November 19, 2024

Vokkuta News

kannada news portal

ಕಾಣಿಯೂರು ವರ್ತಕರ ಮೇಲಿನ ಸಂಘಪರಿವಾರದ ಹಲ್ಲೆ ಖಂಡಿಸಿ ಪುತ್ತೂರಿನಲ್ಲಿ ಯುವಜನ ಪರಿಷತ್ ಬೃಹತ್ ಪ್ರತಿಭಟನೆ.

ಪುತ್ತೂರು: ಇತ್ತೀಚೆಗೆ ಪುತ್ತೂರು,ಕಬಕ ಗ್ರಾಮದ ಕಾಣಿಯೂರು ಎಂಬಲ್ಲಿ ಹೊದಿಕೆ(ಬೆಡ್ ಶೀಟ್) ಮನೆ ಬಾಗಿಲು ಮಾರಾಟ ಕ್ಕೆ ಹೋದ ಇಬ್ಬರು ಮುಸ್ಲಿಮ್ ವರ್ತಕರು, ತಮ್ಮ ಬೆಡ್ ಶೀಟ್ ಮಾರಾಟ ಪ್ರಯತ್ನ ಮುಗಿಸಿ ಹಿಂತಿರುಗುವ ಸಂದರ್ಬದಲ್ಲಿ ಅರ್ಧ ದಾರಿಯಲ್ಲಿ ವರ್ತಕರ ವಾಹನವನ್ನು ಸುಮಾರು ಹದಿನೈದು ಮಂದಿಗಿಂತಲೂ ಅಧಿಕವಿರುವ ಸಂಘ ಪರಿವಾರದ ದುಷ್ಕರ್ಮಿ ಗುಂಪೊಂದು ಅಡ್ಡಹಾಕಿ ವಾಹನವನ್ನು ವಿವಿಧ ದಾರಿಗಳಲ್ಲಿ ಅಟ್ಟಾಡಿಸಿ,ತಮ್ಮ ರಿಕ್ಷಾ,ಬೈಕ್,ಇತ್ಯಾದಿಗಳನ್ನು ವಿವಿಧ ರಸ್ತೆಗಳಲ್ಲಿ ಅಡ್ಡ ನಿಲ್ಲಿಸಿ, ವರ್ತಕರನ್ನು ದಿಗ್ಬಂಧನ ಗೊಳಿಸಿ ಅವರು ಮುಸ್ಲಿಮರೇ ಎಂದು ಕೇಳಿ, ಅವರನ್ನು ದೊಣ್ಣೆ,ಕಲ್ಲು ಮತ್ತು ದೈಹಿಕವಾಗಿ , ಇತ್ಯಾದಿ ಆಯುಧಗಳಿಂದ ಹೊಡೆದು,ಹಲ್ಲೆ ನಡೆಸಿ,ನಿರಂತರ ಎರಡು ಗಂಟೆಗಳ ಕಾಲ ಮಾರಣಾಂತಿಕವಾಗಿ ಗಾಯ ಗೊಳಿಸಿ,ಮತಿ ತಪ್ಪುವ ಸ್ಥಿತಿಗೆ ತಂದು ಕೊನೆಗೆ ಜೀವ ಹೋಯಿತು ಎಂದು ಭಾವಿಸಿ ಬಿಟ್ಟು ಹೋದನಂತರ ಇತರರು ಗಾಯಾಳು ಸಂತ್ರಸ್ತರನ್ನು ಪುತ್ತೂರು ನಗರಕ್ಕೆ ತರಲಾಗಿ,ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಗೊಳಿಸಿ,ಹಾಲಿ ಚೇತರಿಸಿ ಕೊಳ್ಳುತ್ತಿರುವ ವರ್ತಕರ ಪ್ರಕರಣದ ಬಗ್ಗೆ,ಪೊಲೀಸರು ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲು ಒತ್ತಾಯಿಸಿ,ಹಲ್ಲೆಯನ್ನು ಖಂಡಿಸಿ ಇಂದು ದ.ಕ.ಜಿಲ್ಲಾ ಮುಸ್ಲಿಮ್ ಯುವ ಜನ ಪರಿಷತ್ ಪುತ್ತೂರಿನ ಸಹಾಯಕ ಆಯುಕ್ತರ ಕಚೇರಿ ಎದುರುಗಡೆ ಬೃಹತ್ ಪ್ರತಿಭಟನಾ ಸಭೆ ಹಮ್ಮಿ ಕೊಂಡಿತ್ತು.

ಪ್ರತಿಭಟನೆಯ ಮೊದಲು ಆಯೋಜಿಸಿದ್ದ ಕಾಲ್ನಡಿಗೆ ಜಾಥಾದ ಅನುಮತಿಯನ್ನು ಪೊಲೀಸರು ನೀಡಲು ನಿರಾಕರಿಸಿದ ಕಾರಣಕ್ಕೆ ಪ್ರತಿಭಟನೆಯು ಎಸ್ ಖಂಡನಾ ಸಭೆಗೆ ಸೀಮಿತವಾಗಿ ನಡೆಯಿತು.

ಸಭೆಯನ್ನು ಉದ್ದೇಶಿಸಿ,ನೂರುದ್ದೀನ್ ಸಾಲ್ಮರ ಕಿರು ಪರಿಚಯ ಮಾಡಿದ ನಂತರ,ಸಂಸ್ಥೆಯ ಪದಾಧಿಕಾರಿಯವರಿಂದ ಸ್ವಾಗತ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮೊಹಮ್ಮದ್ ರವರಿಂದ ಪ್ರಾಸ್ತಾವಿಕ ಮಾತು,ಆದನಂತರ, ಮುಸ್ಲಿಮ್ ಜಸ್ಟಿಸ್ ಫಾರಂ ಮುಖ್ಯಸ್ಥರಾದ ರಫೀಯುದ್ದೀನ್ ಕುದ್ರೋಳಿ,ಘಟನೆಯನ್ನು ಉದ್ದೇಶಿಸಿ ಪ್ರಮುಖ ಬಾಷನ ಮಾಡಿದರು, ನಂತರ ಅನೀಸ್ ಕೌಸರಿ, ಯಾಕೂಬ್ ಸಹದೀ,ಮಾಜಿ ಮೇಯರ್,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಅಧ್ಯಕ್ಷರಾದ ಕೆ.ಅಶ್ರಫ್, ಕಾಂಗ್ರೆಸ್ ಯುವ ನಾಯಕರಾದ ಸುಹೈಲ್ ಕಂದಕ್ ರವರು ಹಲ್ಲೆಯನ್ನು ಖಂಡಿಸಿ ಮಾತನಾಡಿದರು.ಕೊನೆಯಲ್ಲಿ ಮುಸ್ಲಿಮ್ ಯುವ ಜನ ಪರಿಷತ್ ಅಧ್ಯಕ್ಷರಾದ ಅಶ್ರಫ್ ಕಲ್ಲೆಗಾ ರವರು ಧನ್ಯವಾದ ಸಮರ್ಪಿಸಿದರು.

ಸಭೆಯ ನಂತರ ಸಂಘಟನೆಯು ಹಲ್ಲೆ ಸಂತ್ರಸ್ತರ ಪರ ನ್ಯಾಯ ಅಪೇಕ್ಷಿಸಿ,ವಿವಿಧ ಬೇಡಿಕೆ ಯನ್ನು ಮುಂದಿಟ್ಟು ನಿಯೋಗವು ಉಪ ವಿಭಾಗೀಯ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.

ಖಂಡನಾ ಸಭೆಯಲ್ಲಿ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಮಾತನಾಡಿ ಹಲ್ಲೆ ಸಂತ್ರಸ್ತರಿಗೆ ನ್ಯಾಯ ವಂಚಿತವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರ ಗೊಳಿಸಲಾಗುವುದು ಎಂದರು.