June 14, 2024

Vokkuta News

kannada news portal

ಅರಿಯಿರಿ ಮನುಕುಲದ ಪ್ರವಾದಿಯನ್ನು ಯುನಿವೆಫ್ ಕರ್ನಾಟಕ ಸಂದೇಶ ಪ್ರಚಾರ ಅಭಿಯಾನಕ್ಕೆ ಚಾಲನೆ.

ಮಂಗಳೂರು: ಯೂನಿವರ್ಸಲ್ ವೆಲ್ಫೇರ್ ಫಾರ ಮ್ ಕರ್ನಾಟಕ ವತಿಯಿಂದ ಪ್ರತಿ ವರ್ಷ ನಡೆಯುತ್ತಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಎಂಬ ಇಸ್ಲಾಮಿನ ಪ್ರವಾದಿ ಮುಹಮ್ಮದ್ (ಸ. ಅ) ರವರ ಸಂದೇಶ ಪ್ರಚಾರ ಅಭಿಯಾನದ ಭಾಗವಾಗಿ ಇಂದು ಮಂಗಳೂರಿನ ಜಮ್ಮಿಯತುಲ್ ಫಲಾಹ್ ಸಭಾಂಗಣದಲ್ಲಿ ಅಭಿಯಾನದ ಉದ್ಘಾಟನಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಅಭಿಯಾನದ ದಿಕ್ಸೂಚಿ ಪರಿಚಯ ಭಾಷಣ ಗೈದ ರಫೀಯುದ್ದೀನ್ ಕುದ್ರೋಳಿ ರವರು ಮಾತನಾಡಿ ಅಭಿಯಾನ ನಿರಂತರ ಎಪ್ಪತ್ತು ದಿವಸಗಳ ಸಮಾಗ್ರ ಕಾರ್ಯಕ್ರಮ ವಾಗಿದೆ ಎಂದರು.

ಸಭೆಯ ಆರಂಭದಲ್ಲಿ ಸಂಘಟನೆಯ ಸದಸ್ಯರಾದ ಆರಿಫ್ ಕಿರಾಅತ್ ಪಠಿಸಿದರು. ಸಹಸಂಚಾಲಕರಾದ ಯುಬೈದ್ ಸ್ವಾಗತಿಸಿ,ಇನ್ನೋರ್ವ ಸಹ ಸಂಚಾಲಕರಾದ ಅಬ್ದುಲ್ಲಾ ಪಾರೆ,ಸಂಸ್ಥೆಯ ಪ್ರಮುಖ ದ್ಯೆಯೋದ್ದೇಶವನ್ನು ಪರಿಚಯಿಸಿದರು. ಸಂಘಟನೆ ಸಾಮಾಜಿಕವಾಗಿ ಸಾಂಸ್ಕೃತಿಕ ವಾಗಿ ಕಾರ್ಯನಿರ್ವಹಿಸುತ್ತಿದ್ದು,ಇಸ್ಲಾಮ್ ಮತ್ತು ಮುಸ್ಲಿಮರ ಮೇಲೆ ಆರೋಪಿಸಲಾದ ಅಪ ಕಲ್ಪನೆಯನ್ನು ಹೋಗಲಾಡಿಸುವ ದ್ಯೆಯವನ್ನು ಹೊಂದಿದ್ದು, ಮಾನವ ಸಂಪನ್ಮೂಲವನ್ನು ಒಳಿತಿನ ಮಾರ್ಗಕ್ಕೆ ಕೊಂಡೊಯ್ಯುವ,ಸಾಮಾಜಿಕ ಸೇವೆಯಲ್ಲಿ ತೊಡಿಗಿಸಿ ಕೊಳ್ಳುವ, ದೇಶಕ್ಕಾಗಿ ಸೇವೆಗೈದ ಮುಸ್ಲಿಮ್ ತ್ಯಾಗಿ ವ್ಯಕ್ತಿತ್ವದ ಚರಿತ್ರೆಯ ವ್ಯಕ್ತಿ ಪರಿಚಯ ಇತ್ಯಾದಿ ಕಾರ್ಯಕ್ರಮವನ್ನು ಸಂಘಟನೆ ಹೊಂದಿದೆ ಅಂದರು. ಅಭಿಯಾನ ವು ನಿರಂತರ ಎಪ್ಪತ್ತು ದಿನ ನಡೆಯಲಿದ್ದು, ಜಿಲ್ಲೆಯಾದ್ಯಂತ ಭಿತ್ತಿ ಪತ್ರ ಪ್ರಕಟಣೆ,ಕರಪತ್ರ ಹಂಚುವಿಕೆ, ಕಾರ್ನರ್ ಸಭೆ, ಬೀದಿ ಬದಿ ಭಾಷಣ,ಸಂವಾದ,ಚರ್ಚೆ,ಕೃತಿ ಬಿಡುಗಡೆ, ಇತ್ಯಾದಿ ಮೂಲಕ ನಡೆದು ಡಿಸೆಂಬರ್ ಕೊನೆಗೆ ಮಂಗಳೂರಿನ ಪುರಭವನದಲ್ಲಿ ವಿವಿಧ ಧರ್ಮದ ಪ್ರಮುಖರ ಸಮಕ್ಷಮ ಸಮಾರೋಪ ಸಭೆ ನಡೆಯಲಿದೆ,ಎಂದರು.

ಉದ್ಘಾಟನಾ ಭಾಷಣಗೈದ ರಫೀಯುದ್ದೀನ್ ಕುದ್ರೋಳಿ ಮಾತನಾಡಿ,ಅರಿಯಿರಿ ಮನುಕುಲದ ಪ್ರವಾದಿಯನ್ನು ಸಂದೇಶ ಅಭಿಯಾನ ನಿರಂತರ ಹದಿನೇಳು ವರ್ಷಗಳ ಕಾಲ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುವ ಒಂದು ಐತಿಹಾಸಿಕ ಮಹತ್ವದ ಅಭಿಯಾನವಾಗಿದೆ. ಈ ಹಿಂದೆ ಉದ್ಘಾಟನಾ ಸಮಾರಂಭವು ಸೀಮಿತ ಜನರ ಕಾರ್ಯಕ್ರಮವಾಗಿತ್ತು, ಆದರೆ ಇಂದು ಅದು ಒಂದು ಸಭಾ ಕಾರ್ಯಕ್ರಮ ವಾಗಿದ್ದು ವಿಶೇಷ,ನಿರಂತರ ಎಪ್ಪತ್ತು ದಿನಗಳ ಕಾಲ ನಡೆಯುವ ಪ್ರವಾದಿ ಸಂದೇಶ ಪ್ರಚಾರ ಅಭಿಯಾನ ಕಳೆದ ಕೋವಿಡ್ ಸಂಧರ್ಭದಲ್ಲಿ ಕೂಡ ಸೀಮಿತ ಮಟ್ಟದಲ್ಲಿ ಜರುಗುವುದು ವಿಶೇಷ ಎಂದರು.

ಪ್ರವಾದಿ ರವರ ಸಂದೇಶವನ್ನು ಜಿಲ್ಲೆಯ ಮೂಲೆ ಮೂಲೆಗೆ ತಲುಪಿಸುವಲ್ಲಿ ಯುಣಿವೆಫ್ ಕರ್ನಾಟಕ ಮಹತ್ವದ ಕಾರ್ಯಗೈದಿದೆ. ಪ್ರಸಕ್ತ ಸನ್ನಿವೇಶ ಮತ್ತು ಪರಿಸ್ಥಿತಿಯಲ್ಲಿ ಈ ಕಾರ್ಯಕ್ರಮದ ಅನುಷ್ಟಾನ ಕಠಿಣವಾಗಿದ್ದು, ಮುಂದಿನ ದಿನಗಳಲ್ಲಿ ಸುಗಮವಾಗಿ ನಡೆಯುವ ಆಶಾ ಭಾವನೆಯನ್ನು ವ್ಯಕ್ತ ಪಡಿಸಿದರು ಮತ್ತು ಅಭಿಯಾನವನ್ನು ಯಶಸ್ವಿ ಗೊಳಿಸ ಲು ಕರೆ ನೀಡಿದರು.
ಪ್ರಸ್ತುತ ಸರ್ಕಾರದ ಮಟ್ಟದಿಂದ ವಿವಿಧ ಕಾನೂನುಗಳ ಅನುಷ್ಠಾನದಿಂದಾಗಿ ಅಭಿಯಾನದ ದಾರಿಯಲ್ಲಿ ಸವಾಲುಗಳು ಇದ್ದು ಅಂತಹ ಸವಾಲುಗಳ ಮದ್ಯೆ ಅಭಿಯಾನವನ್ನು ಯಶಸ್ವಿ ಗೊಳಿಸುವ ಗುರಿ ಹೊಂದಲಾಗಿದೆ.
ಪ್ರಸಕ್ತ ಅಸ್ತಿತ್ವದಲ್ಲಿ ಇರುವ ಸಂಘಟನಾತ್ಮಕ ಕಾರ್ಯಕ್ರಮಗಳು ಈ ದೇಶದಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧದ ದ್ವೇಷವನ್ನು ಅಳಿಸುವ ರಚನ್ನಾತ್ಮಕ ಕಾರ್ಯಕ್ರಮವನ್ನು ಕೈಗೊಳ್ಳುವ ಯೋಜನೆಯನ್ನು ಸಮರ್ಪಕವಾಗಿ ನಡೆಸಲು ವಿಫಲವಾದ ಈ ಸಂದರ್ಬದಲ್ಲಿ ಯುನಿವೆಫ್ ಸಂಘಟನೆ ಅಂತಹ ದ್ವೇಷವನ್ನು ಪ್ರವಾದಿ ಸಂದೇಶ ಪ್ರಚಾರ ಮೂಲಕ ನಿವಾರಿಸಲು ಬಯಸಿದೆ ಎಂದರು.

ಮುಸಲ್ಮಾನರನ್ನು ಮತ್ತು ಇಸ್ಲಾಮನ್ನು ಎಂದು ಭಯ ಸೃಷ್ಟಿಸುವ ರೀತಿಯಲ್ಲಿ ಇಲ್ಲಿನ ಮಾಧ್ಯಮಗಳು ಬಿಂಬಿಸಿದೆ ಎಂದರು. ಯುಣಿವೆಪ್ ಸಂಘಟನೆ ಕೇವಲ ಧಾರ್ಮಿಕ ಪ್ರಭೋಧನೆ ಮಾತ್ರ ಮಾಡುತ್ತಿಲ್ಲ ಬದಲಾಗಿ ಅರಿವು ಮತ್ತು ಜಾಗೃತಿ ಮಾಡುತ್ತಿದೆ.ಕುರಾನ್ ಗ್ರಂಥದ ಮಹತ್ವವನ್ನು ಮುಸ್ಲಿಮರು ತಿಳಿಯಲು ವಿಫಲ ವಾಗಿರುವುದರೊಂಡಿಗೆ ನಾವು ಪಾಶ್ಚಾತ್ಯ ಬಾಷೆಗಳನ್ನು ಅವಲಂಬಿಸಿದ್ದೇವೆ ಎಂದರು.

ನಮ್ಮ ಸ್ವಗೃಹದಲ್ಲಿ ಕುರ್ ಆನ್ ಗ್ರಂಥ ಅರೇಬಿಕ್ ನಲ್ಲಿ ಲಭ್ಯವಿದ್ದರೂ ನಾವು ಅರೇಬಿಕ್ ಭಾಷೆಯ ಆರಿವಿನಿಂದ ವಂಚಿತ ರಾಗಿದೇವೆ. ಧಾರ್ಮಿಕ ಕೇಂದ್ರ,ಆರಾಧನಾ ಸಂಸ್ಥೆಗಳ ಮುಖ್ಯಸ್ಥರು ಇಂದು ಧಾರ್ಮಿಕ ವಿಷಯಗಳಲ್ಲಿ ಅನಕ್ಷರಸ್ಥ ರಾಗಿರುತ್ತಾರೆ. ಅಂತವರ ನೇಮಕವನ್ನು ತಡೆದರೆ ಸಂಪೂರ್ಣ್ ಮೊಹಲ್ಲಾ ಅಭಿವೃದ್ಧಿ ಹೊಂದಲಿದೆ.ಇಂದು ಶಿಕ್ಷಣ ಸಂಸ್ಥೆ,ಮಸೀದಿಗಳ ಸಿಬ್ಬಂದಿ ಉಪನ್ಯಾಸಕ ರನ್ನು ನೇಮಕಾತಿ ಸಂಸ್ಥೆಯ ಅನಕ್ಷರಸ್ಥ ಅಥವಾ ಅವಿದ್ಯಾವಂತ ಪದಾಧಿಕಾರಿಗಳು ಆಯ್ಕೆ ಮಾಡಿ ನೌಕರಿ ನೀಡುವ ಪರಿಸ್ತಿತಿ ಆದರೆ ಅಸಮರ್ಪಕತೆ ಸೃಷ್ಟಿ ಆಗುತ್ತದೆ. ಇಂಟರ್ನೆಟ್ ಈ ಯುಗದಲ್ಲಿ ಶೈಕ್ಷಣಿಕ ಕೊಠಡಿ ಹೊರತಾದ ದೂರ ಕಲಿಕೆ ವ್ಯವಸ್ಥೆಯಲ್ಲಿ ಸರಳ ಅರೇಬಿಕ್ ಪದ ಕಲಿಕೆಯ ವಿಫುಲ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸಮುದಾಯದ ಅದೆಷ್ಟೋ ಸಮಸ್ಯೆ ಇದರಿಂದ ಪರಿಹಾರ ಕಾಣಬಹುದು.ಕೋರೋಣ ಸಂದರ್ಬದಲ್ಲಿ ರೋಗ ವ್ಯಾಪಕತೆಗೆ ಹೆದರಿ ಪರಸ್ಪರ ತಾಯಿಯ ಮೃತ ದೇಹವನ್ನು ನೋಡಲು ಮಗ ಹಿಂಜರಿತ ಘಟನೆ,ಮಗನನ್ನು ನೋಡಲು ತಾಯಿ ಬರಲು ಕೇಳುವುದಿಲ್ಲ ಎಂಬ ಸನ್ನಿವೇಶ ನಿರ್ಮಾಣ ವಾಯಿತು. ಅಲ್ಲಾಹನು ಸಾಬೀತು ಪಡಿಸಿದರು ಅಂತಹ ಒಂದು ಕ್ಷಾಮ. ಮಾನವ ಇತಿಹಾಸದಲ್ಲಿ ಪ್ರಥಮವಾಗಿ ಸಂಪೂರ್ಣ ಜಗತ್ತು ಸ್ಥಗಿತಕ್ಕೆ ಒಳಪಟ್ಟಿತ್ತು.ಮುಸ್ಲಿಮ್ ಸಮುದಾಯ ಮಾತ್ರ ಹೆದರಲಿಲ್ಲ ಅದು ಅವರ ವಿಶ್ವಾಸದ ದೃಢತೆ ಯ ಕಾರಣದಿಂದ ಆಗಿದೆ.ಅದುವೇ ಜನರು ಖದರ್ ನ ಮೇಲೆ ಇಟ್ಟ ನಂಬಿಕೆ ಆಗಿದೆ.ಒಂದು ವೇಳೆ ನಾವು ಮುಸ್ಲಿಮ್ ಇನ್ನೂ ಕೂಡ ನಿಶ್ಯಬ್ದ ವಾಗೀ ಇದ್ದರೆ.ಮುಂದೊಂದು ದಿನ ಭಾರತದಲ್ಲಿ ಇಸ್ಲಾಮ್ ಉಳಿಯಲಿದೆ ಆದರೆ ಮುಸ್ಲಿಮರು ಯಾರೂ ಕೂಡ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದರು.

ನಮ್ಮ ಧಾರ್ಮಿಕ ವಿದ್ಯಾಬ್ಯಾಸ ಕೇಂದ್ರದಲ್ಲಿ ನಾವು ವಿಧ್ಯಾರ್ಥಿಗಳಿಗೆ ವಿಷನ್ ಭೋದನೆ ಮಾಡುತ್ತೇವೆ. ಸಮುದಾಯದ ಉಳಿವಿನ ಬಗ್ಗೆ ಪ್ರವಾದಿ ಮತ್ತು ಅಲ್ಲಾಮಾ ಇಕ್ಬಾಲ್ ರವರ ಹಲವು ವಚನಗಳನ್ನು ಪರಿಚಯಿಸಿದರು.ಪ್ರವಾದಿಯವರು, ನೆರೆಮನೆಯವರು ಹಸಿದಿರುವಾಗ ನೀವು ಹೊಟ್ಟೆತುಂಬಾ ಬೋಜನ ಗೈದರೆ ಅಂತಹ ಮುಸ್ಲಿಮ್ ನನ್ನ ಧರ್ಮದಲ್ಲಿ ಒಳಗೊಂಡ ವನಲ್ಲ ಎಂದು.ಪ್ರವಾದಿ ಹೇಳಿದರು ಸ್ಥಿತಿವಂತರು ತಮ್ಮ.ಸೇವಕರನ್ನು ಗೌರವ ಭಾವದಿಂದ ನಡೆಸಿ ಕೊಳ್ಳದೆ ಇದ್ದರೆ ಅಂತಿಮ ದಿನದಂದು ಅಲ್ಲಾಹನು ನಿಮ್ಮನ್ನು ಅವಹೇಳಿಸು ತ್ತಾನೆ ಎಂದು.ಮುಂದುವರಿದು,ಪ್ರಸ್ತುತ ಪ್ರವಾದಿ ಸಂದೇಶ ಪ್ರಚಾರವನ್ನು ವ್ಯಾಪಕ ಗೊ ಳಿಸಿ ಅದರ ಒಳಿತನ್ನು ಜನರಿಗೆ ತಲುಪಿಸುವ ಕಾರ್ಯ ಹಿಂದೆಂದಿಗಿಂತಲೂ ಇಂದು ಅನಿವಾರ್ಯವಾಗಿದೆ.ಈ ಅಭಿಯಾನದಲ್ಲಿ ಸರ್ವರೂ ನಮ್ಮನ್ನು ಹಿಂಬಾಲಿಸಿ ಬೆಂಬಲ ನೀಡಲು ಕರೆ ನೀಡಿದರು.

ಸಭೆಯ.ಅಧ್ಯಕ್ಷತೆಯನ್ನು ಹಿರಿಯ ಸದಸ್ಯ ಅಬೂಬಕರ್ ಕುದ್ರೋಳಿ ವಹಿಸಿದ್ದರು.ಕೊನೆಯಲ್ಲಿ ತಾಯಿಫ್ ವಂದಿಸಿದರು.

.