March 23, 2025

Vokkuta News

kannada news portal

ದ್ವನಿವರ್ಧಕ ಶಬ್ದಮಿತಿ,ಇಲಾಖೆ ನಡೆ ಆಧಾರದಲ್ಲಿ ಸ್ಪಂದಿಸಿ: ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ.

ಧಾರ್ಮಿಕ ಸಂಸ್ಥೆಯ ಆಡಳಿತ ಮುಖ್ಯಸ್ಥರು ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಯಾಗ ದಂತೆ ನೋಡಿಕೊಳ್ಳಬೇಕಾಗಿ ಕೋರಿಕೆ

ಕರ್ನಾಟಕ ಸರಕಾರ ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ದ್ವನಿವರ್ಧಕ ಶಬ್ದ ಮಿತಿಯ ಬಗ್ಗೆ ಈಗಾಗಲೇ ಸುತ್ತೋಲೆ ಪ್ರಕಟಿಸಿದ ಹಿನ್ನೆಲೆಯಲ್ಲಿ, ಅಧೀನ ಇಲಾಖೆಗಳು,ಜಿಲ್ಲಾ ಮಟ್ಟದಲ್ಲಿ ಅಥವಾ ನಗರ ಆಯುಕ್ತಾಲಯ ಮಟ್ಟದಲ್ಲಿ ಈ ಹಂತದವರೆಗೆ ಸ್ಪಷ್ಟ ನಿಲುವು ಮತ್ತು ನಡೆ ಹೊಂದಲು ಸಾಧ್ಯವಾಗಿಲ್ಲ.

ಸುತ್ತೋಲೆಯ ಆಧಾರದಲ್ಲಿ ಸಮಿತಿ ರಚಿಸಿದ ಬಗ್ಗೆ ಇಲಾಖೆಗಳಿಂದ ಅಧಿಕೃತ ಪ್ರಕಟಣೆ ಬಂದಿಲ್ಲ. ಸ್ಥಳೀಯ ಪೊಲೀಸು ಇಲಾಖೆ ಮಟ್ಟದಲ್ಲಿ ಕೆಲವು ಕಡೆ ಸಾರ್ವಜನಿಕರನ್ನು ಸೇರಿಸಿ ಸಭೆ ನಡೆಸಿ ಮಾಲಿನ್ಯ ತಡೆ ಅನುಷ್ಟಾನಿಸಲು ಕೋರಲಾಗಿದೆ.ಈ ಬಗ್ಗೆ ಲಿಖಿತ ನೋಟೀಸು ಜ್ಯಾರಿ ಆಗಲಿಲ್ಲ.

ಈ ಮದ್ಯೆ ವಕ್ಫ್ ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡಿ ಸಂಬಂಧಿತ ಇಲಾಖೆ,ಧಾರ್ಮಿಕ ಮುಖಂಡರಲ್ಲಿ ಮಾತುಕತೆ ನಡೆಸಿ ಈ ಬಗ್ಗೆ ಸ್ಪಷ್ಟ ನಿಲುವು ಹೊಂದುವುದಾಗಿ ಹೇಳಿಕೆ ನೀಡಿರುತ್ತಾರೆ.

ಮುಂದುವರಿದು,ಸ್ಥಳೀಯ ಪ್ರಮುಖ ಅಲ್ಪ ಸಂಖ್ಯಾತ ಜನ ಪ್ರತಿನಿಧಿಗಳು ಈ ಬಗ್ಗೆ ಇಲಾಖೆ,ಜಿಲ್ಲಾಡಳಿತ ಮತ್ತು ಧಾರ್ಮಿಕ ಸಂಸ್ಥೆಗಳ ಸಮನ್ವಯ ಸಭೆ ನಡೆಸುತ್ತಾರೆ ಎಂದು ಹೇಳಿರುತ್ತಾರೆ. ಅದರಂತೆಯೇ,ಜಿಲ್ಲಾಧಿಕಾರಿಗಳು ಶೀಘ್ರ ಸಭೆ ಕರೆಯುವುದು ಎಂದು ನಿಖರ ಮಾಹಿತಿ ಇದೆ.

ಆದುದರಿಂದ,ಧಾರ್ಮಿಕ ಸಂಸ್ಥೆಯ ಆಡಳಿತ ಮುಖ್ಯಸ್ಥರು ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಯಾಗ ದಂತೆ ನೋಡಿಕೊಳ್ಳಬೇಕಾಗಿ ವಿನಂತಿ.

ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.