July 27, 2024

Vokkuta News

kannada news portal

ಸಾಬಿಯಾ ಸೈಫಿ ಅತ್ಯಾಚಾರ,ಹತ್ಯೆ ವಿರೋಧಿಸಿ ಉಳ್ಳಾಲ ಎಸ್ಡಿಪಿಐ ಪ್ರತಿಭಟನೆ.

ಉಳ್ಳಾಲ: ದೆಹಲಿ ಸಿವಿಲ್ ಡಿಫೆನ್ಸ್ ಪೋಲೀಸ್ ಅಧಿಕಾರಿಣಿ ರಾಬಿಯಾ ಸೈಫ್ಫಿ ಯನ್ನು ಇತ್ತೀಚಿಗೆ ದುಷ್ಕರ್ಮಿಗಳು ಅಮಾನುಷವಾಗಿ ಸಾಮೂಹಿಕ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆಗೈದ ಕೃತ್ಯ, ದೇಶದಲ್ಲಿ ಕಾನೂನು ವ್ಯವಸ್ಥೆ ವಿಫಲತೆ, ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ, ಗುಂಪು ಹತ್ಯೆ ಇತ್ಯಾದಿ ಗಳನ್ನು ವಿರೋಧಿಸಿ ಇಂದು ಉಳ್ಳಾಲದ ಮಾಸ್ತಿ ಕಟ್ಟೆ ಯಲ್ಲಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ಘಟಕ ವತಿಯಿಂದ ಸಾರ್ವಜನಿಕ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಉಳ್ಳಾಲ ನಗರ ಸಮಿತಿ ಮುಖ್ಯಸ್ಥರಾದ ಅಕ್ರಮ್ ಹಸನ್ ರವರು ಮಾತನಾಡಿ ಈ ಪ್ರತಿಭಟನೆಯ ಮೂಲಕ ಸತ್ಯ, ನಿಷ್ಟೆ, ಪ್ರಾಮಾಣಿಕ ಪೊಲೀಸು ಉದ್ಯೋಗಸ್ಥರ ಪರ ನಾವಿದ್ದೇವೆ, ಭಾರತದ ಕಾನೂನು ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಆಶಯದ ಅಡಿಯಲ್ಲಿ ಕಾರ್ಯಾಚರಿಸುವ ಪೊಲೀಸರಿಗೆ ನಮ್ಮ ಬೆಂಬಲವಿದೆ. ದೆಹಲಿ ಅತ್ಯಾಚಾರ ಕೃತ್ಯದಲ್ಲಿ ಹತ್ಯೆಯಾದ ಸಾಬೀಯ ಸೈಫ್ಫೀ ಕುಟುಂಬ ಈ ಘಟನೆಯಿಂದ ದೃತಿ ಗೆಡಬಾರದು ಅವರೊಂದಿಗೆ ನಾವಿದ್ದೇವೆ, ಹತ್ಯೆಯಾದ ಸಾಬಿಯಾ ಸೈ ಫ್ಫಿ ಓರ್ವೆ ಮುಸ್ಲಿಮ್ ಅಧಿಕಾರಿಣಿ ಆದ ಕಾರಣದಿಂದ ಅವರ ಮೇಲೆ ಪೂರ್ವಗ್ರಹ ಪೀಡಿತರಾಗಿ ಈ ಕೃತ್ಯ ಎಸಗಲಾಗಿದೆ. ಸ್ವಾತಂತ್ರ್ಯ ಸಿಕ್ಕಿದ ಎಪ್ಪತ್ತು ವರ್ಷ ಗಳಿಂದ ಈ ದೇಶದಲ್ಲಿ ಆರ್.ಎಸ್.ಎಸ್. ಮುಸ್ಲಿಮರನ್ನು,ಕ್ರೈಸ್ತರನ್ನು ಮತ್ತು ಕಮ್ಯುನಿಷ್ಟ್ ರನ್ನು ದ್ವೇಷಿಸಿ ಅವರನ್ನು ದ್ವಿತೀಯ ದರ್ಜೆಯ ಪ್ರಜೆಗಳಾಗಿ ಪರಿಗಣಿಸಿ ನಿರಂತರ ದೌರ್ಜನ್ಯ,ಹತ್ಯೆ ನಡೆಸುತ್ತಿದೆ,ಇದು ಆರ್.ಎಸ್.ಎಸ್ ಸ್ಥಾಪಕ ಗೋಳ್ವಲ್ಕರ್ ರ ಜನಾಂಗೀಯ ದ್ವೇಷದ ಷಡ್ಯಂತ್ರ ಆಗಿದೆ,ಎಂದು ಹೇಳಿದರು.ಸಭೆಯಲ್ಲಿ ನಗರ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರತಿಭಟನೆಯಲ್ಲಿ ಸಾಭಿಯಾ ಸೈಫ್ಫೀ ಹತ್ಯೆಯ ಕೃತ್ಯದ ವಿರುದ್ಧ ಘೋಷಣೆ ಕೂಗಲಾಯಿತು ಮತ್ತು ಭಿತ್ತಿ ಪತ್ರ ಪ್ರದರ್ಶಿಸಲಾಯಿತು .ಪ್ರತಿಭಟನೆಯಲ್ಲಿ ಎಸ್.ಡಿ.ಪೀ.ಐ ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತೆಯರು ಭಾಗವಹಿಸಿದ್ದರು.