December 8, 2024

Vokkuta News

kannada news portal

ಡಿವೈಎಫ್ಐ ಯಿಂದ ಉದ್ಯೋಗ ಆಗ್ರಹಿಸಿ ಯುವ ಸಮಾವೇಶ.

ಜಿಲ್ಲೆಯಲ್ಲಿ ಪ್ರಾದೇಶಿಕ ಭಾಷಿತ ತುಳುವರಿಗೆ ಉದ್ಯೋಗದಲ್ಲಿ ಅವಕಾಶ ಆಗ್ರಹಿಸಿ ಸಮಾವೇಶ

ಜಿಲ್ಲೆಯಲ್ಲಿ ಸರಕಾರದ ವಿವಿಧ ಯೋಜನೆಯ ಅಡಿಯಲ್ಲಿ ಬೃಹತ್ ಮಟ್ಟದ ಉದ್ಯೋಗ ಅನುಷ್ಠಾನ ಗೊಳ್ಳುತ್ತಿದ್ದು,ಸದ್ರಿ ಉದ್ಯೋಗದ ನೇಮಕಾತಿ ಅವಕಾಶಗಳು ಸ್ಥಳೀಯ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅಲಭ್ಯ ವಾಗುತ್ತಿದ್ದು, ಸ್ಥಳೀಯವಾಗಿ ಮತ್ತು ಪ್ರಾದೇಶಿಕವಾಗಿ ತುಳು ಬಾಶಿತ ಪ್ರತಿಭಾವಂತ ಅಭ್ಯರ್ಥಿಗಳಿಗೆ ಜಿಲ್ಲೆಯಲ್ಲಿ ಸೃಷ್ಟಿ ಯಾಗುವ ಸರಕಾರದ ವಿವಿಧ ಸಂಸ್ಥೆಗಳಲ್ಲಿ ನ ಉದ್ಯೋಗದಲ್ಲಿ ಬಹುಪಾಲು ಅವಕಾಶ ನೀಡಬೇಕೆಂದು ಜಿಲ್ಲೆಯಲ್ಲಿ ಡಿ.ವೈಎಫ್ಐ ಹಿಂದಿನಿಂದಲೂ ವಿವಿಧ ರೀತಿಯ ಹೋರಾಟಗಳನ್ನು ಮಾಡುತ್ತಿದ್ದು,ಅದರ ಭಾಗವಾಗಿ ಯುವ ಜನ ಸಮಾವೇಶ ಹಮ್ಮಿ ಕೊಂಡಿದೆ.

ಈ ಸಮಾವೇಶ ತಾರೀಕು 26 ಸೆಪ್ಟೆಂಬರ್ ರಂದು ಸಂಜೆ 7.00 ಕ್ಕ ಕೊಲ್ಲರ ಕೋಡಿ ಯಲ್ಲಿ ನಡೆಯಲಿದೆ ಇಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.