June 13, 2024

Vokkuta News

kannada news portal

ಮಂಗಳೂರು ಸೋಷಿಯಲ್ ಸರ್ವೀಸ್ ಸೆಂಟರ್ (ರಿ)ಬಂದರ್ ಮಹಾಸಭೆ:ಗೌರವಾಧ್ಯಕ್ಷರಾಗಿ ಕೆ.ಅಶ್ರಫ್,ಅಧ್ಯಕ್ಷರಾಗಿ ಕೆ. ಪಿ ರಶೀದ್.

ಮಂಗಳೂರು ಸೋಷಿಯಲ್ ಸರ್ವೀಸ್ ಸೆಂಟರ್(ರಿ) ಬಂದರ್ ಇದರ ಮಹಾಸಭೆಯು ಇಂದು 23 ಸೆಪ್ಟೆಂಬರ್ 2022 ರಂದು ಶುಕ್ರವಾರ ತಡ ಸಂಜೆ 8.30 ಕೆ ಮಂಗಳೂರಿನ ಝೀನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿಯ ಮದರಸ ಸಭಾಂಗಣದಲ್ಲಿ ಕೆ.ಅಶ್ರಫ್ ಸಭಾಧ್ಯಕ್ಷತೆಯಲ್ಲಿ ನಡೆಯಿತು ಮತ್ತು ಮುಂದಿನ ಸಾಲಿನ ಆಡಳಿತ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ( ಪುನರಾಯ್ಕೆ ) ಕೆ.ಅಶ್ರಫ್,ಅಧ್ಯಕ್ಷರಾಗಿ ಕೆ. ಪಿ.ರಶೀದ್,ಉಪಾಧ್ಯಕ್ಷರಾಗಿ ಸಲೀಂ ಸಫಾ,ಅಶ್ರಫ್ ಭಯ್ಯ,ಕಾರ್ಯದರ್ಶಿ ಯಾಗಿ ರಿಯಾಝ್ ಅಹ್ಮದ್ ಕಚ್ ಮ್ಯಾನ್,ಕೋಶಾಧಿಕಾರಿಯಾಗಿ ಎಂ. ಬಿ.ನಝೀರ್,ಜತೆ ಕಾರ್ಯದರ್ಶಿಯಾಗಿ ಝಾಕಿರ್ ತುಸಿಮನ್,ರಿಯಾಝುದ್ದೀನ್ ಹಾಜಿ,ವ್ಯವಸ್ಥಾಪಕರು ಆಗಿ ಝಕೀರ್ ಕೂಝಿಖಾನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಂಶುದ್ದೀನ್ ಕಂಡತ್ ಪಳ್ಳಿ, ಷರೀಫ್ ಅಲ್ಬ, ಮುನವ್ವರ್, ಇಬ್ರಾಹಿಮ್ ಬಲ್ಲಾಳ್ ಹೌಸ್, ಡಿ.ಎಂ.ಮುಸ್ತಾಫಾ, ಅಶ್ರಫ್ ಫಾಯಾ,ಫಾರೂಕ್ ಭಯ್ಯಾ,ಹುಸೇನ್ ಹಾರಿಫ್,ಮುಸ್ತಾಫಾ , ಟಿ ವಾಸಿಂ ರವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಕಮಿಟಿ ಯು ಮುಂದಿನ ಮೂರು ವರ್ಷದ ಅವಧಿಗೆ ಅಧಿಕಾರ ಹೊಂದಲಿದೆ. ಸ್ಥಳೀಯವಾಗಿ ಮಂಗಳೂರು ಸೋಷಿಯಲ್ ಸರ್ವೀಸ್ ಸೆಂಟರ್ ಸಂಸ್ಥೆಯು ವಿವಿಧ ಸಮಾಜ ಸೇವಾ ಕಾರ್ಯವನ್ನು ಜರುಗಿಸುತ್ತಿದ್ದು,ಸ್ಥಳೀಯವಾಗಿ ಯಾಂಬುಲೆನ್ಸ್ ಸೇವೆ, ಶೀತಲಾಗಾರ ಪೂರೈಕೆ,ಶೈಕ್ಷಣಿಕ ಪೂರಕ ವ್ಯವಸ್ಥೆ ಇತ್ಯಾದಿ ಸವಲತ್ತುಗಳ ಪೂರೈಕೆ ಚಟುವಟಿಕೆ ನಡೆಸುತ್ತಿದೆ.ಇಂದಿನ ಮಹಾ ಸಭೆಗೆ 35 ಸದಸ್ಯರು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.