July 27, 2024

Vokkuta News

kannada news portal

ತಸ್ಲೀಮ್ ಅಹ್ಮದ್ ರಹ್ಮಾನೀ

ಮಲಪ್ಪುರಂ ಉಪ ಚುನಾವಣೆ: ತಸ್ಲೀಮ್ ರಹ್ಮಾನಿ ಎಸ್ಡಿಪಿಐ ಯಿಂದ ಸ್ಪರ್ಧೆ

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮುಸ್ಲಿಮ್ ಪೊಲಿಟಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾದ ತಸ್ಲೀಮ್ ಅಹ್ಮದ್ ರಹ್ಮಾನೀ ರವರು ಕೇರಳದ ಮಲಪ್ಪುರಂ ಲೋಕ ಸಭಾ ಕ್ಷೇತ್ರದ ಉಪ ಚುನಾವಣೆ ಯಲ್ಲಿ ಎಸ್ಡಿಪಿ ಐ ಪಕ್ಷದ ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಕೇರಳದ ನಿರಂತರ ಆಯ್ಕೆ ಯಾಗುತ್ತಿದ್ದ ಮಲಪ್ಪುರಂ ಲೋಕ ಸಭಾ ಸಂಸದರಾದ ಪೀ. ಕೆ. ಕುಂಞ ಆಲಿ ಕುಟ್ಟಿ ರಾಜೀನಾಮೆ ಯಿಂದ ತೆರವಾದ ಮಲಪ್ಪುರಂ ಲೋಕ ಸಭಾ ಸ್ಥಾನಕ್ಕೆ ಏಪ್ರಿಲ್ ನಲ್ಲಿ ಮರು ಚುನಾವಣೆ ನಡೆಯಲಿದೆ. ಕೇರಳದ ವಿಧಾನ ಸಭಾ ಚುನಾವಣೆ ಮತ್ತು ಲೋಕ ಸಭೆ ಉಪ ಚುನಾವಣೆ ಸಮ ಅವಧಿಯಲ್ಲಿ ನಡೆಯಲಿದೆ.

ತಸ್ಲೀಮ್ ಅಹ್ಮದ್ ರಹ್ಮಾನೀ ರವರು ಉತ್ತರ ಭಾರತದ ಮಾನವ ಹಕ್ಕುಗಳ ಹೋರಾಟ ಗಾರ ರಾಗಿದ್ದು, ಜನರ ಸಾಮಾಜಿಕ ನ್ಯಾಯ ದ ಪರ ಹೋರಾಟದಲ್ಲಿ ಹತ್ತು ಹಲವು ಸಂಘಟನೆಗಳ ಮುಖ್ಯಸ್ಥರು ಮತ್ತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ ಹಿರಿಯ ನಾಯಕರು ಆಗಿದ್ದಾರೆ. ತಸ್ಲೀಮ್ ಅಹ್ಮದ್ ರಹ್ಮಾನಿಯವರ ಸ್ಪರ್ಧೆ ಸಾಂಪ್ರದಾಯಿಕ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ನ ಮತವನ್ನು ಬಾಚಿ ಕೊಳ್ಳುವ ಸಾಧ್ಯತೆ ಇದೆಯೇ ಎಂದು ಚರ್ಚೆ ಆರಂಭವಾಗಿದೆ. ಉತ್ತರ ಭಾರತದ ಪ್ರಮುಖ ಮುಸ್ಲಿಮ್ ನಾಯಕರಾದ ತಸ್ಲೀಮ್ ಅಹ್ಮದ್ ರಹಮಾನಿ ಈ ಸ್ಪರ್ಧೆ ಯೊಂದಿಗೆ ದಕ್ಷಿಣ ಭಾರತದ ಮುಸ್ಲಿಮ್ ಸಮುದಾಯದ ರಾಷ್ಟ್ರೀಯ ನಾಯಕ ಸ್ಥಾನಕ್ಕೆ ಅರ್ಹತೆ ಹೊಂದುವರೆ ಎಂಬ ಅಭಿಪ್ರಾಯ ಉಪ ಚುನಾವಣೆ ಯ ಫಲಿತಾಂಶದಲ್ಲಿ ಅಡಗಿದೆ.