June 14, 2024

Vokkuta News

kannada news portal

ಕಾಣಿಯೂರು ಹಲ್ಲೆ ಸಂತ್ರಸ್ತರನ್ನು ಭೇಟಿ ಮಾಡಿದ ವಿ.ಪ. ಸದಸ್ಯ ಕೆ.ಅಬ್ದುಲ್ ಜಬ್ಬಾರ್

ಮಂಗಳೂರು: ಪುತ್ತೂರು ತಾಲೂಕಿನ ಕಾಣಿಯೂರ್ ನಲ್ಲಿ ಸಂಘಪರಿವಾರದವರಿಂದ ಗಂಭೀರ ಹಲ್ಲೆಗೊಳಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜವಳಿ ವ್ಯಾಪಾರಸ್ಥರಾದ ರಮೀಜ್ ಹಾಗೂ ರಫೀಕ್ ರವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರೂ ಆದ ಕೆ, ಅಬ್ದುಲ್ ಜಬ್ಬಾರ್ ರವರು ಭೇಟಿಯಾಗಿ ಯುವಕರ ಅರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.

ಈ ಸಂಧರ್ಭದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ. ಮೊಹಿಯುದ್ದೀನ್ ಬಾವ, ದಾವಣಗೆರೆ ವಖ್ಫ್ ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಸಿರಾಜುದ್ದಿನ್, ದ.ಕ. ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ. ಶಾಹುಲ್ ಹಮೀದ್ , ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಹಾರಿಸ್ ಬೈಕಂಪಾಡಿ, ಹಬೀಬ್ ಕಣ್ಣೂರ್, ಶಾಹುಲ್ ಹಮೀದ್ ಕದಿಕೆ, ಸಿರಾಜ್ ಬಜ್ಪೆ, ಶಮೀರ್ ಕಾಟಿಪಳ್ಳ, ಜೈನುದ್ದಿನ್ ಮುಕ್ಕ, ನಿಸಾರ್ ಕರಾವಳಿ ಹಾಗೂ ಆಸ್ಪತ್ರೆಯ ಮುಖ್ಯಸ್ಥರು ಉಪಸ್ಥಿತರಿದ್ದರು,