ದೇಶಾದ್ಯಂತ ಆಚರಿಸಲ್ಪಡುವ ಬೆಳಕಿನ ಹಬ್ಬ ದೀಪಾವಳಿಯನ್ನು ಸೌಹಾರ್ದ ದೀಪಾವಳಿಯನ್ನಾಗಿ ಆಚರಿಸಬೇಕೆಂಬ ತೀರ್ಮಾನದ ಭಾಗವಾಗಿ ಸಮಾನ ಮನಸ್ಕರು ಮಂಗಳೂರು ಇದರ ಆಶ್ರಯದಲ್ಲಿ ಇಂದು(26-10-2022) ನಗರದ ಸ್ಟೇಟ್ ಬ್ಯಾಂಕ್ ಬಳಿಯಲ್ಲಿರುವ ಹ್ಯಾಮಿಲ್ಟನ್ ವ್ರತ್ತದಲ್ಲಿ ಸೌಹಾರ್ದ ದೀಪಾವಳಿಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು.
ಸರ್ವ ಜನತೆಯ ಮನೆ ಮನ ಬೆಳಗಿಸುವ ಹಬ್ಬವಾದ ದೀಪಾವಳಿಯು ಅಜ್ಞಾನ, ಅಂಧಶ್ರದ್ದೆ,ದ್ವೇಷ ತುಂಬಿದ ಕತ್ತಲೆಯನ್ನು ಹೋಗಲಾಡಿಸಿ, ವಿಜ್ಞಾನ, ವೈಜ್ಞಾನಿಕ ಮನೋಭಾವ,ಪ್ರೀತಿ ತುಂಬಿದ ಬೆಳಕನ್ನು ಮೂಡಿಸಬೇಕಾಗಿದೆ. ಆ ಮೂಲಕ ಸೌಹಾರ್ದತೆ ಮಾನವೀಯತೆ ಬೆಳಗಿಸಬೇಕೆಂಬ ಆಶಯದೊಂದಿಗೆ ಜರುಗಿದ ದೀಪಾವಳಿ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ,DYFI ನಾಯಕರಾದ ಮುನೀರ್ ಕಾಟಿಪಳ್ಳ,ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್,ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಝೀನತ್ ಶಂಸುದ್ದಿನ್ ಕಾರ್ಮಿಕ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್,ಸಮರ್ಥ್ ಭಟ್, ಯುವಜನ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ,ಮನೋಜ್ ವಾಮಂಜೂರು,ತಯ್ಯೂಬ್ ಬೆಂಗರೆ ವಾಹಾಬ್ ಕುದ್ರೋಳಿ ಇಮ್ರಾನ್ ಏ ಆರ್ ಸಿ ಎಂ ಮುಸ್ತಫ ನ್ಯಾಯವಾದಿ ಸರ್ಫರಾಜ್ ,ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜ, ಕ್ವೀನಿ ಪರ್ಸಿ ಆನಂದ್,ಶಾಹಿರಾ ಮರಿಯಂ, ಶಹನಾಜ್,ಸೀಮಾ,ಸಾಮಾಜಿಕ ಕಾರ್ಯಕರ್ತರಾದಉಮೇಶ್ ಶೆಟ್ಟಿ ಗ್ರಿಲ್ವಾಟ್ ಡಿ ಸಿಲ್ವಾ ಸಲುದರ್ ಡಿ ಸೋಜ ಆರಿಫ್ ಸಾಲಿ ಸತ್ತಾರ್,ದಿವಾಕರ ಬೋಳೂರು, ಕಾಸಿಂ,ಉದ್ಯಮಿಗಳಾದ ಮುತ್ತಲೀಫ್ ಮುಂತಾದವರು ಹಾಜರಿದ್ದರು.
ಖ್ಯಾತ ಹಾಡುಗಾರ್ತಿ ಮೇಘನಾ ಕುಂದಾಪುರರವರಿಂದ ಸೌಹಾರ್ದ ಹಾಡುಗಳು ಪ್ರಸ್ತುತಗೊಂಡವು.ಬಳಿಕ ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಲಾಯಿತು.
ಇನ್ನಷ್ಟು ವರದಿಗಳು
ದಿಗಂತ್ ನಾಪತ್ತೆ ಪ್ರಕರಣವನ್ನು ನಗದೀಕರಿಸಿ ಕೋಮು ಸಂಘರ್ಷಕ್ಕೆ ಯತ್ನ: ಭರತ್ ಶೆಟ್ಟಿ,ಪೂಂಜಾ ವಿರುದ್ಧ ಪ್ರಕರಣಕ್ಕೆ ಒತ್ತಾಯ.
ಮಂಗಳೂರಿನ ಮುಖ್ಯರಸ್ತೆಗೆ ವೀರ ರಾಣಿ ಅಬ್ಬಕ್ಕ ಹೆಸರು ನಾಮಕರಣ
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ಎಸ್ಡಿಪಿಐ ಪ್ರತಿಭಟನೆ