November 19, 2024

Vokkuta News

kannada news portal

ಮೋದಿ ಜನ್ಮದಿನ:ಯುವ ಕಾಂಗ್ರೆಸ್ ನಿಂದ ನಿರುದ್ಯೋಗ ದಿವಸ್,ಪಕೋಡ ಸ್ಟಾಲ್ ಪ್ರತಿಭಟನೆ.

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಜನ್ಮದಿನವಾದ ಇಂದಿನ ದಿನವನ್ನು ದ. ಕ.ಜಿಲ್ಲಾ ಯುವ ಕಾಂಗ್ರೆಸ್ ಘಟಕ ವಿಶಿಷ್ಟ  ‘ರಾಷ್ಟ್ರೀಯ ನಿರುದ್ಯೋಗ ದಿನವಾಗಿ’ ಆಚರಿಸುವ ಮೂಲಕ ಜನತೆಗೆ ಪ್ರಧಾನಿ ಮೋದಿಯವರ ಆಡಳಿತ ವೈಫಲ್ಯವನ್ನು ಬಿಂಬಿಸಲು ಪ್ರಯತ್ನಿಸುವ ಕಾರ್ಯಕ್ರಮವನ್ನು ಜರುಗಿಸಿದರು. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್ ರವರ ನೇತೃತ್ವದಲ್ಲಿ ನಿನ್ನೆ ಸಂಜೆ 3.00 ಗಂಟೆಗೆ ಮಂಗಳೂ ರು ನಗರದ ಕ್ಲಾಕ್ ಟವರ್ ಬಳಿ ‘ಟೀ ಸ್ಟಾಲ್’, ‘ಶೂ ಪಾಲೀಸ್’, ‘ಪಕೋಡ ಸ್ಟಾಲ್’ ತೆರದು ಅಣುಕು ಪ್ರದರ್ಶನ ನಡೆಸಿ ಪ್ರತಿಭಟನೆ ನಡೆಸಲಾಯಿತು

ಮಾಜಿ ಸಚಿವ ಬಿ.ರಮಾನಾಥ ರೈ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ, ಮಾಜಿ ಶಾಸಕ ಮೊಯ್ದೀನ್ ಬಾವಾ, ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ಗಣೇಶ್ ಪೂಜಾರಿ, ಶಾಹುಲ್ ಹಮೀದ್, ಸುದರ್ಶನ್ ಜೈನ್, ಡಾ.ಶೇಖರ್ ಪೂಜಾರಿ, ಪ್ರಕಾಶ್ ಸಾಲ್ಯಾನ್, ಚಿತ್ತರಂಜನ್ ಶೆಟ್ಟಿ, ಸಂಶುದ್ದೀನ್ ಬಂದರ್, ಆಶೀತ್ ಪಿರೇರಾ, ಸರ್ಫಾಝ್ ನವಾಝ್ ಬಾಳ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಸುರೇಶ್ ಜೋರಾ ಬಂಟ್ವಾಳ, ಶಾಹುಲ್ ಹಮೀದ್ ಸುಳ್ಯ, ಅನಿಲ್ ಪೈ ಬೆಳ್ತಂಗಡಿ, ಅಶೋಕ್ ಕುಮಾರ್ ಮುಲ್ಕಿ, ಜಯ ಕುಮಾರ್ ಮೂಡಬಿದ್ರೆ, ಸಿದ್ದೀಕ್ ಅಕ್ಬರ್ ಉಪ್ಪಿನಂಗಡಿ, ಶ್ರೀಪ್ರಸಾದ್ ಪುತ್ತೂರು, ಇಬ್ರಾಹೀಂ ನವಾಝ್ ಪಾಣೆಮಂಗಳೂರು, ಅಭಿಷೇಕ್ ಬೆಳ್ಳಿಪ್ಪಾಡಿ, ಫೈಝಲ್ ಕಡಬ, ರಮಾನಂದ ಪೂಜಾರಿ, ದೀಪ್ತಿ ಕೋಟ್ಯಾನ್, ಸೌಮ್ಯ ಲತಾ, ರೋಶನ್ ರೈ, ದಿನೇಶ್ ಪಿ.ಎಸ್, ಟಿ.ಹೊನ್ನಯ್ಯ, ಪ್ರಸಾದ್ ಗಾಣಿಗ, ಶೈಲಜಾ ಅಮರ್ ನಾಥ್, ಉಮೈ ಬಾನು, ಇರ್ಷಾದ್ ಗೂಡಂಗಡಿ, ಹರ್ಷಾದ್ ಮುಲ್ಕಿ, ಶೋಭಾ ಪಡೀಲ್, ಶಕುಂತಲಾ ಶೆಟ್ಟಿ, ತೌಸೀಫ್ ಫರಂಗಿಪೇಟೆ, ಮೀನಾ ಟೆಲ್ಲಿಸ್, ಹಸನ್ ಫಳ್ನೀರ್, ಅಲ್ಫಾಝ್, ಯೂಸುಫ್ ಉಚ್ಚಿಲ್, ಮನ್ಸೂರ್ ಕುದ್ರೋಳಿ, ಕೌಶಿಕ್ ಬೋಳಾರ, ಫಯಾಝ್ ಅಮ್ಮೆಮ್ಮಾರ್, ನಾಗೇಂದ್ರ ಉಜ್ಜೋಡಿ, ಪ್ರತೀಕ್ ಕೊಟ್ಟಾರಿ, ಆಸಿಶ್ ನಾಯ್ಕ್ ಉಪಸ್ಥಿತರಿದ್ದರು.
ದೇಶಾದ್ಯಂತ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಘಟಕ ವಿವಿಧ ರೀತಿಯ ಅಣುಕು ಪ್ರದರ್ಶನ ನೀಡುವ ಮೂಲಕ ಕೇಂದ್ರ ಸರಕಾರದ ಆಡಳಿತ ವೈಫಲ್ಯ ವನ್ನು ಬಿಂಬಿಸಲು ಪ್ರಯತ್ನಿಸಲಾಗಿದೆ.
ನರೇಂದ್ರ ಮೋದಿ ಯವರ ಜನ್ಮ ದಿನವಾದ ಸೆಪ್ಟೆಂಬರ್ 17 ದಿನವನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ನಿರುದ್ಯೋಗ ಡಿವಸ್ ಆಗಿ ಆಚರಿಸಲು ಈ ಹಿಂದೆ ತನ್ನ ಸದಸ್ಯರಿಗೆ ಕರೆ ನೀಡಿತ್ತು, ಇದರ ಭಾಗವಾಗಿ ಇಂದು ಟ್ವಿಟ್ಟರ್ ಅಭಿಯಾನ ನಡೆಸಿ 2.06 ಲಕ್ಷ ಜನರು ಟ್ವೀಟ್ ನಡೆಸಿದ್ದು ಟ್ರೆಂಡ್ ಆಗಿ ದಾಖಲಾಗಿದೆ.