ಇತ್ತೀಚೆಗೆ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಪ್ರದರ್ಶಿಸುವಂತಿಲ್ಲ ಎಂಬುದಾಗಿ ಆದೇಶಿಸಿದ್ದು,ಕರ್ನಾಟಕದ ಸರಕಾರದ ಶಿಕ್ಷಣ ಮಂತ್ರಿಗಳಾದ ಬಿ.ಸಿ. ನಾಗೇಶ್ ರವರು ಶಾಲೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುಕ್ತ ಅವಕಾಶವಿದೆ ಎಂದು ಆದೇಶಿಸಿದ್ದಾರೆ.
ಸರಕಾರದ ಈ ಕ್ರಮ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಮಾರ್ಗದರ್ಶನದ ಸ್ಪಷ್ಟ ಉಲ್ಲಂಘನೆ ಆಗಿದೆ. ಈಗಾಗಲೇ ರಾಜ್ಯದ ಜನತೆ ಸರಕಾರಿ ಪ್ರೇರಿತ ಮತೀಯ ತಾರತಮ್ಯ ನೀತಿಯಿಂದ ಬೇಸತ್ತು ಹೋಗಿದ್ದಾರೆ.ಜನರ ನೈಜ ಮೂಲಭೂತ ಸಮಸ್ಯೆ ಗಳ ಬಗ್ಗೆ ಪರಿಹಾರ ಲಭಿಸದೆ, ನಿರುದ್ಯೋಗ, ಬೆಲೆಯೇರಿಕೆ,ಇತ್ಯಾದಿ ಸಮಸ್ಯೆಗಳಿಂದ ರೋಸಿ ಹೋಗಿದ್ದು,ಜನರ ನೈಜ ಆವಶ್ಯಕತೆಗಳನ್ನು ಸರಕಾರ ಪೂರೈಸ ದೆ ಜನರು ಸರಕಾರದ ವಿರುದ್ಧ ರೊಚ್ಚಿಗೆದ್ದು ಬಿ. ಜೇ. ಪಿ ಆಡಳಿತವನ್ನು ಸರಾ ಸಗಟು ಆಗಿ ತಿರಸ್ಕರಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಸಚಿವ ಮಾಧುಸ್ವಾಮಿ ತಮ್ಮ ಆಡಿಯೋದಲ್ಲಿ ಸರಕಾರವನ್ನು ಇನ್ನೆಂಟು ತಿಂಗಳು ಮ್ಯಾನೇಜ್ ಮಾಡಿ ದೂಡುತ್ತಿದ್ದೆವೆ,ಎಂದು ಹೇಳಿಕೆ ನೀಡಿ ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿ ಇಲ್ಲ ಎಂದು ಜನರಿಗೆ ತಿಳಿ ಹೇಳಿದ್ದಾರೆ. ಇಂತಹ ಬೆಳವಣಿಗೆಗಳಿಂದ ಬಿ. ಜೇ. ಪಿ ಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದ್ದು, ಜನರನ್ನು ಮತೀಯ ವಾಗಿ ವಿಂಗಡಿಸಲು,ಕೇಶವಕೃಪಾ ಪ್ರೇರಿತ ಅದೇಶವಾದ, ಶಾಲೆಗಳಲ್ಲಿ ಗಣೇಶ ಚತುರ್ಥಿ ಮತ್ತು ವಿಗ್ರಹ ಪ್ರತಿಷ್ಠಾಪನೆ ಯನ್ನು ಬೀ.ಸಿ.ನಾಗೇಶ್ ಮೂಲಕ ರವಾನಿಸಲಾಗಿದೆ.
ಸರಕಾರದ ಈ ಕ್ರಮದಿಂದ ಶಾಲೆಗಳಲ್ಲಿ ವಿವಿಧ ಧರ್ಮದ,ಜಾತಿಗಳ ಮದ್ಯೆ ತಾರತಮ್ಯ ಸೃಷ್ಟಿಸುವ ಹುನ್ನಾರ ಅಡಗಿದೆ. ಈಗಾಗಲೇ ಸಂಘ ಪರಿವಾರ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಹೆಸರಿನಲ್ಲಿ ವಿವಾದ ಸೃಷ್ಟಿಸಿ ಶೈಕ್ಷಣಿಕ ಬಿಕ್ಕಟ್ಟು ಗೊಳಿಸಿ ಹಲವು ವಿಧ್ಯಾರ್ಥಿಗಳ ಭವಿಷ್ಯ ಹಾಳುಗೆಡವಿದೆ.
ಮುಂದುವರಿದು ಧಾರ್ಮಿಕ ಆಚಾರ ವಿಚಾರಗಳನ್ನು ಮುಂದಿಟ್ಟು ಕಲಹ ಸೃಷ್ಟಿಸುವ ಹುನ್ನಾರವನ್ನು ಸಂಘ ಪರಿವಾರ ಮಾಡುತ್ತಿರುವುದು, ಆರೋಗ್ಯಕರ ಲಕ್ಷಣವಲ್ಲ ಎಂದು ಕೆ.ಅಶ್ರಫ್ ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವರದಿಗಳು
ವಕ್ಫ್ ಮಂ.ಸಮಿತಿಯ ‘ಖಾಸಗಿ’ ಆಸ್ತಿ ಘೋಷಿಸುವ ನಿರ್ವಾಹಕರ ಆದೇಶ ಹಿಂಪಡೆಯುವಿಕೆ ಅಸಾಧ್ಯ: ಹೈಕೋರ್ಟ್
ಕರ್ನಾಟಕ ಸಿಎಂ ಕಚೇರಿ: ಮುಸ್ಲಿಂ ಮೀಸಲಾತಿ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ.
ಶ್ರದ್ಧಾ ಕೇಂದ್ರಗಳು ವಕ್ಫ್ ಆಸ್ತಿಯಾಗಲಿವೆ ಎಂದು ಬಿಜೆಪಿ ಆರೋಪ, ಹಾವೇರಿಯಲ್ಲಿ ಉದ್ವಿಗ್ನ ಸ್ಥಿತಿ.