June 13, 2024

Vokkuta News

kannada news portal

ಉಳ್ಳಾಲ, ಮುಡಿಪು ಕಾಂಗ್ರೆಸ್ ವತಿಯಿಂದ ಸೆ. 6 ರಂದು ‘ಫ್ರೀಡಮ್ ಮಾರ್ಚ್ ‘.

ಉಳ್ಳಾಲ: ಭಾರತ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಗವಾಗಿ ಉಳ್ಳಾಲ ಬ್ಲಾಕ್ ಮತ್ತು ಮುಡಿಪು ಕಾಂಗ್ರೆಸ್, ಯೂತ್ ಕಾಂಗ್ರೆಸ್ ವತಿಯಿಂದ ಸೆಪ್ಟೆಂಬರ್ 6 ರಂದು ಅಪರಾಹ್ನ 2.00 ಗಂಟೆಯಿಂದ ಉಳ್ಳಾಲದ ಕಲ್ಲಾಪು ಯುನಿಟಿ ಸಭಾಂಗಣ ದಿಂದ,ತೊಕ್ಕೊಟ್ಟು ವೃತ್ತ ಮೂಲಕ ಸಾಗಿ,ಕುತ್ತಾರು,ದೇರಳಕಟ್ಟೆ, ನಾಟೆಕಲ್ ಮೂಲಕ ಹಾದು ಮೂಡಿಪುವರೆಗೆ, ಕಾಲ್ನಡಿಗೆ ಜಾಥಾ ನಡೆಯಲಿದ್ದು ಉಳ್ಳಾಲ ಯೂತ್ ಕಾಂಗ್ರೆಸ್, ಮುಡಿಪು ಬ್ಲಾಕ್ ಮತ್ತು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ದೇಶದ 75 ನೆ ಸ್ವಾತಂತ್ರ್ಯ ಮತ್ತು ಅಮೃತ ಮೋಹೊತ್ಸವ ಅಂಗವಾಗಿ ಫ್ರೀಡಮ್ ಮಾರ್ಚ್ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಈ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದು ಅದರ ಭಾಗವಾಗಿ ಉಳ್ಳಾಲ ದಲ್ಲೂ ಕೂಡ ಮಂಗಳೂರು ವಿಧಾನ ಸಭಾ ಕ್ಷೇತ್ರ ಶಾಸಕರಾದ ಯು. ಟಿ. ಖಾದರ್ ನೇತೃತ್ವದಲ್ಲಿ ಈ ಕಾಲ್ನಡಿಗೆ ಜಾಥಾ ನಡೆಯಲಿದೆ.

ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಉಳ್ಳಾಲ ನಗರ ಸಭೆ ಮತ್ತು ಉಳ್ಳಾಲ ತಾಲೂಕು ಆಡಳಿತ ಜಂಟಿಯಾಗಿ ನಗರದ ಓವರ್ ಬ್ರಿಡ್ಜ್ ಹತ್ತಿರ ನಿರ್ಮಿಸಲಾದ ಬೃಹತ್ ದ್ವಜ ಸ್ತಂಭದ ಉದ್ಘಾಟನೆ ಮತ್ತು ದ್ವಜಾ ರೋಹಣ ಸಂದರ್ಬದಲ್ಲಿ ಯಶಸ್ವಿ ಜನ ಜಮಾವಣೆ ನಡೆದು ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸು ಕಂಡಿತ್ತು.

ಜನರಲ್ಲಿ ಸ್ವಾತಂತ್ರ್ಯ ಮತ್ತು ದ್ವಜದ ಮಹತ್ವದ ಬಗ್ಗೆ ಹೆಚ್ಚಿನ ಜಾಗೃತಿ,ಅಭಿಮಾನ ಮತ್ತು ಘನತೆ ಗಾಗಿ ರಾಜ್ಯ ಕಾಂಗ್ರೆಸ್ ಕಾರ್ಯಕ್ರಮದ ಭಾಗವಾಗಿ ಉಳ್ಳಾಲ ಮತ್ತು ಮೂಡಿಪು ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರ ಭಾಗವಹಿಸುವಿಕೆ ಯಿಂದಾಗಿ ಫ್ರೀಡಮ್ ಮಾರ್ಚ್ ಕಾಲ್ನಡಿಗೆ ಜಾಥಾ ನಡೆಯಲಿದೆ.