್ಯಂತ ನಾಳೆಯಿಂದ ರಮಝಾನ್ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ

ಉಭಯ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ನಾಳೆಯಿಂದ ಉಪವಾಸ ಆರಂಭಗೊಳ್ಳಲಿದ್ದು, ಇಂದು ರಾತ್ರಿ ದಿನವಹಿ ನಮಾಝಿನೊಂದಿಗೆ ವಿಶೇಷ ಪ್ರಾರ್ಥನೆ ತರಾವೀಹ್ ನಮಾಝ್ ಜರುಗಲಿದೆ.