ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮತೀಯ ಆಧಾರಿತ ಸರಣಿ ಹತ್ಯೆ,ನಂತರದ ಬೆಳವಣಿಗೆ ಗಳಲ್ಲಿ ಸರಕಾರ ತಳೆದ ನಿಲುವು,ತಾರತಮ್ಯ,ಧರ್ಮಾಧಾರಿತ ಬಿಂಬನೆ ಇತ್ಯಾದಿ ವಿಷಯಗಳನ್ನು ಕೇಂದ್ರವಾಗಿ ರಿಸಿ,ಸರಕಾರದ ತಾರತಮ್ಯ ಮತ್ತು ಅನ್ಯಾಯದ ನಿಲುವುಗಳ ವಿರುದ್ಧ ಸೆಪ್ಟೆಂಬರ್ 20 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಭವನ ( ಪುರಭವನ) ದ ಎದುರಿಗೆ ಬೆಳಿಗ್ಗೆ ಘಂಟೆ 9.30 ರಿಂದ ಅಪರಾಹ್ನ 3.00 ಗಂಟೆ ವರೆಗೆ ದ.ಕ.ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ವತಿಯಿಂದ ಮೌನ ಧರಣಿ ನಡೆಯಲಿದೆ.
ಕ್ರಿಯೆಗೆ ಪ್ರತಿಕ್ರಿಯೆ ಹೆಸರಿನಲ್ಲಿ ನಡೆದ ಧರ್ಮಾಧಾರಿತ ಮೂರು ಕೊಲೆಗಳ ತನಿಖೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ನೀಡಬೇಕಾದ ಸಾಂತ್ವಾನ ಹಾಗೂ ಪರಿಹಾರ ವಿತರಣೆಯಲ್ಲಿ ಕಣ್ಣಿಗೆ ಕಾಣುವ ಬಹಿರಂಗ ತಾರತಮ್ಯ ನೀತಿಯನ್ನು ಖಂಡಿಸಿ,.ಆಶಾಯಗಳನ್ನು ಗಾಳಿಗೆ ತೂರಿ ಜಿಲ್ಲೆಯ ನಾಗರಿಕರ ಘನತೆ ಗೌರವ ಕ್ಕೆ ಚ್ಯುತಿ ತಂದ ಸರಕಾರದ ಅವಮಾನವೀಯ ನಡೆಯ ವಿರುದ್ಧ ನಡೆಯುವ ಮೌನ ಧರಣಿ ಪ್ರತಿಭಟನಾ ಕಾರ್ಯಕ್ರಮಕ್ಕೆ ಸರ್ವರೂ ಭಾಗವಹಿಸಬೇಕೆಂದು ಘಟಕ ಕರೆ ನೀಡಿದೆ.
ಈ ಮೌನ ಧರಣಿಯಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದು ಪತ್ರಿಕೆಗೆ ತಿಳಿಸಲಾಗಿದೆ.
ಇನ್ನಷ್ಟು ವರದಿಗಳು
ವಖ್ಫ್ ವಿವಾದ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರನ್ನು ಬೇಟಿಯಾದ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್ ನಿಯೋಗ
ಬ್ಯಾರಿ ಜನಾಂಗದವರು ಒಗ್ಗಟ್ಟಾಗಿ ಸವಲತ್ತುಗಳನ್ನು ಅಪೇಕ್ಷಿಸಬೇಕಿದೆ: ಸಮಾಲೋಚನಾ ಸಭೆಯಲ್ಲಿ ಸ್ಪೀಕರ್ ಯು.ಟಿ.ಕಾದರ್.
ಡ್ಯಾಮೇಜ್ ಪೊಲಿಟಿಕ್ಸ್ ನಿಂದ ಮಾತ್ರ ಮುಸ್ಲಿಮ್ ಪ್ರಾತಿನಿಧ್ಯ ಸಾಧ್ಯ: ಮು. ವಾಯ್ಸ್ ಆನ್ ಲೈನ್ ಸಂವಾದದಲ್ಲಿ ರಿಯಾಝ್ ಪರಂಗಿಪೇಟೆ ಅಭಿಮತ.