July 27, 2024

Vokkuta News

kannada news portal

ಕಾಣಿಯೂರು ಹಲ್ಲೆ ಘಟನೆ, ಅ.28ರ ಯುವಜನ ಪರಿಷತ್ ಜಾಥಾ ಮತ್ತು ಪ್ರತಿಭಟನಾ ಸಭೆ ಯಶಸ್ವಿ ಗೊಳಿಸಲು ಕರೆ,ಅಶ್ರಫ್ ಕಲ್ಲೇಗ.

ಪುತ್ತೂರು: ಪುತ್ತೂರು ಕಾಣಿಯೂರು ವಿನಲ್ಲಿ ಇತ್ತೀಚೆಗೆ ನಡೆದ ವರ್ತಕರ ಮೇಲಿನ ಮಾರಣಾಂತಿಕ ಹಲ್ಲೆಯ ಬಗ್ಗೆ ಆರೋಪಿತರ ವಿರುದ್ಧ ಕೊಲೆ ಪ್ರಯತ್ನ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಮತ್ತು ಹಲ್ಲೆಯನ್ನು ಖಂಡಿಸಿ ಪುತ್ತೂರು ಮುಸ್ಲಿಮ್ ಯುವ ಜನ ಪರಿಷತ್ ತಾರೀಕು 28 ರಂದು ಶುಕ್ರವಾರ ಅಪರಾಹ್ನ ಗಂಟೆ 3.00 ಕ್ಕೆ ಪುತ್ತೂರು ದರ್ಬೆ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಮತ್ತು ಸಭಾ ಕಾರ್ಯಕ್ರಮ ಪ್ರತಿಭಟನೆ ನಡೆಯಲಿದ್ದು ಯಶಸ್ವಿ ಗೊಳಿಸಬೇಕೆಂದು ಯುವಜನ ಪರಿಷತ್ ಅಧ್ಯಕ್ಷರಾದ ಅಶ್ರಫ್ ಕಲ್ಲೇಗ ಕರೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಇಂದು ಮುಸ್ಲಿಮ್ ಮುಖಂಡರಾದ ಎಂ.ಎಸ್.ಮೊಹಮ್ಮದ್, ಕಾಸಿಮ್ ಹಾಜಿ ಮಿತ್ತೂರು,ವಕೀಲರಾದ ನೂರುದ್ದೀನ್ ಸಾಲ್ಮರ,ಸಾಗರ್ ಇಬ್ರಾಹಿಮ್,ಅಲ್ತಾಫ್ ಘಟ್ಟನ್ಪಾಡಿ,ಬಶೀರ್ ಪರ್ಲಡ್ಕ,ಎಲ್.ಟಿ.ಅಬ್ದುಲ್ ರಝಾಕ್ ಹಾಜಿ,ನೌಶಾದ್ ಬೋಲ್ವಾರ್ ರವರು ಮತ್ತಿತರರು ಪುತ್ತೂರು ಸಹಾಯಕ ಪೊಲೀಸು ಅಧೀಕ್ಷಕರನ್ನು ಭೇಟಿ ಮಾಡಿ ಮುಂದಿನ ರ್ಯಾಲಿ ಮತ್ತು ಪ್ರತಿಭಟನಾ ಸಭೆಯ ಬಗ್ಗೆ ಚರ್ಚಿಸಿದರು.