July 27, 2024

Vokkuta News

kannada news portal

ಪ್ರಜಾ ಪ್ರಭುತ್ವವನ್ನು ರಕ್ಷಿಸಿಯೇ ಸಿದ್ಧ ತಮಿಳುನಾಡು ಎಸ್ಡಿಪಿಐ ರಾಜ್ಯ ಸಮ್ಮೇಳನದಲ್ಲಿ ಅಬ್ದುಲ್ ಮಜೀದ್.

ಮದುರೈ : ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇಂದು ಸೇವ್ ಡೆಮೊಕ್ರಸಿ ವಿಷಯದಲ್ಲಿ ಈ ದೇಶಕ್ಕೆ ಒಂದು ಸಂದೇಶ ನೀಡಲು ಬಯಸಿದೆ. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಜಾಪ್ರಭತ್ವವಾದವನ್ನು ಸಂರಕ್ಷಸಲು , ಜಾತ್ಯೀತತೆಯನ್ನು ಸಂರಕ್ಷಿಸಲು,ಪ್ರತಿ ಬಾರಿಯೂ ಮುಂಚೂಣಿಯಲ್ಲಿ ಇರುತ್ತದೆ ಎಂದು ಕರ್ನಾಟಕ ರಾಜ್ಯ ಎಸ್ಡಿಪಿಐ ಅಧ್ಯಕ್ಷರಾದ ಅಬ್ದುಲ್ ಮಜೀದ್ ಹೇಳಿದರು. ಅವರು ಇಂದು ಮದುರೈ ನಲ್ಲಿ ನಡೆದ ಸೇವ್ ಡೆಮಾಕ್ರಸಿ ಎಸ್ಡಿಪಿಐ ರಾಜ್ಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ತಮಿಳು ನಾಡಿನಲ್ಲಿ ಇತ್ತೀಚೆಗೆ ಎ.ಐ.ಎ.ಡಿ.ಎಂ.ಕೆ ಪಕ್ಷವು ಬಿಜೆಪಿಯೊಂದಿಗೆ ತನ್ನ ಮೈತ್ರಿ ಕಡಿದು ಕೊಂಡ ನಂತರ ಎಡ್ಡಿಪಿಐ ಪಕ್ಷದೊಂದಿಗೆ ಮೈತ್ರಿ ಏರ್ಪಡಿಸಿರುವುದು ಬಾರಿ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಅಬ್ದುಲ್ ಮಜೀದ್ ಅವರು ಮುಂದುವರಿದು ಹೇಳುತ್ತಾ, ಸಹೋದರರೇ, ನಿಮಗೆಲ್ಲರಿಗೂ ತಿಳಿದಿದೆ ಈ ದೇಶ ಭಾರತ ಈ ಸಮ್ಮೇಳನದಲ್ಲಿ ನಾವು ಸ್ವತಂತ್ರವಾಗಿ ಕುಳಿತಿರುವುದಕ್ಕೆ ಸ್ವಾತಂತ್ರ್ಯ ಕಾರಣ ಇದರ ಹಿಂದೆ ಭಾರೀ ತ್ಯಾಗ ಬಲಿದಾನವಾಗಿದೆ. ನೂರಾರು ವರ್ಷ ಈ ದೇಶ ಬ್ರಿಟಿಷರ ಆಡಳಿತದಲ್ಲಿ ಇತ್ತು . ಈ ದೇಶವನ್ನು ಸ್ವಾತಂತ್ರ್ಯ ಗೊಳಿಸಲು ನಮ್ಮ ಲಕ್ಷಾಂತರ ಜನರು ಬಲಿ ಹೊಂದಿದ್ದಾರೆ. ತ್ಯಾಗ ಬಲಿದಾನ ನೀಡಿ ಈ ದೇಶವನ್ನು ಸ್ವಾತಂತ್ರ್ಯ ಗೊಳಿಸಿದ್ದಾರೆ. ಈ ದೇಶವನ್ನು ಸ್ವಾತಂತ್ರ್ಯ ಗೊಳಿಸಿದ ನಂತರ ಈ ದೇಶವನ್ನು ಯಾವ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕೆಂಬುದರ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಲಾಯಿತು. ಅ ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಒಂದು ಸುಂದರ ಸಂವಿಧಾನವನ್ನು ರಚಿಸಲಾಯಿತು.ಈ ಸಂವಿಧಾನದಲ್ಲಿ ಮೌಲ್ಯ ಮತ್ತು ತಿರುಳು ಜಾತ್ಯಾತೀತ ವಾದವಾಗಿದೆ, ಪ್ರಜಾಪ್ರಭುತ್ವ ವಾಗಿದೆ ಎಂಬುದನ್ನು ಭಾರತದ ಜನರಾದ ನಾವು ನಮಗೆ ಅರ್ಪಿಸಿಕೊಂಡೆವು.

ಹಾಗೂ ಮುಂದುವರಿದು ಈ ಸಂವಿಧಾನವನ್ನು ನಾವು ಸ್ವೀಕರಿಸಿದ್ದೇವೆ ಎಂದೂ ಕೂಡಾ ನಾವು ಪ್ರತಿಜ್ಞೆ ಮಾಡಿದ್ದೇವೆ. ಮಾತ್ರವಲ್ಲ ಈ ದೇಶದ ಪ್ರಜಾ ಪ್ರಭುತ್ವವನ್ನು ಮತ್ತು ಜಾತ್ಯಾತೀತ ತೆಯನ್ನು ಸದಾಕಾಲ ಸಂರಕ್ಷಿಸುತ್ತೇವೆ ಎಂದು ಹೇಳಿದ್ದೇವೆ. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿದೆ.ಮತ್ತು ನಾವು ವಿರೋಧ ಪಕ್ಷವಾಗಿ ಈ ದೇಶದ ಆಡಳಿತ ನಡೆಸುವ ರಾಜ್ಯ ಸರಕಾರವಾಗಿರಲಿ ಕೇಂದ್ರ ಸರಕಾರವಾಗಿರಲಿ ಈ ದೇಶದ ಪ್ರಜಾ ಪ್ರಭುತ್ವಕ್ಕೆ ಇರುವ ಸವಾಲುಗಳನ್ನು ಅಥವಾ ಈ ದೇಶದ ಪ್ರಜಾ ಪ್ರಭುತ್ವವನ್ನು ಬಲಹೀನ ಗೊಳಿಸಲು ಪ್ರಯತ್ನಿಸುವ ಸರ್ವ ಅಡೆ ತಡೆಗಳನ್ನು ಅಥವಾ ಈ ದೇಶದ ಸಾಮಾನ್ಯ ಜನರ ವಿರುದ್ಧ ಯಾವುದೇ ಷಡ್ಯಂತ್ರ ಸೃಷ್ಟಿಯಾಗುವುದಾದಲ್ಲಿ ಪ್ರತೀ ಬಾರಿಯೂ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಈ ದೇಶದ ದ್ವನಿಯಾಗಿ ಕಾರ್ಯನಿರ್ವಹಿಸಲಿದೆ. ಈ ದೇಶದ ಪ್ರಜಾ ಪ್ರಭುತ್ವ ಇಂದು ಏನಾಗುತ್ತಿದೆ ಈ ದೇಶದ ಪ್ರಜಾ ಪ್ರಭುತ್ವ ಈ ದೇಶದ ಜಾತ್ಯಾತೀತತೆ ಎಲ್ಲಿಗೆ ಬಂದು ನಿಂತಿದೆ. ಈ ದೇಶದ ಒಲಿಂಪಿಕ್ ನಲ್ಲಿ ಸ್ಪರ್ಧಿಸಿ ಸ್ವರ್ಣ ಪದಕ ವಿಜೇತ ಮಹಿಳಾ ಕುಸ್ತಿಪಟುಗಳು ಈ ದೇಶದ ನೂರ ನಲವತ್ತು ಕೋಟಿ ಜನರ ಸಮಕ್ಷಮ ಬಂದು ಹೇಳುತ್ತಾರೆ ಈ ದೇಶದ ಬಿಜೆಪಿ ಪಕ್ಷದ ನಾಯಕ ಬ್ರಿಜ್ ಭೂಷಣ್ ಸಿಂಗ್ ನಮ್ಮ ವಿರುದ್ಧ ಅಪರಾಧ ವೆಸಗಿದ್ದಾನೆ. ಈ ದೇಶದ ನೂರ ನಲವತ್ತು ಕೋಟಿ ಜನತೆಗೆ,ಈ ದೇಶದ ಅಷ್ಟೂ ರಾಜಕೀಯ ಪಕ್ಷಕ್ಕೆ , ಈ ದೇಶದ ಅಷ್ಟೂ ಕಾರ್ಯ ಕರ್ತರಿಗೆ ,ಈ ದೇಶದ ಅಷ್ಟೂ ರಾಜಕೀಯ ನಾಯಕರಿಗೆ, ಅಪರಾಧಿ ಬ್ರಿಜ್ ಭೂಷಣ್ ಸಿಂಗ್ ಅನ್ನು ಒಂದು ದಿವಸದ ಮಟ್ಟಿಗೆ ಅಥವಾ ಕೇವಲ ಒಂದು ಗಂಟೆಯ ಅವಧಿಗೆ ಈ ದೇಶದ ಜೈಲಿಗೆ ಕಳುಹಿಸಲು ಅಸಾದ್ಯ ವಾಗಿದೆ ಎಂದರೆ ಈ ದೇಶದ ವ್ಯವಸ್ಥೆ ಎಲ್ಲಿಯ ಮಟ್ಟಕ್ಕೆ ತಲುಪಿದೆ ಎಂದು ನಾವು ಆರಿಯಬೇಕಿದೆ. ಆದುದರಿಂದ ಪ್ರಜಾ ಪ್ರಭುತ್ವವನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಬೇಕಿದೆ . ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕೈಗೊಂಡ ಪ್ರಜಾ ಪ್ರಭುತ್ವವನ್ನು ಸಂರಕ್ಷಿಸುವ ಕಾರ್ಯದೊಂದಿಗೆ ಈ ದೇಶದ ಜನರು ಜೊತೆಗೂಡ ಬೇಕಿದೆ ಎಂದು ಕರೆ ನೀಡಿದರು.

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸ್ಥಾಪನೆಯಾಗಿ ಕೇವಲ ಹದಿನೈದು ವರ್ಷವಾಗಿದೆ. ಕೇವಲ ಹದಿನೈದು ವರ್ಷದಲ್ಲಿ ಈ ಪಕ್ಷ ಇಷ್ಟೊಂದು ಸಾಧನೆ ಮಾಡಿದ್ದು, ಇನ್ನೂ ಮುಂದುವರಿದು ಐವತ್ತು ವರ್ಷ ಈ ಪಕ್ಷದ ಪ್ರತೀ ಕಾರ್ಯಕರ್ತರು, .ನಾಯಕರು, ನಿಷ್ಠೆಯಿಂದ ಈ ಪಕ್ಷಕ್ಕಾಗಿ ಕಾರ್ಯ ನಿರ್ವಹಿಸಿದರೆ ಉತ್ತಮ ಫಲಿತಾಂಶವನ್ನು ತರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಸಮ್ಮೇಳನದಲ್ಲಿ ತಮಿಳು ನಾಡು ರಾಜ್ಯ ಎಸ್ಡಿಪಿಐ ಅಧ್ಯಕ್ಷರಾದ ನೆಲ್ಲೈ ಮುಬಾರಕ್, ಎ.ಐ.ಎ.ಡಿ.ಎಂ.ಕೆ ನಾಯಕ ಮತ್ತು ತಮಿಳುನಾಡು ವಿರೋಧ ಪಕ್ಷ ಎಡಪ್ಪಾಡಿ. ಕೆ .ಪಳನಿ ಸ್ವಾಮಿ,ಇನ್ನಿತರ ರಾಜ್ಯ ಮತ್ತು ದೇಶ ಮಟ್ಟದ ಮುಖಂಡರು ಭಾಗವಹಿಸಿದ್ದರು.