June 14, 2024

Vokkuta News

kannada news portal

ಸೆ 9. ಸಂತ ತೆರೆಸಾ ಗೋಷ್ಠಿ,ನಿವೃತ ನ್ಯಾ. ನಾಗಮೋಹನ್ ದಾಸ್ ಅತಿಥಿ

ಮಂಗಳೂರು: ಸಮಾಜ ಸೇವಕಿ, ಕಾರುಣ್ಯ ಕಾರ್ಯಕರ್ತೆ, ಮಿಶನರಿ ಸಾಂಸ್ಥಿಕೆ ಸಂತ ಮದರ್ ತೆರೆಸಾ ರವರು ನಿಧನ ಹೊಂದಿ 25 ವರ್ಷಗಳಾಗಿದ್ದು, ಸೆಪ್ಟೆಂಬರ್ 9 ರಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಆಶ್ರಯದಲ್ಲಿ ಸಂಸ್ಮರಣಾ ದಿನಾಚರಣೆಯನ್ನು ಆಯೋಜಿಸಲಾಗಿದೆ.

ಅಪರಾಹ್ನ 3.00 ಗಂಟೆಗೆ ಮಂಗಳೂರಿನ ಕುದ್ಮೂ ಲ್ ರಂಗರಾವ್,ಪುರಭವನದಲ್ಲಿ ವಿಚಾರ ಗೋಷ್ಠಿ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ನಿವೃತ್ತ ನ್ಯಾಯ ಮೂರ್ತಿಗಳಾದ ಎಚ್.ಎನ್. ನಾಗಮೋಹನ್ ದಾಸ್ ಭಾಗವಹಿಸಲಿದ್ದಾರೆ. ವಿಷಯ ಮಂಡನೆ ಕಾರರಾಗಿ ಅಂಕಣಕಾರೆ ಪಲ್ಲವಿ ಇಡೋರು, ವಿಶ್ಲೇಷಕರಾಗಿ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರುಗಳು ಆದ ರೆ.ಫಾ.ಜೆ.ಬಿ.ಸಲ್ದಾನ ಮತ್ತು ಯುವ ಜನ ಚಳುವಳಿಯ ರಾಜ್ಯ ನಾಯಕರಾದ ಮುನೀರ್ ಕಾಟಿಪಳ್ಳ ರವರು ಭಾಗವಹಿಸಲಿದ್ದಾರೆ.

ಮದರ್ ತೆರೆಸಾ ರವರು ಜೀವನ ಪೂರ್ತಿ ತಮ್ಮ ಮಿಶನರಿ ಆಧಾರಿತ ಸಮಾಜ ಸೇವೆ ಮೂಲಕ ಕಾರುಣ್ಯ ಕಾರ್ಯಕರ್ತೆಯಾಗಿ ಕೊಲ್ಕತ್ತಾದ ಕೊಳಚೆ ಪ್ರದೇಶದ ಸಂತ್ರಸ್ತ ಬಡ,ನಿರ್ಗತಿಕ ರೋಗಿಗಳ ಶುಶ್ರೂಷಯಲ್ಲಿ ತೊಡಗಿ ಅದೆಷ್ಟೋ ಮಕ್ಕಳಿಗೆ ತಮ್ಮ ಆಶ್ರಮದಲ್ಲಿ ಬದುಕು ರೂಪಿಸಿದ ಓರ್ವೆ ಮಾದರಿ ಮಾನವತಾ ಕನ್ಯಾ ಸ್ತ್ರೀಯಾಗಿ ದೇವರ ಹೆಸರಲ್ಲಿ ಸೇವೆ ಸಲ್ಲಿಸಿದರು. ಅವರು ಮರಣೋತ್ತರ ಸಂತ ಪದವಿಗೆ ಭಾಜನರಾದರು. ಅವರ ನಿಧನದ 25ನೇ ವರ್ಷದಲ್ಲಿ ಸಂಸ್ಮರಣಾ ದಿನವಾಗಿ ಆಚರಿಸುವ ಈ ಸಂದರ್ಬದಲ್ಲಿ ಅವರ ಜೀವನ ಕ್ರಮದ ಬಗ್ಗೆ ವಿಚಾರ ಗೋಷ್ಠಿ ಹಮ್ಮಿ ಕೊಳ್ಳಲಾಗಿದೆ.

ಸಂತ ಮದರ್ ತೆರೆಸಾ ವಿಚಾರ ವೇದಿಕೆ ಯ ಕಾರ್ಯಕ್ರಮ ಸಂಯೋಜಕರಾಗಿ ಫಾ.ರೂಪೇಶ್ ಮಾಡ್ತಾ,ಅಧ್ಯಕ್ಷರಾಗಿ ರೊಯ್ ಕಾಸ್ತ್ಯಾಲಿನೂ,ಪ್ರಧಾನ ಕಾರ್ಯದರ್ಶಿ ಯಾಗಿ ಸುನಿಲ್ ಕುಮಾರ್ ಬಜಾಲ್ ರವರು ಇತರ ವಿವಿಧ ಸದಸ್ಯ ಬಳಗದೊಂದಿಗೆ ಕಾರ್ಯಕ್ರಮ ಆಯೋಜಿಸಿರುತ್ತಾರೆ.