June 13, 2024

Vokkuta News

kannada news portal

ಎಸ್.ಡಿ.ಪಿ.ಐ ಯಿಂದ ಮಂಗಳೂರಿನಲ್ಲಿ ‘ಜನಾಧಿಕಾರ ‘ ಸಾರ್ವಜನಿಕ ಸಮಾವೇಶ.

ಪ್ರಾದೇಶಿಕವಾಗಿ ಈ ಸಮಾವೇಶವು ರಾಜಕೀಯ ಮಹತ್ವ ಪಡೆಯುವ ಸಾಧ್ಯತೆ ಇದೆ ಎಂದು ವಿಮರ್ಶಿಸಲಾಗಿದೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕವು ಇಂದು ತನ್ನ ರಾಜಕೀಯ ನಡೆ ಜನಾಧಿಕಾರ ಕಾರ್ಯಕ್ರಮದ ಭಾಗವೆಂಬಂತೆ,ರಾಜ್ಯದ ಐದು ಪ್ರಮುಖ ಕೇಂದ್ರಗಳಾದ ಬೆಂಗಳೂರು,ಮೈಸೂರು,ಬೀದರ್,ದಾವಣಗೆರೆ ಯಂತೆಯೇ ಕಾರ್ಯಕ್ರವನ್ನು ಮಂಗಳೂರಿನ ಕಣ್ಣೂರು ನಲ್ಲಿ ನಡೆಸಿತು.
ಸಾರ್ವಜನಿಕ ಕಾರ್ಯಕ್ರಮ ಜನಾಧಿಕಾರ ಸಮಾವೇಶ ಸಭಾ ಕಾರ್ಯಕ್ರಮವು ಕಣ್ಣೂರಿನ ಮೈದಾನದಲ್ಲಿ ಹಾಕಲಾಗಿದ್ದ ಕೆ.ಎಂ.ಷರೀಫ್ ವೇದಿಕೆಯಲ್ಲಿ, ಅಪರಾಹ್ನ 3.00 ಗಂಟೆಗೆ ಆರಂಭವಾಗಿ ರಾತ್ರಿ 7.00 ರವರಿಗೆ ರಾಜ್ಯ,ಜಿಲ್ಲಾ ಮಟ್ಟದ ಪ್ರತಿನಿಧಿಗಳ ನೇತೃತ್ವದಲ್ಲಿ ನಡೆಯಿತು.
ಜಿಲ್ಲಾ ಪದಾಧಿಕಾರಿಗಳಾದ ಮೊಹಮ್ಮದ್ ಆತಾಹುಲ್ಲ ಜೋಕಟ್ಟೆ ಅತಿಥಿಗಳನ್ನು ಸ್ವಾಗತಿಸಿ ಆರಂಭವಾದ ಸಭೆಯು, ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್,ಭಾಸ್ಕರ್ ಪ್ರಸಾದ್,ಅಬೂಬಕ್ಕರ್ ಕುಳಾಯಿ,ರಿಯಾಝ್ ಪರಂಗಿಪೇಟೆ,ಇಲಿಯಾಸ್ ಅಹಮದ್ ತುಂಬೆ, ಶಹಿದಾ,ಕೇರಳ ಎಸ್. ಡಿ.ಪೀ. ಐ ರಾಜ್ಯದ ಅಧ್ಯಕ್ಷರಾದ ಎಂ.ಅಶ್ರಫ್ ಮೌಲವಿ,ರಾಷ್ಟ್ರೀಯ ಕಾರ್ಯದರ್ಶಿ,ಆಲ್ಪಾನ್ಸೋ ಫ್ರಾಂಕ್ ಮತ್ತಿತರರು ಕೂಡಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.ದೇಶದಲ್ಲಿ ಪ್ರಸಕ್ತ ಸಮಸ್ಯೆ ಯಾದ ಫ್ಯಾ ಸಿಸಂ ಆಡಳಿತ,ರಾಜ್ಯ ಸರಕಾರ ಪ್ರೇರಿತ ಆಡಳಿತ,ಮತೀಯ ಧೃವೀಕರಣ ಇತ್ಯಾದಿ ಬಗ್ಗೆ ಸಮಾವೇಶ ವನ್ನು ಉದ್ದೇಶಿಸಿ ಮಾತನಾಡಲಾಯಿತು.
ಸಮಾವೇಶಕ್ಕೆ ಮಂಗಳೂರು,ಉಡುಪಿ,ಶಿವಮೊಗ್ಗ ,ಕೊಡಗು ಕಾಸರಗೋಡು ಪ್ರದೇಶದಿಂದ ಬೃಹತ್ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.ಇತ್ತೀಚಿನ ವರ್ಷಗಳಲ್ಲಿನ ರಾಜಕೀಯ ಸಮಾವೇಶದ ಚರಿತ್ರೆ ಅವಲೋಕಿಸಿ ವಿಶ್ಲೇಷಿಸಿ ನೋಡುವುದಾದರೆ, ಪ್ರಾದೇಶಿಕ ವಾಗಿ,ಪ್ರಸಕ್ತ ರೀತಿಯ ರಾಜಕೀಯ ಸಮಾವೇಶ ಕಳೆದ ಹಲವು ದಶಕಗಳಿಂದ ನಡೆದಿರಲಿಲ್ಲ ವೆಂಬಂತೆ ಸಂದೇಶ ನೀಡುವ ಸಮಾವೇಶ ಇದಾಗಿತ್ತು.ಈ ಬೆಳವಣಿಗೆಯಿಂದಾಗಿ ಪ್ರಾದೇಶಿಕವಾಗಿ ಈ ಸಮಾವೇಶವು ರಾಜಕೀಯ ಮಹತ್ವ ಪಡೆಯುವ ಸಾಧ್ಯತೆ ಇದೆ ಎಂದು ವಿಮರ್ಶಿಸಲಾಗಿದೆ.