June 13, 2024

Vokkuta News

kannada news portal

ಸುರತ್ಕಲ್ ಟೋಲ್ ಧರಣಿ ಸ್ಥಳಕ್ಕೆ ಯು.ಟಿ.ಖಾದರ್ ಮತ್ತಿತರ ಪ್ರಮುಖರ ಭೇಟಿ,ಬೆಂಬಲ ಘೋಷಣೆ.

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ಯಲ್ಲಿರುವ ಬಹು ಚರ್ಚಿತ ಸುರತ್ಕಲ್ ಟೋಲ್ ತೆರವು ಆಗ್ರಹಿಸಿ ಆಹೋ ರಾತ್ರಿ ಧರಣಿ ಸ್ಥಳಕ್ಕೆ ಇಂದು ಮಂಗಳೂರು ವಿಧಾನ ಸಭಾ ಕ್ಷೇತ್ರ ಶಾಸಕರು,ಕರ್ನಾಟಕ ರಾಜ್ಯ ವಿರೋಧ ಪಕ್ಷದ ಉಪ ನಾಯಕರಾದ ಶ್ರೀ ಯು.ಟಿ ಖಾದರ್ ರವರು ಭೇಟಿ ಮಾಡಿ,ಹೋರಾಟ ಸಮಿತಿ ಮುಖ್ಯಸ್ಥರು ಮತ್ತು ಸಂಚಾಲಕರಾದ ಮುನೀರ್ ಕಾಟಿಪಳ್ಳ ರವರಲ್ಲಿ ಹೋರಾಟದ ಬಗ್ಗೆ ಚರ್ಚೆ ನಡೆಸಿದರು.

ಈ ಸಂಧರ್ಭದಲ್ಲಿ,ಶ್ರೀಮತಿ ಮಮತಾ ಗಟ್ಟಿ, ಸಮಿತಿ ಸಹ ಸಂಚಾಲಕರಾದ ದಿನೇಶ್ ಹೆಗ್ಡೆ ಉಳೆಪ್ಪಾಡಿ,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್,ಅಬ್ದುಲ್ ಜಲೀಲ್ ಕೃಷ್ಣಾಪುರ, ಸಿ.ಎಂ.ಮುಸ್ತಾಫಾ,ಮೊಹಮ್ಮದ್ ಹನೀಫ್.ಯು, ಮತ್ತಿತರರು ಉಪಸ್ಥಿತರಿದ್ದರು.

ಹೋರಾಟದ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಲಾಯಿತು.ಮತ್ತು ಹೋರಾಟದ ಪ್ರತಿ ಹಂತದಲ್ಲಿಯೂ ಸಮಿತಿಗೆ ಸಂಪೂರ್ಣ ಬೆಂಬಲಿಸುವ ಬಗ್ಗೆ ಹೇಳಿದರು.

ಈ ಮೊದಲು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷರಾದ ಶಾಹುಲ್ ಹಮೀದ್, ಕೋಶಾಧಿಕಾರಿ ಆದ ಮೊಹಮ್ಮದ್ ಬಪ್ಪಳಿಕೆ, ಪ್ರತಿಭಾ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.