September 6, 2024

Vokkuta News

kannada news portal

ಬ್ಯಾರಿ ಕಲಾರಂಗದಿಂದ ಅ.3ರಂದು ‘ ಬ್ಯಾರಿ ಕೊಂಡಾಡ್ ರೊ ನಾಲ್ ‘ ಆಚರಣೆ: ಅಝೀಝ್ ಬೈಕಂಪಾಡಿ.

ಮಂಗಳೂರು: ಬ್ಯಾರಿ ಕಲಾ ರಂಗ ಮೈಕಾಲ ಮಂಗಳೂರು ವತಿಯಿಂದ 03 ನೇ ತಾರೀಕು ಅಕ್ಟೋಬರ್ 2022 ರಂದು ‘ ಬ್ಯಾರಿ ಬಾಷೆರೊ ಕೊಂಡಾ ಡ್ ರೊ ನಾಲ್ ‘ ಎಂಬ ಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ಮಂಗಳೂರು ಸ್ಟೇಟ್ ಬ್ಯಾಂಕ್ ಸಮೀಪದ ನೆಲ್ಲಿಕ್ಕಾಯಿ ರಸ್ತೆಯಲ್ಲಿನ ಪಾಯ ನೀರ್ ಕಾಂಪ್ಲೆಕ್ಸ್ ಕಟ್ಟಡ ದ ಮೆಲ್ಮಹಡಿ ಯಲ್ಲಿನ ನೇಷನಲ್ ಟ್ಯು ಟರಿಯಲ್ ಸಭಾಂಗಣ ದಲ್ಲಿ ಬೆಳಿಗ್ಗೆ ಗಂಟೆ 10.30 ಕೆ ಜರುಗುವ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಅಬ್ದುಲ್ ಅಝೀಝ್ ಬೈಕಂಪಾಡಿ ವಹಿಸಲಿದ್ದು, ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಆದ ಮನ್ಸೂರ್ ಅಝಾದ್ ರವರು ಭಿತ್ತಿಪತ್ರ ಬಿಡುಗಡೆ ಮಾಡಲಿದ್ದು, ಅತಿಥಿಯಾಗಿ ಕರ್ನಾಟಕ ರಾಜ್ಯ ಜೇ.ಡಿ.ಎಸ್. ಕಾರ್ಯದರ್ಶಿ ಆದ ಹೈದರ್ ಪರ್ತಿಪ್ಪಾಡಿ, ಸಂಗೀತ ನಿರ್ದೇಶಕ ವಿಜಯ ಕುಮಾರ್, ಸಾರಂಗ್ ರೇಡಿಯೋ ದ್ವನಿ ಸಂಸ್ಥೆಯ ವರದಿಗಾರ ಎಡ್ವರ್ಡ್ ಲೋಬೋ ರವರು ಭಾಗ ವಹಿಸಲಿದ್ದಾರೆ.

ಅಕ್ಟೋಬರ್ 03 ರಂದು ಈ ಹಿಂದೆ ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆ ಬ್ಯಾರಿ ಭಾಷೆಯ ಮಹತ್ವವನ್ನು ಪರಿಗಣಿಸಿ,ಬ್ಯಾರಿ ಸಾಹಿತ್ಯವನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಯನ್ನು ಮಂಜೂರು ಮಾಡಿತ್ತು. ಆ ಮೂಲಕ ಈ ಹಿಂದೆ ಸರಕಾರ ಬ್ಯಾರಿ ಸಾಹಿತ್ಯವನ್ನು ಮಾನ್ಯತೆಯ ವ್ಯಾಪ್ತಿ ಯಲ್ಲಿ ಒಳಪಡಿಸಿ ತ್ತು. ಈ ಉದ್ದೇಶಕ್ಕಾಗಿ ಸರಕಾರ ಬ್ಯಾರಿ ಸಾಹಿತ್ಯ ಅಕಾಡಮಿ ಸ್ಥಾಪನೆಗೊಳಿಸಿದೆ.

ಈ ನಿಟ್ಟಿನಲ್ಲಿ ಬ್ಯಾರಿ ಕಲಾ ರಂಗ ಸಂಸ್ಥೆಯು ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ, ಪ್ರಧಾನ ಕಾರ್ಯದರ್ಶಿ ಖಾಲಿದ್ ಉಜಿರೆ, ಪ್ರಧಾನ ಸಂಚಾಲಕರು ಆದ ಹುಸೈನ್ ಕಾಟಿಪಳ್ಳ ಮತ್ತು ಸದಸ್ಯರು ಈ ದಿನವನ್ನು ಬ್ಯಾರಿ ಭಾಷಾಚರಣೆ ದಿನವಾಗಿ ಪರಿಗಣಿಸಿ ಅಭಿಯಾನ ಕಾರ್ಯಕ್ರಮ ರೂಪಿಸಿದೆ.

ಧಾರ್ಮಿಕ ಬೋಧನಾ ಕೇಂದ್ರಗಳಲ್ಲಿ ಬ್ಯಾರಿ ಭಾಷಾ ಬಳಕೆ, ಮನೆಯಲ್ಲಿ ಮಕ್ಕಳೊಂದಿಗೆ ಬ್ಯಾರಿ ಭಾಷೆಯಲ್ಲಿ ಸಂವಹನ ಸಂಭಾಷಣೆ, ವಾಲ್ ಪ್ರವಚನ, ನಿಖಾ ಸಂದರ್ಭಗಳಲ್ಲಿ ಇದೇ ಭಾಷೆ ಬಳಕೆ, ಬರಹಗಾರರು ಇದೇ ಭಾಷೆಯಲ್ಲಿ ತಮ್ಮ ಬರಹ, ಕಥೆ,ಕವನ, ಹಾಡು ಇತ್ಯಾದಿ ಬರೆಯುವಿಕೆಗೆ ಉತ್ತೇಜನ,.ಬ್ಯಾರಿ ಬರಹಗಾರರಿಗೆ ಧನ ಸಹಾಯ,ಬ್ಯಾರಿ ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಪರಿಚಯ, ಇನ್ನಿತರ ಭಾಷೆ ಯೊಂದಿಗೆ, ಬ್ಯಾರಿ ಭಾಷೆಯ ಒಡನಾಟ ಅಧಿಕ ಗೊಳಿಸುವುದು, ಬ್ಯಾರಿ ಬಾಷಾ ಉತ್ತೇಜಿತ ಸಂಸ್ಥೆಗಳಿಗೆ ಬೆಂಬಲ ಇತ್ಯಾದಿ ಘೋಷ ವಾಕ್ಯದೊಂದಿಗೆ ಭಿತ್ತಿ ಪತ್ರ ಅಭಿಯಾನ ವನ್ನು ಕೈ ಗೊಂಡಿದೆ.

ಅಕ್ಟೋಬರ್ 03 ನೇ ತಾರೀಖಿನಂದು ಸೋಮವಾರ ಬ್ಯಾರಿ ಬಾಷೆ ರೊ ಕೊಂಡಾಡ್ ರೊ ನಾಲ್ ಅಂಗವಾಗಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ, ಎಂದು ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ಹೇಳಿಕೆ ನೀಡಿದ್ದಾರೆ.