January 20, 2025

Vokkuta News

kannada news portal

ಇಂದು ನಗರದಲ್ಲಿ ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ.

ಮಂಗಳೂರು: ಜ.8 ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಇಂದು 08 ಜನವರಿ 2025 ರಂದು ಮಂಗಳೂರು ನಗರದ ಪುರಭವನದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರತಿನಿಧಿ ಸಮಾವೇಶ ನಡೆಯಲಿದ್ದು, ಸಮಾವೇಶವನ್ನು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ರವರು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಮತ್ತು ಜಮಾತ್ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು, ಸರಕಾರದ ವಿವಿಧ ಯೋಜನೆಗಳು, ಉನ್ನತ ಶಿಕ್ಷಣ ಉತ್ತೇಜನ, ಇತ್ಯಾದಿ ವಿಷಯಗಳ ಬಗ್ಗೆ ರಾಜಕೀಯ ಪ್ರಮುಖರು ಮತ್ತು ಸಂಘಟಕರು ಮತ್ತು ಪ್ರತಿನಿಧಿಗಳ ಮಧ್ಯೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಬ್ಯಾರಿ ಪದವೀಧರ ಪದವೀಧರ ವಿದ್ಯಾರ್ಥಿಗಳಿಗೆ ಕೇಂದ್ರ ಯು ಪೀ ಎಸ್.ಸಿ ಶಿಕ್ಷಣದ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಜಮಾತ್ ಪ್ರಮುಖರಿಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ.ಎಂದು ಮಹಾಸಭಾ ಮುಖ್ಯಸ್ಥ ಅಜೀಜ್ ಬೈಕಂಪಾಡಿ ತಿಳಿಸಿದ್ದಾರೆ.