July 27, 2024

Vokkuta News

kannada news portal

ರಾಯಿ ಬಸ್ಸು ಪ್ರಯಾಣಿಕ ಇಸಾಕ್ ಮೇಲೆ ನಿರ್ವಾಹಕ ಮತ್ತು ಸಂಘ ಪರಿವಾರ ದುಷ್ಕರ್ಮಿಗಳಿಂದ ಹಲ್ಲೆ : ಯುನಿವೆಫ್ ಕರ್ನಾಟಕ ಖಂಡನೆ.

ಮಂಗಳೂರು: ಮೂಡಬಿದ್ರೆ ರಸ್ತೆಯ ರಾಯಿ ಎಂಬಲ್ಲಿ ನಿನ್ನೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂಲಾರ ಪಟ್ನದ ಇಸಾಕ್ ಎಂಬ ವ್ಯಕ್ತಿಗೆ,ಆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ದುರ್ವರ್ತನೆ ತೋರಿದ ಎಂಬ ಆಪಾದಿಸಿ,ಬಸ್ಸಿನ ನಿರ್ವಾಹಕ ಬಸ್ಸಿನಿಂದ ಎಳೆದು ಹೊರ ಹಾಕಿ,ರಾಯಿ ಎಂಬಲ್ಲಿ ಇಸಾಕ್ ಎಂಬ ವ್ಯಕ್ತಿಯನ್ನು ಸಂಘ ಪರಿವಾರದ ಪುಂಡರ ಕೈಗೆ ಒಪ್ಪಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದು ತೀವ್ರ ಖಂಡನೀಯ. ಶಾಂತಿಗೆ ಹೆಸರಾದ, ಸುಶಿಕ್ಷಿತರು ಜೀವಿಸುತ್ತಿರುವ ,ಕೈಗಾರಿಕೆಗಳು ಸ್ಥಾಪನೆ ಗೊಳ್ಳುತ್ತೀರುವ, ಅಭಿವೃದ್ದಿ ಹೊಂದುತ್ತಿರುವ , ಸ್ಮಾರ್ಟ್ ಸಿಟಿ ಗೆ ಆಯ್ಕೆಯಾದಂತಹ ಜಿಲ್ಲೆಯಲ್ಲಿ ಸಮಾಜ ಘಾತುಕ ಶಕ್ತಿಗಳು ಇತ್ತೀಚಿನ ದಿನಗಳಲ್ಲಿ ವಿಜೃಂಭಿಸುತ್ತಿ ರುವುದು ಜಿಲ್ಲೆಗೆ ಮಾತ್ರವಲ್ಲ,ಇಡೀ ಕರ್ನಾಟಕದ ಅಭಿವೃದ್ಧಿಗೆ ಮಾರಕ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವ,ದ್ವೇಷವನ್ನು ಹರಡುವ ಕೋಮುವಾದಿ ಷಡ್ಯಂತ್ರಗಳು ಇಲ್ಲಿ ದಿನೇ ದಿನೇ ಹೆಚ್ಚುತ್ತಿದೆ.

ಆದುದರಿಂದ ಯುನಿವೆಫ್ ಕರ್ನಾಟಕ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ.ಚುನಾವಣಾ ವರ್ಷದಲ್ಲಿ ಈ ಘಟನೆ ನಡೆಯುತ್ತಿರುವುದು,ಕೇವಲ ಒಂದು ಕಡೆ ಮಾತ್ರವಾಗಿರದೆ,ಜಿಲ್ಲೆಯ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಮುಸ್ಲಿಮ್ ದ್ವೇಷವನ್ನು ಹರಡು ವಂತಹ ಷಡ್ಯಂತ್ರವನ್ನು ಇಲ್ಲಿ ನಡೆಸಲಾಗುತ್ತಿದೆ.

ಈ ಷಡ್ಯಂತ್ರವನ್ನು ವಿಫಲ ಗೊಳಿಸಬೇಕಾಗಿರುವುದು ಸಮಾನ ಮನಸ್ಕ ಶಕ್ತಿಗಳು ಮತ್ತು ವಿಚಾರ ಧಾರೆಗಳು ಮತ್ತು ರಾಜಕೀಯ ಪಕ್ಷಗಳು.ಮತ್ತು ಜಾತ್ಯಾತೀತ ಮನೋಭೂಮಿಕೆ ಹೊಂದಿರುವ ಎಲ್ಲ ಪಕ್ಷಗಳು ತಮ್ಮ ರಾಜಕೀಯ ಸಿದ್ದಿಗಳನ್ನು ನೋಡದೆ ಕರ್ನಾಟಕದ ಪಾರಂಪರಿಕ ವಾಗಿರುವಂತಹ,ಸಾಂಸ್ಕೃತಿಕ ವಿಚಾರಗಳನ್ನು ಎತ್ತಿ ಹಿಡಿಯುವಂತಹ ಒಂದು ಕಾರ್ಯ ಮಾಡಬೇಕಾಗಿದೆ.ಮುಸ್ಲಿಮ್ ದ್ವೇಷದ ಮೂಲಕ ಸಮಾಜ ಘಾತುಕ ಶಕ್ತಿಗಳು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಬೇಳೆ ಬೇಯಿಸಲು ಪ್ರಯತ್ನಿಸುವ ಈ ಘಟನೆಯನ್ನು ಯುನಿವೆಫ್ ಕರ್ಣಾಟಕ ತೀವ್ರವಾಗಿ ಖಂಡಿಸುತ್ತದೆ.

ಕೃತ್ಯದ ಎಲ್ಲ ಆರೋಪಿಗಳನ್ನು ಮತ್ತು ಇದರ ಹಿಂದಿರುವ ಷಡ್ಯಂತ್ರಕೋರರನ್ನು,ಒಳ ಸಂಚುಕೋರರನ್ನು ಬಂಧಿಸ ಬೇಕೆಂದು ಆಗ್ರಹಿಸುತ್ತದೆ.ಎಂದು ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷರು. ಯುನಿವೆಫ್ ಕರ್ನಾಟಕ
ಮಂಗಳೂರು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.