July 27, 2024

Vokkuta News

kannada news portal

ಯುನಿವೆಫ್ ಕರ್ನಾಟಕದಿಂದ ನ.5 ರಂದು ಜಿಲ್ಲೆಯಲ್ಲಿ ಸೀರತ್ ಅಭಿಯಾನದ ಪ್ರಯುಕ್ತ ‘ಅರಿಯಿರಿ ಮನುಕುಲದ ಪ್ರವಾದಿ’ ಉದ್ಘಾಟನಾ ಕಾರ್ಯಕ್ರಮ

ಜಿಲ್ಲೆಯಲ್ಲಿ ಸಂಸ್ಥಿಕವಾಗಿ ಸಾಮೂಹಿಕ ಪ್ರವಾದಿ ಸಂದೇಶ ಅಭಿಯಾನ ಮತ್ತು ತಪ್ಪು ಗ್ರಹಿಕೆ ಇಲ್ಲವಾಗಿಸುವಿಕೆಗೆ ಪೂರಕ ಪ್ರಯತ್ನದ ದ್ವಿಮಾಸ ಸಮಗ್ರ ಕಾರ್ಯಕ್ರಮ

ಮಂಗಳೂರು: ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯ ಪ್ರಮುಖ ಸಮಾಜೋ ಧಾರ್ಮಿಕ ಸಂಘಟನೆಯಾದ ಯುನಿವೆಫ್ ಕರ್ನಾಟಕ ಮಂಗಳೂರು ಸೀರತ್ ಅಭಿಯಾನದ ಪ್ರಯುಕ್ತ ಅರುವತ್ತು ದಿವಸಗಳ , ದ್ವಿಮಾಸ ಅವಧಿಯ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಘೋಷವಾಕ್ಯ ದೊಂದಿಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಸಂದೇಶ ಪ್ರಚಾರ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಜರುಗಿಸಲಿದೆ.

ಈ ಪ್ರಯುಕ್ತ ಆರಂಭಿಕವಾಗಿ ನ.5 ರಂದು ಸಂಜೆ 6.30 ಕೆ ನಗರದ ಕಂಕನಾಡಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಜಮ್ಮಿಯತುಲ್ ಫಲಾಹ್ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖ ಪ್ರವಚನ ಕಾರರಾಗಿ ಸಂಸ್ಥೆಯ ಮುಖ್ಯಸ್ಥರಾದ ಜ. ರಫಿಯುದ್ದೀನ್ ಕುದ್ರೋಳಿ ಭಾಗವಹಿಸಲಿದ್ದಾರೆ.

2006 ರಿಂದ ಆರಂಭ ಗೊಂಡ ಪ್ರವಾದಿ ಹ. ಮುಹಮ್ಮದ್ (ಸ) ಅವರ ಜೀವನ ಮತ್ತು ಸಂದೇಶವನ್ನು ಸಾರ್ವತ್ರಿಕ ಗೊಳಿಸುವ ಉದ್ದೇಶದೊಂದಿಗೆ ಒಂದು ಮಹಾ ಅಭಿಯಾನವನ್ನು 16 ವರ್ಷಗಳ ಮೊದಲು ಆರಂಭಿಸಲಾಗಿತ್ತು. ಇಂದು “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ವಾಕ್ಯ ಜಿಲ್ಲೆಯಲ್ಲಿ ಸಾಮೂಹಿಕವಾಗಿ ಪರಿಚಯಿ ಸಲ್ಪಟ್ಟಿದೆ . ಪ್ರತೀ ವರ್ಷ ಈ ಘೋಷಣೆಯೊಂದಿಗೆ ಜನರಲ್ಲಿ ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಯನ್ನು ದೂರೀಕರಿಸುವ ಮತ್ತು ಅವರ ನೈಜ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಈ ಸಂಘಟನೆ ವಿವಿಧ ಸಾಮಾಜಿಕ ಕಾರ್ಯಕ್ರಮದ ಮೂಲಕ ಆಯೋಜಿಸುತ್ತಿದೆ.

ಪ್ರವಾದಿ ಯವರನ್ನು ತಪ್ಪಾಗಿ ನಿಂದಿಸುವರಿಗೆ ವಿಮರ್ಶಕರಿಗೆ , ಟೀಕಾಕಾರಿಗೆ ಮತ್ತು ಗುಂಪು ಹತ್ಯಾ ವಿಧ್ವಂಸ ಕಾರರಿಗೆ,ಕಂಡು ತಿಳಿದವರಿಗೂ ತಿಳಿಯದವರಿಗೂ, ಪ್ರವಾದಿಯ ವರ ಸಂದೇಶವನ್ನು ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಪ್ರತಿ ವರ್ಷ ಕನಿಷ್ಟ 50000 ಸಾಮಾನ್ಯ ಜನತೆಗೆ ಪ್ರವಾದಿಯ ವರ ಸಂದೇಶ ಪರಿಚಯವನ್ನು ಈ ಕಾರ್ಯಕ್ರಮದ ಮೂಲಕ ಮಾಡಲು ಸಾಧ್ಯವಾಗುತ್ತಿದೆ.

ಕಳೆದ 16 ವರ್ಷಗಳಿಂದ ಜಿಲ್ಲೆಯ ವಿವಿಧ ವಾರ್ಡ್,ಗ್ರಾಮ, ನಗರಗಳಲ್ಲಿ ಸಂಚರಿಸಿ ವಾಹನಜಾಥಾ,ಸಾರ್ವಜನಿಕ ಸಭೆ,ಸಂವಾದ,ಕರಪತ್ರ ಹಂಚುವಿಕೆ ಇತ್ಯಾದಿ ಮೂಲಕ ಪ್ರವಾದಿಯ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಬಿತ್ತರಿಸ ಲಾಗುತ್ತಿದೆ. ಸರ್ವ ಸಮುದಾಯಗಳ ಜನರಿಗೆ ಅವರ ಬೀದಿಗಳಲ್ಲಿ ಕನಿಷ್ಠ ಅರ್ಧಗಂಟೆಯ ಅವಧಿಯ ಪ್ರವಾದಿ (ಸ) ಸಂದೇಶಗಳನ್ನು ಆಲಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 3000 ಕಿಲೋ ಮೀಟರ್ ಗಳಷ್ಟು ಸಂಚರಿಸಿ ಈ ಸಂದೇಶಗಳನ್ನು ಪ್ರಚಾರ ಪಡಿಸಲಾಗುತ್ತಿ ರುವ ಈ ಅಭಿಯಾನ ನವಂಬರ್ 05ರಂದು ಉದ್ಘಾಟನೆ ಗೊಂಡು, ನಂತರದ 60 ದಿವಸಗಳ ಸಮಗ್ರ ಕಾರ್ಯಕ್ರಮ ಜರುಗಿ,ಸಾರ್ವಜನಿಕ ಸಮಾರೋಪ ಕಾರ್ಯಕ್ರಮ ನಡೆಯಲಿದೆ.

14 ಸಾರ್ವಜನಿಕ ಭಾಷಣಗಳು , ಹಲವು ಕಾರ್ನರ್ ಮೀಟಿಂಗ್ ಗಳು , ಭಾಷಣ ಮತ್ತು ಕ್ವಿಝ್ ಸ್ಪರ್ದೆಗಳು , ಸಾಮಾಜಿಕ ಜಾಲತಾಣಗಳಲ್ಲಿ , ದಿನಕ್ಕೊಂದು ಹದೀಸ್ ಹಾಗು ಹಿರಿಯರ ಒಕ್ಕಣೆ (ಬೈಟ್ಸ್) .,..ಹೀಗೆ ಸುಮಾರು 16 ವರ್ಷಗಳ ಕಾಲ ಲಕ್ಷಗಟ್ಟಲೆ ಜನರನ್ನು ತಲುಪು ಈ ಸಂದೇಶವನ್ನು ಪರಿಚಯಿಸಲಾಗಿದೆ.
ಈ ಅಭಿಯಾನದ ಮುಖ್ಯ ಉದ್ದೇಶವೇ ಪ್ರವಾದಿ ಹ. ಮುಹಮ್ಮದ್ (ಸ) ರವರ ವ್ಯಕ್ತಿತ್ವದ ಪರಿಪೂರ್ಣ ಅನಾವರಣವಾಗಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರವಾದಿ ಹ. ಮುಹಮ್ಮದ್ (ಸ) ರವರ ಆದರ್ಶ ಮತ್ತು ಸಂದೇಶ ಜಗತ್ತಿನ ಸರ್ವರಿಗೂ ಇನ್ನೂ ತಲುಪಿಲ್ಲ, ವಾಸ್ತವವನ್ನು ಜನರಿಗೆ ತಲುಪಿಸುವುದು ಪ್ರತಿಯೋರ್ವನ ಕರ್ತವ್ಯವಾಗಿದೆ. “ಯುನಿವೆಫ್ ಕರ್ನಾಟಕ” ಧರ್ಮ ನೀಡಿರುವ ಈ ಕರ್ತವ್ಯ ವನ್ನು ಮಾಡಲು ಹೊರಟಿದೆ.ಈ ಹೊಣೆಗಾರಿಕೆ ಪೂರೈಸಿದಾಗ ಮಾತ್ರ ಜನರಲ್ಲಿ ಪ್ರವಾದಿಯ(ಸ) ಬಗ್ಗೆ ಸದ್ವಿಚಾರಗಳು ಉಂಟಾಗುತ್ತದೆ. ಆಗ ದ್ವೇಷಿಸುವ ಹೃದಯಗಳು ಪ್ರವಾದಿಯ ವರ್ಯ(ಸ) ರನ್ನು ಪ್ರೀತಿಸಲು ಆರಂಭಿಸುತ್ತದೆ ಎಂದು ಯುನಿವೆಫ್ ಕರ್ನಾಟಕ ಮಂಗಳೂರು ಇದರ ಮುಖ್ಯಸ್ಥರಾದ ರಫೀಯುದ್ದೀನ್ ಕುದ್ರೋಳಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.