January 26, 2026

Vokkuta News

kannada news portal

ಬ್ಯಾರಿ ಮಹಾ ಸಭಾ ನಿಯೋಗದಿಂದ ಕೆ.ಎಸ್.ಮೊಹಮ್ಮದ್ ಮಸೂದ್ ಭೇಟಿ, ಸಮಾವೇಶ ಬಗ್ಗೆ ಸಲಹಾಪೇಕ್ಷೆ.

ಮಂಗಳೂರು: ಅಖಿಲ ಭಾರತ ಬ್ಯಾರಿ ಮಹಾ ಸಭಾ ವತಿಯಿಂದ ಜನವರಿ ಎಂಟರಂದು ಮಂಗಳೂರು ಪುರಭವನದಲ್ಲಿ ಆಯೋಜಿಸಲಿರುವ ಉದ್ದೇಶಿತ ದ.ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶದ ರೂಪು ರೇಷೆ, ಇತ್ಯಾದಿ ವಿಷಯಗಳ ಬಗ್ಗೆ ಇಂದು ಅಬ್ದುಲ್ ಅಝೀಝ್ ಬೈಕಂಪಾಡಿ ನೇತೃತ್ವದ ನಿಯೋಗ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಹಾಜಿ ಕೆ.ಎಸ್.ಮೊಹಮ್ಮದ್ ಮಸೂದ್ ರವರನ್ನು ಭೇಟಿ ಮಾಡಿ ಸಮಾವೇಶದ ರೂಪು ರೇಷಗಳ ಬಗ್ಗೆ ಸಲಹೆ ಅಪೇಕ್ಷಿಸಲಾಯಿತು. ನಿಯೋಗ ವತಿಯಿಂದ ಮಸೂದ್ ರವರನ್ನು ಸನ್ಮಾನ ಮಾಡಲಾಯಿತು.
ನಿಯೋಗದಲ್ಲಿ ಪದಾಧಿಕಾರಿಗಳಾದ ಅಬ್ದುಲ್ ಜಲೀಲ್ ಕೃಷ್ಣಾಪುರ, ಅಶ್ರಫ್ ಬದ್ರಿಯಾ, ಮೊಹಮ್ಮದ್ ಹನೀಫ್ ಹಾಜಿ, ಅಬ್ದುಲ್ ಖಾದರ್ ಇಡ್ಮಾ, ಅಬ್ದುಲ್ ರಹಿಮಾನ್ ಕೋಡಿಜಾಲ್ ಉಪಸ್ಥಿತರಿದ್ದರು.