ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷರು ,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳು,ಮತ್ತು ಹಲವು ಧಾರ್ಮಿಕ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಘಟನೆಗಳ ವಿವಿಧ ಹುದ್ದೆಗಳನ್ನು ಹೊಂದಿದ್ದ ಹಾಜಿ ಕೆ.ಎಸ್.ಅಬೂಬಕರ್ ಪಲ್ಲಮಜಲು ರವರು ಇಂದು ನಿಧನರಾಗಿದ್ದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕೆ.ಎಸ್.ಅಬೂಬಕ್ಕರ್ ಪಲ್ಲಮಜಲು ರವರು,ಬಂಟ್ವಾಳದ ಪಲ್ಲಮಜಲು ಮೂಲದವರಾಗಿದ್ದು,ಮಂಗಳೂರಿನ ವಿವಿಧ ಸಂಸ್ಥೆ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು,ಸಾಮಾಜಿಕ ಸೇವೆ, ಸಾಹಿತ್ಯಾಭಿವೃದ್ಧಿ,ಸಾಮುದಾಯಿಕ ಹಿತಾಸಕ್ತಿ,ಧಾರ್ಮಿಕ ಸಂಸ್ಥೆಗಳ ಹುದ್ದೆ ಹೊಂದಿದ್ದರು. ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಓರ್ವ ಸಕ್ರಿಯ ಪದಾಧಿಕಾರಿ ಯಾಗಿದ್ದು,ಕೆ.ಅಶ್ರಫ್ ನೇತೃತ್ವದಲ್ಲಿ ನಡೆದ ಹಲವು ಸಾಮುದಾಯಿಕ ಚಟುವಟಿಕೆಗಳಲ್ಲಿ ಅಹನಿರ್ಶಿ ದುಡಿದಿದ್ದರು. ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್ ನಲ್ಲಿ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಈ ಸಂಘಟನೆಗಳಿಂದ ವಿವಿಧ ಬ್ಯಾರಿ ಸಮುದಾಯದ ಸಾಧಕರಿಗೆ ಮಂಗಳೂರಿನಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿಸಲಾಗಿತ್ತು.
ಮೃತರ ಅಗಲಿಕೆಯಿಂದಾಗಿ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಕುಟುಂಬಕ್ಕೆ ಅವರ ಅಗಲಿಕೆ ಯನ್ನು ತಾಳುವ ಶಕ್ತಿಯನ್ನು ಭಗವಂತನು ನೀಡಲಿ,ಎಂದು ಕೆ.ಅಶ್ರಫ್ ಹೇಳಿಕೆ ನೀಡಿದ್ದಾರೆ.
kannada news portal
ಇನ್ನಷ್ಟು ವರದಿಗಳು
ಎಸ್ಡೀಪಿಐ ಯಿಂದ ಮೇ 27 ರಂದು ಮಂಗಳೂರು ಕಣ್ಣೂರಿನಲ್ಲಿ ಬೃಹತ್ ಜನಾಧಿಕಾರ ಸಮಾವೇಶ
ದ.ಕ.ಜಿಲ್ಲೆಯ ಅಲ್ಪ ಸಂಖ್ಯಾತ ಪ್ರಮುಖ ಉದ್ಯಮಿಗೆ ಕಾಂಗ್ರೆಸ್ ಪಕ್ಷದಿಂದ ವಿ.ಪರಿಷತ್ ಸದಸ್ಯತ್ವ ನೀಡುವಿಕೆಗೆ ಚಿಂತನೆ?
ಎಂ.ಕೆ.ಸ್ಟಾಲಿನ್ ಸಂಪುಟದಲ್ಲಿ ಎರಡು ಮುಸ್ಲಿಮ್ ಪ್ರತಿನಿಧಿಗಳಿಗೆ ಸಚಿವ ಸ್ಥಾನ:ಕೆ. ಎಂ.ಮೊಯ್ದೀನ್.