July 27, 2024

Vokkuta News

kannada news portal

ಅಧಿವೇಶನದಲ್ಲಿ ಫಾಝಿಲ್, ಮಸೂದ್ ಹತ್ಯಾ ಕುರಿತು ಚರ್ಚೆಗೆ ಅವಕಾಶ ನಿರಾಕರಣೆ: ಯು.ಟಿ.ಖಾದರ್ ಪ್ರತಿಕ್ರಿಯೆ.

ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಕುಟುಂಬಕ್ಕೆ ಯಾವುದೇ ಪರಿಹಾರ ವಿತರಿಸದೆ ಮತೀಯ ತಾರತಮ್ಯ ಎಸಗಿದೆ.

ಬೆಂಗಳೂರು;ಫಾಝಿಲ್, ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರವು ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದೆ ತಾರತಮ್ಯ ಮುಂದುವರಿಸಿದೆ ಎಂದು ವಿಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಸರಕಾರ ಮೃತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮಾತ್ರ ಪರಿಹಾರ ನೀಡಿದ್ದು , ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಕುಟುಂಬಕ್ಕೆ ಯಾವುದೇ ಪರಿಹಾರ ವಿತರಿಸದೆ ಮತೀಯ ತಾರತಮ್ಯ ಎಸಗಿದೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎ ತಂಡಕ್ಕೆ ವಹಿಸಿದೆ. ಮಸೂದ್ ಮತ್ತು ಫಾಝಿಲ್ ಕೊಲೆ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರಿಗೆ ವಹಿಸುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದು ಖಾದರ್ ಅಧಿವೇಶನದಲ್ಲಿ ಹೇಳಿದ್ದಾರೆ.

ಸದನದಲ್ಲಿ ಯು. ಟಿ.ಖಾದರ್ ರವರು ಈ ಬಗ್ಗೆ ಚರ್ಚೆಗೆ ಅವಕಾಶ ಅಪೇಕ್ಷಿಸಿದರು, ಸದನದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆಯ ನಂತರವೇ ಗೃಹ ಸಚಿವರು ಅಧಿಕೃತವಾಗಿ ಉತ್ತರಿಸಬೇಕಿತ್ತು, ಆದರೆ ಸದನ ಅವಕಾಶ ಕಲ್ಪಿಸದೆ ಗೃಹಸಚಿವರು ಕೇವಲ ಲಿಖಿತ ಉತ್ತರ ನೀಡಿದ್ದಾರೆ.

ಅದರಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಮಾತ್ರ ಕೋಮು ಸಂಬಂಧ ಪ್ರಕರಣವಾಗಿದೆ ಎಂದು ತಿಳಿಸಲಾಗಿದೆ. ಪರಿಹಾರ ವಿತರಣೆ ಮತ್ತು ತನಿಖಾ ತಂಡಕ್ಕೆ ಹಸ್ತಾಂತರ ವಿಷಯದಲ್ಲೂ ಸರಕಾರ ತಾರತಮ್ಯ ಎಸಗಿದೆ. ಅಲ್ಲದೆ ಚರ್ಚೆಗೂ ಅವಕಾಶ ನೀಡಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಇದಲ್ಲದೆ ಸರಕಾರದ ನಡೆಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ಯು.ಟಿ.ಖಾದರ್ ಹೇಳಿದ್ದಾರೆ.