March 19, 2025

Vokkuta News

kannada news portal

ಸಾಮರಸ್ಯ ಮಂಗಳೂರು ಸಂಸ್ಥೆಯಿಂದ ಗಾಂಧಿ ಜಯಂತಿ ಆಚರಣೆ.

ಮಂಗಳೂರು: ಮಂಗಳೂರಿನ ಮಣ್ಣ ಗುಡ್ಡ,ಗಾಂಧಿ ನಗರ,ಗಾಂಧಿ ಪಾರ್ಕ್ ನಲ್ಲಿ ಇಂದು ಸಾಮರಸ್ಯ ಮಂಗಳೂರು ಸಂಸ್ಥೆಯ ವತಿಯಿಂದ ಮಹಾತ್ಮ ಗಾಂಧಿ ಪುತ್ತಳಿಗೆ ಹಾರಾರ್ಪಣೆ ಮಾಡುವ ಮೂಲಕ ಸಂಸ್ಥೆಯ ಅಧ್ಯಕ್ಷೆ ಮಂಜುಳಾ ನಾಯಕ್ ರವರ ನೇತೃತ್ವದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ,ಸಂಚಾಲಕರಾದ ಕೆ.ಅಶ್ರಫ್,ಮಾಜಿ ಉಪ ಪೌರ ರಾದ ಮೊಹಮ್ಮದ್ ಕುಂಜತ್ ಬೈಲ್, ಶಾಂತಿ ಪ್ರಕಾಶನ ಸಂಸ್ಥೆಯ ಮುಖ್ಯಸ್ಥರಾದ ಮೊಹಮ್ಮದ್ ಕುಂಞ , ಸಿ ಎಂ.ಮುಸ್ತಾಫಾ, ಮೊಯಿದಿನ್ ಮೋನು,ಸಿ.ಪಿ.ಐ.ಎಂ ನ ಸಂತೋಷ್ ಬಜಾಲ್, ಬಿ.ಕೆ.ಇಮ್ತಿಯಾಜ್, ಮತ್ತು ಇತರ ಸದಸ್ಯರು,ಗಾಂಧಿ ನಗರ ಶಾಲೆಯ ಅಧ್ಯಾಪಕರು, ವಿಧ್ಯಾರ್ಥಿಗಳು ಬಾಗವಹಿಸಿದ್ದರು.

ಮೊಹಮ್ಮದ್ ಕುಂಜತ್ ಬೈಲ್ ಸ್ವಾಗತಿಸಿ, ಮೊಹಮ್ಮದ್ ಕುಂಞ ರವರು ಮಹಾತ್ಮಾ ಗಾಂಧಿ ರವರ ಜೀವನದ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಕೆ.ಅಶ್ರಫ್ ರವರು ಮಾತನಾಡಿ ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಶೈಲಿಯ ಬಗ್ಗೆ ಹೇಳಿದರು. ಸಂತೋಷ್ ಬಜಾಲ್ ಧನ್ಯವಾದ ಸಮರ್ಪಿಸಿದರು.